Sunday, December 21, 2025
HomeNationalRussian Woman : ಹಿಮಾಲಯದಲ್ಲಿ ಕಸ ಹೆಕ್ಕಿದ ರಷ್ಯನ್ ಮಹಿಳೆ, ಭಾರತೀಯರಿಗೆ ಸ್ವಚ್ಛತೆಯ ಪಾಠ ಹೇಳಿದ...

Russian Woman : ಹಿಮಾಲಯದಲ್ಲಿ ಕಸ ಹೆಕ್ಕಿದ ರಷ್ಯನ್ ಮಹಿಳೆ, ಭಾರತೀಯರಿಗೆ ಸ್ವಚ್ಛತೆಯ ಪಾಠ ಹೇಳಿದ ವಿಡಿಯೋ ವೈರಲ್!

ಭಾರತದ ಪ್ರವಾಸಿ ತಾಣಗಳು ಅಂದ್ರೆ ಅಲ್ಲಿ ಪ್ರಕೃತಿ ಸೌಂದರ್ಯದ ಜೊತೆಗೆ ಬಿದ್ದಿರುವ ಕಸದ ರಾಶಿಯೂ ಕಣ್ಣಿಗೆ ರಾಚುತ್ತದೆ. “ನಮ್ಮ ದೇಶ, ನಮ್ಮ ಹೆಮ್ಮೆ” ಎಂದು ಹೇಳಿಕೊಳ್ಳುವ ನಾವು, ನಮ್ಮದೇ ನೆಲವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಮಾತ್ರ ಎಡವತ್ತಿದ್ದೇವೆ. ಇದೀಗ ವಿದೇಶಿ ಮಹಿಳೆಯೊಬ್ಬರು ಹಿಮಾಲಯದಲ್ಲಿ ಬಿದ್ದಿದ್ದ ಕಸವನ್ನು ಹೆಕ್ಕುವ ಮೂಲಕ ಭಾರತೀಯರಿಗೆ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.

Russian woman trekking in the Himalayas collects plastic waste along the trail to promote cleanliness and environmental awareness in India

ಹೌದು, ಹಿಮಾಲಯಕ್ಕೆ ಚಾರಣಕ್ಕೆ (Trekking) ಬಂದಿದ್ದ ರಷ್ಯಾದ ಮಹಿಳೆಯೊಬ್ಬರು (Russian Woman), ಅಲ್ಲಿನ ಪರಿಸರವನ್ನು ಸ್ವಚ್ಛಗೊಳಿಸುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಭಾರತೀಯರು ತಲೆ ತಗ್ಗಿಸುವಂತೆ ಮಾಡಿದೆ.

Russian Woman – ಏನಿದು ಘಟನೆ?

ತಾನ್ಯಾ (Tanya) ಎಂಬ ರಷ್ಯನ್ ಯುವತಿ ತಮ್ಮ ಸ್ನೇಹಿತರೊಂದಿಗೆ ಉತ್ತರಾಖಂಡದ ಸುಂದರ ತಾಣವಾದ ‘ಚಂದ್ರಶಿಲಾ’ಗೆ ಟ್ರೆಕ್ಕಿಂಗ್‌ ಹೋಗಿದ್ದರು. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುವ ಭರದಲ್ಲಿ ಪ್ರವಾಸಿಗರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕವರ್, ಬಾಟಲಿಗಳನ್ನು ಬಿಸಾಡಿ ಹೋಗಿದ್ದರು. ಇದನ್ನು ಕಂಡ ತಾನ್ಯಾ ಸುಮ್ಮನೆ ಕೂರಲಿಲ್ಲ. ಕೈಯಲ್ಲೊಂದು ಚೀಲ ಹಿಡಿದು, ದಾರಿಯುದ್ದಕ್ಕೂ ಬಿದ್ದಿದ್ದ ಕಸವನ್ನು ಹೆಕ್ಕಲು ಆರಂಭಿಸಿದರು.

Russian Woman – ತಾನ್ಯಾ ಅವರ ಮನದ ಮಾತು

‘ತಾನ್ಯಾ ಇನ್ ಇಂಡಿಯಾ’ (tanya_in_india) ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಮಾತನಾಡಿರುವ ಅವರು, “ನನ್ನ ಹೆಸರು ತಾನ್ಯಾ, ನಾನು ರಷ್ಯಾದವಳು. ನಾನು ಇಂದು ಬೆಳಿಗ್ಗೆ ಚಂದ್ರಶಿಲಾಕ್ಕೆ ಚಾರಣ ಹೋಗಿದ್ದೆ. ಇದು ಅದ್ಭುತ ಸ್ಥಳ. ನಾನು ಭಾರತವನ್ನು ಮತ್ತು ಇಲ್ಲಿನ ಪ್ರಕೃತಿಯನ್ನು ತುಂಬಾನೇ ಪ್ರೀತಿಸುತ್ತೇನೆ. ಆದರೆ ಇಲ್ಲಿನ ಕಸ ನೋಡಿ ನನಗೆ ತುಂಬಾ ದುಃಖವಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದುವರಿದು, “ನಾನು ಪ್ರವಾಸ ಮಾಡುವಾಗ ದಾರಿಯಲ್ಲಿ ಸಿಗುವ ಕಸ ಹೆಕ್ಕುವ ಸಣ್ಣ ಕೆಲಸ ಮಾಡುತ್ತೇನೆ. ಎಲ್ಲವನ್ನೂ ನಾನೊಬ್ಬಳೇ ಸ್ವಚ್ಛಗೊಳಿಸಲು ಸಾಧ್ಯವಿಲ್ಲ ನಿಜ. ಆದರೆ ನಮ್ಮ ಕೈಲಾದ ಮಟ್ಟಿಗೆ ಪ್ರಕೃತಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು. ಹೀಗೆ ಮಾಡಿದರೆ ನಮ್ಮ ಪರಿಸರ ಉಳಿಯುತ್ತದೆ” ಎಂದು ಭಾರತೀಯರಿಗೆ ಕಿವಿಮಾತು ಹೇಳಿದ್ದಾರೆ.

Russian woman trekking in the Himalayas collects plastic waste along the trail to promote cleanliness and environmental awareness in India

Russian Woman – ನೆಟ್ಟಿಗರ ಪ್ರತಿಕ್ರಿಯೆ ಏನು?

ವಿದೇಶಿ ಮಹಿಳೆಯೊಬ್ಬರು ನಮ್ಮ ದೇಶದ ಕಸವನ್ನು ಎತ್ತುತ್ತಿರುವುದನ್ನು ಕಂಡು ನೆಟ್ಟಿಗರು ಮೆಚ್ಚುಗೆಯ ಜೊತೆಗೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here

ನಮ್ಮ ಜವಾಬ್ದಾರಿ ಏನು? ಅತಿಥಿ ದೇವೋ ಭವ ಎನ್ನುವ ನಾವು, ಅತಿಥಿಗಳಿಂದಲೇ ಸ್ವಚ್ಛತೆಯ ಪಾಠ ಕಲಿಯುವ ಪರಿಸ್ಥಿತಿ ಬಂದಿರುವುದು ವಿಪರ್ಯಾಸ. ಮುಂದಿನ ಬಾರಿಯಾದರೂ ಪ್ರವಾಸಿ ತಾಣಗಳಿಗೆ ಹೋದಾಗ ಕಸವನ್ನು ಡಸ್ಟ್‌ ಬಿನ್‌ ಗೇ ಹಾಕೋಣ, ನಮ್ಮ ಪರಿಸರವನ್ನು ನಾವೇ ಕಾಪಾಡಿಕೊಳ್ಳೋಣ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular