ಭಾರತೀಯ ವರಬೇಕು ಎಂದು ಪೋಸ್ಟರ್ ಹಿಡಿದು ನಿಂತ ರಷ್ಯಾ ಮೂಲದ ಯುವತಿ, ವೈರಲ್ ಆದ ಪೋಸ್ಟ್…..!

ಇತ್ತೀಚಿಗೆ ಮದುವೆಗಾಗಿ ವರ ಅಥವಾ ವಧು ಬೇಕಾಗಿದೆ ಎಂಬ ಜಾಹಿರಾತುಗಳು ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚಾಗಿ ಕಾಣಿಸುತ್ತಿರುತ್ತದೆ. ಜೊತೆಗೆ ಕೆಲವೊಂದು ಮ್ಯಾಟ್ರಿಮೋನಿ ಕಂಪನಿಗಳ ಮೂಲಕ ಸಹ ವಧು ವರರ ಆಯ್ಕೆ ನಡೆಯುತ್ತದೆ. ಅಷ್ಟೇಅಲ್ಲದೇ ಸೋಷಿಯಲ್ ಮಿಡಿಯಾವನ್ನು ಸಹ ಬಳಸಿಕೊಂಡು ವಧು ವರರ ಆಯ್ಕೆ ನಡೆಯುತ್ತಿರುತ್ತದೆ. ಅಂತಹುದೇ ಸುದ್ದಿಯೊಂದು ಇಲ್ಲಿದೆ. ರಷ್ಯಾ ಮೂಲದ ಯುವತಿಯೊಬ್ಬಳು ಭಾರತೀಯ ಮೂಲದ ವರ ಬೇಕೆಂದು ಇನ್ಸ್ಟಾಗ್ರಾಂ ಮೂಲಕ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

russain girl marriage post 1

ರಷ್ಯಾ ಮೂಲದ ಯುವತಿ ದಿನಾರಾ ಎಂಬಾಕೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿರುತ್ತಾಳೆ. ವಿವಿಧ ರೀತಿಯ ಪೋಸ್ಟ್ ಗಳ ಮೂಲಕ ಎಲ್ಲರ ಗಮನ ಸೆಳೆಯುವ ಕೆಲಸ ಮಾಡುತ್ತಿರುತ್ತಾಳೆ. ಇದೀಗ ಆಕೆ ಹಂಚಿಕೊಂಡ ಹೊಸ ಪೋಸ್ಟ್ ಮಾತ್ರ ಭಾರಿ ಸದ್ದು ಮಾಡುತ್ತಿದೆ. ಸಂಪ್ರದಾಯಬದ್ದವಾಗಿ ಸೀರೆಯನ್ನುಟ್ಟು, ಮಾಲ್ ಒಂದ ಮುಂದೆ ಪೋಸ್ಟರ್‍ ಹಿಡಿದು ನಿಂತಿದ್ದಾಳೆ. ಈ ಪೋಸ್ಟರ್‍ ನಲ್ಲಿ ಭಾರತೀಯ ವರ ಬೇಕು ಎಂದು, ಭಾರತೀಯ ವರನಿಗಾಗಿ ಹುಡುಕುತ್ತಿರುವುದಾಗಿ ಬರೆದುಕೊಂಡಿದ್ದಾಳೆ. ಇನ್ನೂ ಈ ಪೋಸ್ಟ್ ಆಕೆ ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗುತ್ತಿದೆ. ಕಡಿಮೆ ಸಮಯದಲ್ಲೇ ಲಕ್ಷಾಂತರ ವ್ಯೂವ್ಸ್ ಕಂಡಿದೆ.

ವಿಡಿಯೋ ನೋಡಲು ಲಿಂಕ್ ಓಪೆನ್ ಮಾಡಿ: https://www.instagram.com/p/C7lXAS0q8-Q/

ಇನ್ನೂ ರಷ್ಯಾ ಮೂಲದ ದಿನಾರಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿದ್ದು, ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾಳೆ. ಈ ನಿಟ್ಟಿನಲ್ಲಿ ಆಕೆ ಹಂಚಿಕೊಂಡ ವರ ಬೇಕು ಎಂಬ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ. ಇನ್ನೂ ಇತ್ತೀಚಿಗಷ್ಟೆ ದಿನಾರಾ ಭಾರತದ ಮಾಲ್ ವೊಂದರ ಹೊರಗೆ ತಾನು ಮದುವೆಯಾಗಲು ಭಾರತೀಯ ವರಬೇಕು ಎಂದು ಪೋಸ್ಟ್ ಹಿಡಿದು ನಿಂತಿದ್ದಾಳೆ. ಈ ವಿಡಿಯೋವನ್ನು ಸ್ವತಃ ದಿನಾರಾ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಕಳೆದ ಮೇ.31 ರಂದು ಈ ಪೋಸ್ಟ್ ಹಂಚಿಕೊಂಡಿದ್ದು, ಮೂರು ದಿನಗಳಲ್ಲೇ 70 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಜೊತೆಗೆ 82 ಸಾವಿರಕ್ಕೂ ಹೆಚ್ಚು ನೆಟ್ಟಿಗರು ಮೆಚ್ಚುಗೆ ನೀಡಿದ್ದಾರೆ.

Leave a Comment

Your email address will not be published. Required fields are marked *

Scroll to Top