ಅನೇಕ ವಿದ್ಯಾವಂತರಿಗೆ ರೈಲ್ವೇ ಇಲಾಖೆಯಲ್ಲಿ ಉದ್ಯೋಗ (RRB Job Alert) ಮಾಡುವ ಬಯಕೆ ಇರುತ್ತದೆ. ಅಂತಹ ವ್ಯಕ್ತಿಗಳಿಗೆ ಭಾರತೀಯ ರೈಲ್ವೇ ನೇಮಕಾತಿ ಸಮಿತಿ ಗುಡ್ ನ್ಯೂಸ್ ಕೊಟ್ಟಿದೆ. ಪದವಿ ಹಾಗೂ ಪದವಿ ಪೂರ್ವ ಅರ್ಹ ಅಭ್ಯರ್ಥಿಗಳಿಗಾಗಿ RRB ಮಹತ್ವದ ಅಧಿಸೂಚನೆ ಹೊರಡಿಸಿದ್ದು, 11558 ಹುದ್ದೆಗಳಿಗೆ ನೇಮಕಾತಿ (RRB Job Alert) ಪ್ರಕ್ರಿಯೆ ನಡೆಯಲಿದೆ. ಸೆ.14 ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಅಧಿಸೂಚನೆಯ ವಿವರಗಳನ್ನು ಈ ಕೆಳಗೆ ತಿಳಿಸಲಾಗಿದೆ.
ಭಾರತೀಯ ರೈಲ್ವೇ ನೇಮಕಾತಿ ಸಮಿತಿ 11558 ಹುದ್ದೆಗಳಿಗೆ ಶಾರ್ಟ್ ನೊಟಿಫಿಕೇಷನ್ (RRB Job Alert) ಹೊರಡಿಸಿದೆ. ಈ ಹುದ್ದೆಗಳಿಗೆ ಸೆ.14 ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 18 ರಿಂದ 33 ವರ್ಷದೊಳಗಿನ ಪದವಿ ಹಾಗೂ ಪದವಿ ಪೂರ್ವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಅಧಿಸೂಚನೆ ಸಂಪೂರ್ಣ ವಿವರಗಳು ಸೆ.10 ರಂದು (RRB Job Alert)ಹೊರಡಿಸಲಾಗುತ್ತದೆ ಎಂದು ತಿಳಿದುಬಂದಿದೆ. ಪಿಯುಸಿ(+ 2 ಸ್ಟೇಜ್) ಹಾಗೂ ಪದವಿ ಪಾಸ್ ಆದವರು ಈ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಪದವಿ ವಿಭಾಗದಲ್ಲಿ ಅರ್ಜಿ (RRB Job Alert)ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿ 18 ರಿಂದ 30 ವರ್ಷಕ್ಕೆ ನಿಗದಿಪಡಿಸಲಾಗಿದೆ. ಇನ್ನು ಪದವಿ ವಿಭಾಗದಲ್ಲಿ ಲಭ್ಯವಿರುವ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 18 ವರ್ಷದಿಂದ 33 ವರ್ಷಕ್ಕೆ ಸೀಮಿತಗೊಳಿಸಲಾಗಿದೆ.
ಇನ್ನೂ ಆಯ್ಕೆ ಪ್ರಕ್ರಿಯೆಯ ಬಗ್ಗೆ ಹೇಳುವುದಾದರೇ, (RRB Job Alert)ಮೊದಲ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ಎರಡನೇ ಹಂತದ ಕೌಶಲ್ಯ ಪರೀಕ್ಷೆ, ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಗಳ ಮೂಲಕ ನೇಮಕಾತಿ ನಡೆಯಲಿದೆ. ಆಸಕ್ತರು ಹಾಗೂ ಅರ್ಹರು ಅಧಿಕೃತ https://www.rrbbnc.gov.in/ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. (RRB Job Alert)ಸೆ.10 ರಂದು ಸಂಪೂರ್ಣ ಅಧಿಸೂಚನೆ ಹೊರಡಿಸಲಾಗುತ್ತದೆ.
(RRB Job Alert)ಪದವಿ ಪಾಸ್ ಆದವರಿಗೆ ಇರುವ ಖಾಲಿ ಹುದ್ದೆ: ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್‌ವೈಸರ್, ಸ್ಟೇಶನ್ ಮಾಸ್ಟರ್, ಗೂಡ್ಸ್ ಟ್ರೈನ್ ಮ್ಯಾನೇಜರ್, ಜ್ಯೂನಿಯರ್ ಅಕೌಂಟೆಂಟ್ ಕಮ್ ಅಸಿಸ್ಟೆಂಟ್ ಟೈಪಿಸ್ಟ್, ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳು ಖಾಲಿಯಿದೆ.
(RRB Job Alert) ಪದವಿ ಪೂರ್ವ ಅಭ್ಯರ್ಥಿಗಳಿಗೆ ಹುದ್ದೆ ವಿವರ: ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್, ಜ್ಯೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ಟ್ರೈನ್ಸ್ ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.