Saturday, December 20, 2025
HomeNationalVideo : ಹಾವಿನ ಬಾಯಿಗೆ ಬಾಯಿ ಇಟ್ಟು ಉಸಿರು ನೀಡಿದ ರಕ್ಷಕ! ಸತ್ತೇ ಹೋಯ್ತು ಅಂದುಕೊಂಡಿದ್ದ...

Video : ಹಾವಿನ ಬಾಯಿಗೆ ಬಾಯಿ ಇಟ್ಟು ಉಸಿರು ನೀಡಿದ ರಕ್ಷಕ! ಸತ್ತೇ ಹೋಯ್ತು ಅಂದುಕೊಂಡಿದ್ದ ಹಾವಿಗೆ ಮರುಜೀವ, ವಿಡಿಯೋ ನೋಡಿ

ಹಾವು (Snake) ಅಂದ ತಕ್ಷಣ ಎಂಥವರೂ ಒಂದು ಕ್ಷಣ ಬೆಚ್ಚಿ ಬೀಳ್ತಾರೆ. ಕೈಯಲ್ಲಿ ದೊಣ್ಣೆ ಇದ್ರೆ ಸಾಕು, ಅದನ್ನ ಕೊಲ್ಲೋವರೆಗೂ ಬಿಡಲ್ಲ. ಆದ್ರೆ, ಇಲ್ಲೊಬ್ಬರು ಪ್ರಾಣಾಪಾಯದಲ್ಲಿದ್ದ ಹಾವಿಗೆ ಸ್ವತಃ ತಮ್ಮ ಬಾಯಿಯಿಂದಲೇ ಉಸಿರು ನೀಡಿ (CPR), ಅದಕ್ಕೆ ಮರುಜೀವ ನೀಡಿದ್ದಾರೆ. ಗುಜರಾತ್‌ನಲ್ಲಿ ನಡೆದ ಈ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಈ ವ್ಯಕ್ತಿಯ ಸಾಹಸಕ್ಕೆ ನೆಟ್ಟಿಗರು “ನೀನು ದೇವ್ರು ಸಾಮಿ” ಅಂತ ಕೈ ಮುಗಿತಿದ್ದಾರೆ. ಈ ರೋಚಕ ಘಟನೆಯ ಸಂಪೂರ್ಣ ವಿವರ ಇಲ್ಲಿದೆ ನೋಡಿ.

Wildlife rescuer Mukesh Vayad giving CPR to an unconscious Indian Rat Snake after electric shock in Gujarat - Video

Video – ಕರೆಂಟ್ ಶಾಕ್ ಹೊಡೆದು ಪ್ರಜ್ಞೆ ತಪ್ಪಿದ್ದ ಹಾವು

ಗುಜರಾತ್‌ನ ವಲ್ಸಾದ್ (Valsad) ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆಹಾರ ಅರಸುತ್ತಾ ನಾಡಿಗೆ ಬಂದಿದ್ದ ಹಾವೊಂದು ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ (Electric Shock) ಪ್ರಜ್ಞೆ ತಪ್ಪಿ ಬಿದ್ದಿತ್ತು. ಹಾವು ಸತ್ತೇ ಹೋಯ್ತು ಅಂತ ಎಲ್ಲರೂ ಅಂದುಕೊಂಡಿದ್ರು. ಆದರೆ, ವಿಷಯ ತಿಳಿದು ಸ್ಥಳಕ್ಕೆ ಬಂದ ವನ್ಯಜೀವಿ ರಕ್ಷಕ ಮುಖೇಶ್ ವಾಯದ್ (Mukesh Vayad), ಹಾವನ್ನ ಪರೀಕ್ಷಿಸಿದ್ರು. ಅದರಲ್ಲಿ ಯಾವುದೇ ಚಲನೆ ಇರಲಿಲ್ಲ. ತಕ್ಷಣವೇ ಸಮಯ ವ್ಯರ್ಥ ಮಾಡದೆ, ಹಾವಿನ ಬಾಯಿಗೆ ತಮ್ಮ ಬಾಯಿ ಇಟ್ಟು ಸಿಪಿಆರ್ (CPR) ಮಾಡಲು ಶುರು ಮಾಡಿದ್ರು.

Video – ಪವಾಡದಂತೆ ಬದುಕಿತು ಮೂಕ ಪ್ರಾಣಿ!

ಮುಖೇಶ್ ಅವರು ಹಾವಿನ ಬಾಯಿಯ ಮೂಲಕ ಗಾಳಿ ಊದಿದ ಸ್ವಲ್ಪ ಸಮಯದಲ್ಲೇ ಪವಾಡ ನಡೆದಿದೆ. ನಿರ್ಜೀವದಂತೆ ಬಿದ್ದಿದ್ದ ಹಾವಿನಲ್ಲಿ ನಿಧಾನವಾಗಿ ಚಲನೆ ಕಾಣಿಸಿಕೊಂಡಿದೆ. ಹಾವು ಉಸಿರಾಡಲು ಶುರು ಮಾಡಿದ ತಕ್ಷಣ, ಮುಖೇಶ್ ಅದನ್ನ ಸುರಕ್ಷಿತವಾಗಿ ಅಲ್ಲಿನ ಪೊದೆಗಳ ಕಡೆಗೆ ಬಿಟ್ಟಿದ್ದಾರೆ. ಹಾವು ಸರೀ ಸರಿದು ಕಾಡಿನೊಳಗೆ ಸೇರಿಕೊಂಡಿದೆ. Read this also : ಹೃದಯ ವಿದ್ರಾವಕ ದೃಶ್ಯ, ಸಂಗಾತಿಯ ಅಗಲಿಕೆಗೆ ಕಣ್ಣೀರಿಟ್ಟ ಹೆಣ್ಣು ಹಾವು – ವಿಡಿಯೋ ವೈರಲ್‌

Video – ವೈರಲ್ ಆಯ್ತು ವಿಡಿಯೋ

ಸದ್ಯ ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ಧೂಳೆಬ್ಬಿಸುತ್ತಿದೆ. ವಿಷದ ಹಾವೇ ಇರಲಿ ಅಥವಾ ವಿಷ ರಹಿತ ಹಾವೇ ಇರಲಿ, ಪ್ರಾಣಿಗಳ ಮೇಲೆ ಈ ವ್ಯಕ್ತಿ ತೋರಿದ ಪ್ರೀತಿ ಕಂಡು ಜನ ಫಿದಾ ಆಗಿದ್ದಾರೆ. “ನಿಜವಾದ ಮಾನವೀಯತೆ ಅಂದ್ರೆ ಇದೇ ಅಲ್ವಾ?” ಅಂತ ಕಾಮೆಂಟ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

Wildlife rescuer Mukesh Vayad giving CPR to an unconscious Indian Rat Snake after electric shock in Gujarat - Video

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಯಾವ ಜಾತಿಯ ಹಾವು ಇದು?

ಇಲ್ಲಿ ಪ್ರಾಣಾಪಾಯದಿಂದ ಪಾರಾದ ಹಾವನ್ನು ಇಂಡಿಯನ್ ರಾಟ್ ಸ್ನೇಕ್ (Indian Rat Snake) ಅಥವಾ ಕನ್ನಡದಲ್ಲಿ ಕೆರೆ ಹಾವು ಎಂದು ಕರೆಯುತ್ತಾರೆ. ಇದು ನೋಡಲು ನಾಗರಹಾವಿನಂತೆಯೇ ವೇಗವಾಗಿ ಚಲಿಸುತ್ತದೆ, ಹೀಗಾಗಿ ಜನ ಇದನ್ನ ನೋಡಿ ವಿಷದ ಹಾವು ಎಂದು ಭಯಪಡುತ್ತಾರೆ. ಆದರೆ ತಜ್ಞರ ಪ್ರಕಾರ, ಈ ಹಾವಿಗೆ ವಿಷ ಇರುವುದಿಲ್ಲ. ಇವು ಹೆಚ್ಚಾಗಿ ರೈತರ ಹೊಲಗಳಲ್ಲಿ ಮತ್ತು ಮನೆಗಳ ಅಕ್ಕಪಕ್ಕ ಎಲಿಗಳನ್ನು ಹಿಡಿದು ತಿನ್ನುತ್ತಾ ರೈತಮಿತ್ರನಾಗಿ ಬದುಕುತ್ತವೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular