Reels: ಬಾವಿಯ ಅಂಚಿನಲ್ಲಿ ಮಗುವನ್ನು ಕೈಯಲ್ಲಿ ಹಿಡಿದು ರೀಲ್ಸ್ ಮಾಡಿದ ರೀಲ್ಸ್ ಹುಚ್ಚಿ ತಾಯಿ, ಫೇಮಸ್ ಆಗೋಕೆ ಹೀಗೆಲ್ಲಾ ಮಾಡ್ಬೇಕಾ?

ಸೋಷಿಯಲ್ ಮಿಡಿಯಾ ಖಾತೆಗಳನ್ನು ಓಪೆನ್ ಮಾಡಿದ್ರೆ ಸಾಕು ರೀಲ್ಸ್, (Reels) ರೀಲ್ಸ್, ರೀಲ್ಸ್ ಎಲ್ಲಿ ನೋಡಿದರೂ ರೀಲ್ಸ್. ರೀಲ್ಸ್ ಮಾಡುವ ಮೂಲಕ ಫೇಮಸ್ ಆಗಿ ಸಂಪಾದನೆ ಮಾಡುವ ಉದ್ದೇಶದಿಂದ ಅನೇಕರು ರೀಲ್ಸ್ ಮಾಡುತ್ತಾರೆ. ಆದರೆ ಕೆಲವರು ಅತಿರೇಖದ ವರ್ತನೆ ಮಾಡುತ್ತಾರೆ. ರೀಲ್ಸ್ ಮಾಡಲು ಪ್ರಾಣಗಳನ್ನೆ ಕಳೆದುಕೊಂಡ ಉದಾಹರಣೆಗಳನ್ನೂ ಸಹ ನೋಡಿದ್ದೇವೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ ಆಗುತ್ತಿದೆ. ಮಹಿಳೆಯೊಬ್ಬಳು ರೀಲ್ಸ್ (Reels)ಮಾಡಲು ನೀರಿನ ಬಾವಿಯ ಅಂಚಿನಲ್ಲಿ ಕುಳಿತಿದಿದ್ದಾಳೆ. ಆದರೆ ಆಕೆ ಕೈಯಲ್ಲಿ ಪುಟ್ಟ ಮಗುವನ್ನು ಹಿಡಿದು ರೀಲ್ಸ್ (Reels) ಮಾಡಿದ್ದು ಅನೇಕರ ಕೆಂಗಣ್ಣಿಗೆ ಕಾರಣವಾಗಿದೆ. ಫೇಮಸ್ ಆಗೋಕೆ ಹೀಗೆಲ್ಲಾ ಮಾಡ್ಬೇಕಾ ಎಂದು ನೆಟ್ಟಿಗರು ಆಕ್ರೋಷ ಹೊರಹಾಕುತ್ತಿದ್ದಾರೆ.

reels with kid on open well 0

ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗಲು ಅನೇಕರು ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡುವಂತಹ ರೀಲ್ಸ್ ಗಳನ್ನು ಮಾಡುತ್ತಾರೆ. ತಮ್ಮ ಪ್ರಾಣಕ್ಕೆ ಕುತ್ತು ಬರುವಂತಹ ರೀಲ್ಸ್ (Reels)ಗಳನ್ನು ಮಾಡುತ್ತಿರುತ್ತಾರೆ. ಅನೇಕರು ಈ ಕಾರಣದಿಂದ ಮೃತಪಟ್ಟಿದ್ದಂತಹ ಉದಾಹರಣೆಗಳೂ ಸಹ ಇದೆ. ಇದೀಗ ಮಹಿಳೆಯೊಬ್ಬಳು ರೀಲ್ಸ್ ಮಾಡಲು ಹೋಗಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರೀಲ್ಸ್ ಮಾಡಿ ಹೆಚ್ಚು ವ್ಯೂವ್ಸ್ ಗಳಿಸಲು ತೆರೆದ ಬಾವಿಯ ಅಂಚಿನಲ್ಲಿ ಮಗುವನ್ನು ಕೈಯಲ್ಲಿ ಹಿಡಿದು ಅಪಾಯಕಾರಿ ರೀಲ್ಸ್ (Reels) ಮಾಡಿದ್ದಾಳೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ತಾನು ರೀಲ್ಸ್ (Reels) ಮಾಡಿ ಫೇಮಸ್ ಆಗಲು ಮಗುವನ್ನು ಅಪಾಯಕಾರಿ ಪ್ರದೇಶದಲ್ಲಿ ಇಟ್ಟುಕೊಂಡಿದ್ದು ಸರಿಯಲ್ಲ ಎಂದು ನೆಟ್ಟಿಗರು ಪುಲ್ ಗರಂ ಆಗಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: https://x.com/RawAndRealMan/status/1836284504031351123

ಇನ್ನೂ ಮಗುವಿನೊಂದಿಗೆ ಅಪಾಯಕಾರಿ ಪ್ರದೇಶದಲ್ಲಿ ಕುಳಿತು ರೀಲ್ಸ್ ಮಾಡಿದ ಮಹಿಳೆಯ ವಿಡಿಯೋ ಕಳೆದ ಸೆ.18 ರಂದು ಹಂಚಿಕೊಳ್ಳಲಾಗಿದೆ. RawAndRealMan ಎಂಬ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗಿದೆ. ಜೊತೆಗೆ ಮಹಿಳೆಯ ವಿರುದ್ದ ಅನೇಕರು ಕಿಡಿಕಾರಿದ್ದಾರೆ. ಆದಷ್ಟು ಶೀಘ್ರ ಈ ಮಹಿಳೆಯ ವಿರುದ್ದ ಕ್ರಮ ತೆಗೆದುಕೊಳ್ಳಬೇಕು, ಈಕೆಗೆ ಮತಿಭ್ರಮಣೆಯಾಗಿರಬೇಕು. ಹುಚ್ಚಾಸ್ಪತ್ರೆಗೆ ಸೇರಿಸಿ ಎಂತಲೂ, ಇಂತಹ ರೀಲ್ಸ್ ಹುಚ್ಚಿಯರಿಗೆ ಯಾವಾಗ ಬುದ್ದಿ ಬರುತ್ತದೆಯೋ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

Leave a Comment

Your email address will not be published. Required fields are marked *

Scroll to Top