RCB vs PBKS – ಮಳೆಯಿಂದ ಪಂದ್ಯ ರದ್ದಾದರೆ ಯಾವ ತಂಡಕ್ಕೆ ಲಾಭ? ಕಟ್-ಆಫ್ ಸಮಯ ತಿಳಿಯಿರಿ..!

RCB vs PBKS – ಐಪಿಎಲ್ 2025 ರ 34 ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲು ನಿಗದಿಯಾಗಿದೆ. ಆದರೆ, ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪಂದ್ಯದ ಟಾಸ್ ಕೂಡಾ ವಿಳಂಬವಾಗಿದೆ. ನಿಗದಿತ ವೇಳಾಪಟ್ಟಿಯ ಪ್ರಕಾರ ಸಂಜೆ 7 ಗಂಟೆಗೆ ಟಾಸ್ ಮತ್ತು 7:30 ಕ್ಕೆ ಪಂದ್ಯ ಪ್ರಾರಂಭವಾಗಬೇಕಿತ್ತು. ಮಳೆಯ ಅಬ್ಬರ ಹೀಗೆ ಮುಂದುವರೆದರೆ ಪಂದ್ಯ ರದ್ದಾಗುವ ಸಾಧ್ಯತೆ ಇದೆ. ಒಂದು ವೇಳೆ ಪಂದ್ಯ ರದ್ದಾದರೆ, ಯಾವ ತಂಡಕ್ಕೆ ಹೆಚ್ಚು ಲಾಭವಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಇದರ ಜೊತೆಗೆ ಪಂದ್ಯ ಆರಂಭಕ್ಕೆ ಕಟ್-ಆಫ್ ಸಮಯ (cut-off time) ಎಷ್ಟು ಎಂಬ ಪ್ರಶ್ನೆಯೂ ಮೂಡಿದೆ.

RCB vs PBKS IPL 2025 Match Rain Delay Update at Chinnaswamy Stadium

RCB vs PBKS – ಪಂದ್ಯ ಆರಂಭಕ್ಕೆ ಕಟ್-ಆಫ್ ಸಮಯ ಎಷ್ಟು?

ಐಪಿಎಲ್ ನಿಯಮಗಳ ಪ್ರಕಾರ, ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯುಂಟಾದರೆ ಟಾಸ್ ನಡೆಸಲು ಗರಿಷ್ಠ ಸಮಯ ರಾತ್ರಿ 10:41 ನಿಗದಿಪಡಿಸಲಾಗಿದೆ. ಒಂದು ವೇಳೆ ಈ ಸಮಯದೊಳಗೆ ಟಾಸ್ ನಡೆದರೆ, ಪಂದ್ಯವು ರಾತ್ರಿ 10:56 ರೊಳಗೆ ಆರಂಭವಾಗಬೇಕು. ಚಿನ್ನಸ್ವಾಮಿ ಕ್ರೀಡಾಂಗಣವು ಅತ್ಯಾಧುನಿಕ ಒಳಚರಂಡಿ ವ್ಯವಸ್ಥೆಯನ್ನು ಹೊಂದಿರುವುದರಿಂದ ಮಳೆ ನಿಂತ ತಕ್ಷಣ ಕೇವಲ 30 ನಿಮಿಷಗಳಲ್ಲಿ ಪಂದ್ಯವನ್ನು ಪುನರಾರಂಭಿಸುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ, ಪಂದ್ಯ ನಡೆಯುವ ಸಾಧ್ಯತೆ ಇನ್ನೂ ಇದೆ. ಆದರೆ, ಮಳೆರಾಯನ ಕೃಪೆ ಇರಬೇಕಷ್ಟೆ.

RCB vs PBKS – ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ!

ಒಂದು ವೇಳೆ ಕಟ್-ಆಫ್ ಸಮಯದೊಳಗೆ ಪಂದ್ಯವನ್ನು ಆರಂಭಿಸಲು ಸಾಧ್ಯವಾಗದಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ನಿಯಮಗಳ ಪ್ರಕಾರ, ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಉಭಯ ತಂಡಗಳು ಕನಿಷ್ಠ ಐದು ಓವರ್ಗಳನ್ನಾದರೂ ಆಡಬೇಕು. ಅದು ಸಾಧ್ಯವಾಗದಿದ್ದಲ್ಲಿ, ಪಂದ್ಯವನ್ನು ಡ್ರಾ ಎಂದು ಪರಿಗಣಿಸಲಾಗುತ್ತದೆ ಮತ್ತು ಎರಡೂ ತಂಡಗಳಿಗೆ ತಲಾ ಒಂದು ಅಂಕವನ್ನು ನೀಡಲಾಗುತ್ತದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಲಾ 6 ಪಂದ್ಯಗಳನ್ನು ಆಡಿದ್ದು, ತಲಾ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಇದರೊಂದಿಗೆ ಉಭಯ ತಂಡಗಳು 8 ಅಂಕಗಳನ್ನು ಪಡೆದು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.

RCB vs PBKS IPL 2025 Match Rain Delay Update at Chinnaswamy Stadium

RCB vs PBKS – ಅಂಕಪಟ್ಟಿಯಲ್ಲಿ ಆಗುವ ಬದಲಾವಣೆಗಳೇನು?

ಮಳೆಯಿಂದಾಗಿ ಆರ್ಸಿಬಿ (Royal Challengers Bangalore) ಮತ್ತು ಪಂಜಾಬ್ (Punjab Kings) ನಡುವಿನ ಪಂದ್ಯ ರದ್ದಾದರೆ, ಎರಡೂ ತಂಡಗಳು ತಲಾ ಒಂದು ಅಂಕವನ್ನು ಪಡೆಯುತ್ತವೆ. ಈ ಮೂಲಕ ಆರ್ಸಿಬಿ ಒಟ್ಟು 9 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಲಿದೆ. ಅದೇ ರೀತಿ, ಪಂಜಾಬ್ ಕಿಂಗ್ಸ್ ಕೂಡ 9 ಅಂಕಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಲುಪಲಿದೆ. ಉಭಯ ತಂಡಗಳ ಅಂಕಗಳು ಸಮಾನವಾಗಿದ್ದರೂ, ಉತ್ತಮ ನೆಟ್ ರನ್ರೇಟ್ ಹೊಂದಿರುವ ಕಾರಣ ಆರ್ಸಿಬಿ ಎರಡನೇ ಸ್ಥಾನವನ್ನು ಪಡೆಯುತ್ತದೆ. ಈ ಬದಲಾವಣೆಯಿಂದ ಗುಜರಾತ್ ಟೈಟಾನ್ಸ್ ತಂಡವು ಎರಡು ಸ್ಥಾನಗಳ ಕುಸಿತವನ್ನು ಅನುಭವಿಸಿ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಡುತ್ತದೆ.

Leave a Comment

Your email address will not be published. Required fields are marked *

Scroll to Top
WordPress Lab Ankara Escort: Çankaya Escort, Mamak Escort, Polatlı Escort İstanbul Escort: Avcılar Escort, Beylikdüzü Escort, Esenyurt Escort Bursa Escort: İznik Escort, Büyükorhan Escort, İnegöl Escort ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….! ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ? LiveSmart Video Chat SUMO WooCommerce Payment Plans – Deposits, Down Payments, Installments, Variable Payments etc WooCommerce Quick Order Plugin – Bulk & Fast Product Ordering Vertical Simple 3D Coverflow WordPress Plugin FirstData Payeezy Payment Gateway WooCommerce Plugin Import Entries for Gravity Forms Voxey – Amazon Polly Text-to-Speech Plugin for WordPress Wizard – WordPress Affiliate Marketing Plugin for Niche Review Websites Social Events for Videos Add-on for Easy Social Share Buttons Revolution Lightbox