ನೀವು ಸಾಲವನ್ನು ಪೂರ್ತಿ ತೀರಿಸಿದ್ದೀರಾ? ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟಿ ತಿಂಗಳು ಕಳೆದರೂ ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಮಾತ್ರ ಇನ್ನೂ ಅಪ್‌ಡೇಟ್ ಆಗಿಲ್ಲವೇ? ಹೊಸ ಸಾಲ ಪಡೆಯಲು ಹಳೆಯ ಸ್ಕೋರ್ ಅಡ್ಡಿಯಾಗುತ್ತಿದೆಯೇ? ಹಾಗಿದ್ದರೆ ನಿಮಗೊಂದು ಭರ್ಜರಿ ಸಿಹಿ ಸುದ್ದಿ ಇಲ್ಲಿದೆ! ಹೌದು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಾಲಗಾರರ ಹಿತದೃಷ್ಟಿಯಿಂದ ಮಹತ್ತರವಾದ ಬದಲಾವಣೆಯೊಂದನ್ನು ತಂದಿದೆ. ಇನ್ಮುಂದೆ ನಿಮ್ಮ ಸಾಲದ ಮಾಹಿತಿ ಮತ್ತು ಕ್ರೆಡಿಟ್ ಸ್ಕೋರ್ (Credit Score) ಅಪ್‌ಡೇಟ್ ಆಗಲು ತಿಂಗಳುಗಟ್ಟಲೆ ಕಾಯಬೇಕಿಲ್ಲ.

Credit Score – ಏನಿದು ಹೊಸ ನಿಯಮ?
ಪ್ರಸ್ತುತ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ನಿಮ್ಮ ಸಾಲದ ಮಾಹಿತಿಯನ್ನು ಕ್ರೆಡಿಟ್ ಬ್ಯೂರೋಗಳಿಗೆ (CIBIL, Experian ಇತ್ಯಾದಿ) ನೀಡಲು 30 ರಿಂದ 45 ದಿನಗಳ ಸಮಯ ತೆಗೆದುಕೊಳ್ಳುತ್ತವೆ. ಇದರಿಂದಾಗಿ ನೀವು ಸಾಲ ತೀರಿಸಿದರೂ ನಿಮ್ಮ ಸ್ಕೋರ್ ಬದಲಾಗಲು ತುಂಬಾ ಸಮಯ ಹಿಡಿಯುತ್ತಿತ್ತು. ಆದರೆ, ಜನವರಿ 1, 2025 ರಿಂದ ಜಾರಿಗೆ ಬರುವಂತೆ, ಬ್ಯಾಂಕುಗಳು ಮತ್ತು NBFCಗಳು ಪ್ರತಿ 15 ದಿನಕ್ಕೊಮ್ಮೆ (ತಿಂಗಳಿಗೆ ಎರಡು ಬಾರಿ) ಮಾಹಿತಿಯನ್ನು ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ.
2026 ರಿಂದ ವಾರಕ್ಕೊಮ್ಮೆ ಅಪ್‌ಡೇಟ್!
ಆರ್‌ಬಿಐ ಇಷ್ಟಕ್ಕೇ ನಿಂತಿಲ್ಲ. ಜುಲೈ 1, 2026 ರಿಂದ ಈ ಪ್ರಕ್ರಿಯೆ ಮತ್ತಷ್ಟು ವೇಗವಾಗಲಿದೆ. ಆಗಿನಿಂದ ಬ್ಯಾಂಕುಗಳು ವಾರಕ್ಕೊಮ್ಮೆ ನಿಮ್ಮ ಸಾಲದ ಮಾಹಿತಿಯನ್ನು ವರದಿ ಮಾಡಬೇಕಾಗುತ್ತದೆ. ಅಂದರೆ, ನೀವು ಸಾಲದ ಕಂತು ಪಾವತಿಸಿದ ಕೆಲವೇ ದಿನಗಳಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್‌ನಲ್ಲಿ (Credit Score) ಅದರ ಪ್ರತಿಫಲ ಕಾಣಿಸಲಿದೆ!
ಸಾಲಗಾರರಿಗೆ ಈ ಬದಲಾವಣೆಯಿಂದ ಆಗುವ ಲಾಭಗಳೇನು?
- ತ್ವರಿತ ಸ್ಕೋರ್ ಅಪ್‌ಡೇಟ್: ಸಾಲವನ್ನು ಮುಂಚಿತವಾಗಿ ಪಾವತಿಸಿದಾಗ ಅಥವಾ ಕ್ಲೋಸ್ ಮಾಡಿದಾಗ, ನಿಮ್ಮ ಸ್ಕೋರ್ ತಕ್ಷಣ ಸುಧಾರಿಸುತ್ತದೆ. ಇದರಿಂದ ಹೊಸ ಸಾಲ ಪಡೆಯುವುದು ಸುಲಭವಾಗಲಿದೆ.
- ಮೋಸ ತಡೆಗೆ ಸಹಕಾರಿ: ಯಾರಾದರೂ ನಿಮ್ಮ ಹೆಸರಿನಲ್ಲಿ ಸಾಲ ಪಡೆಯಲು ಯತ್ನಿಸಿದರೆ, ಈಗ ಕ್ರೆಡಿಟ್ ಬ್ಯೂರೋಗಳು ತಕ್ಷಣ SMS ಅಥವಾ ಇಮೇಲ್ ಮೂಲಕ ನಿಮಗೆ ಅಲರ್ಟ್ ಕಳಿಸುತ್ತವೆ.
- ದೂರು ನೀಡಿದರೆ ಹಣ ಸಿಗುತ್ತೆ: ಒಂದು ವೇಳೆ ನಿಮ್ಮ ಕ್ರೆಡಿಟ್ (Credit Score) ವರದಿಯಲ್ಲಿ ತಪ್ಪುಗಳಿದ್ದು, ನೀವು ದೂರು ನೀಡಿದ 30 ದಿನಗಳಲ್ಲಿ ಬ್ಯಾಂಕ್ ಅದನ್ನು ಸರಿಪಡಿಸದಿದ್ದರೆ, ನಿಮಗೆ ಪ್ರತಿದಿನ 100 ರೂಪಾಯಿ ಪರಿಹಾರ ನೀಡಬೇಕಾಗುತ್ತದೆ!

- ಪಾರದರ್ಶಕತೆ: ಸಾಲದ ಅರ್ಜಿ ತಿರಸ್ಕೃತವಾದರೆ ಬ್ಯಾಂಕುಗಳು ಈಗ ನಿರ್ದಿಷ್ಟ ಕಾರಣಗಳನ್ನು ನೀಡಲೇಬೇಕು. ಇದರಿಂದ ನೀವು ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. Read this also : ಸಿಬಿಲ್ ಸ್ಕೋರ್ ಕಡಿಮೆ ಇದೆಯೇ? ಈ ಟಿಪ್ಸ್ ಪಾಲಿಸಿದರೆ 100+ ಪಾಯಿಂಟ್ಸ್ ಹೆಚ್ಚಾಗೋದು ಪಕ್ಕಾ..!
ತಜ್ಞರು ಏನಂತಾರೆ?
“ಈ ಹೊಸ ಬದಲಾವಣೆಯಿಂದ ಬ್ಯಾಂಕುಗಳಿಗೆ ಸಾಲಗಾರರ ನಿಖರವಾದ ಆರ್ಥಿಕ ಪರಿಸ್ಥಿತಿ ತಿಳಿಯುತ್ತದೆ. ಸಾಲಗಾರರಿಗೂ ಕೂಡ ತಮ್ಮ ಕ್ರೆಡಿಟ್ ಇತಿಹಾಸವನ್ನು ಉತ್ತಮವಾಗಿಟ್ಟುಕೊಳ್ಳಲು ಇದು ಸ್ಫೂರ್ತಿ ನೀಡುತ್ತದೆ,” ಎನ್ನುತ್ತಾರೆ ಆರ್ಥಿಕ ತಜ್ಞರು.
ಕೊನೆಯ ಮಾತು: ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಚೆನ್ನಾಗಿದ್ದರೆ ಸಾಲ ಸಿಗುವುದು ಸುಲಭ ಮಾತ್ರವಲ್ಲ, ಕಡಿಮೆ ಬಡ್ಡಿದರದಲ್ಲೂ ಸಾಲ ದೊರೆಯಬಹುದು. ಆರ್‌ಬಿಐನ ಈ ಹೊಸ ಹೆಜ್ಜೆ ಸಾಮಾನ್ಯ ಜನರಿಗೆ ವರದಾನವಾಗಲಿದೆ ಅನ್ನೋದ್ರಲ್ಲಿ ಸಂಶಯವಿಲ್ಲ.
