Wednesday, February 4, 2026
HomeNationalWhite Owl : ಅಂದು ವಾರಣಾಸಿ, ಇಂದು ಛತ್ತೀಸ್‌ಗಢ! ದಿಢೀರ್ ಪ್ರತ್ಯಕ್ಷವಾಯ್ತು ಅಪರೂಪದ 'ಬಿಳಿ ಗೂಬೆ';...

White Owl : ಅಂದು ವಾರಣಾಸಿ, ಇಂದು ಛತ್ತೀಸ್‌ಗಢ! ದಿಢೀರ್ ಪ್ರತ್ಯಕ್ಷವಾಯ್ತು ಅಪರೂಪದ ‘ಬಿಳಿ ಗೂಬೆ’; ದೇವರೆಂದು ಪೂಜೆ ಮಾಡಿದ ಜನ!

ಸಾಮಾನ್ಯವಾಗಿ ಗೂಬೆ ಅಥವಾ ಆ ರೀತಿಯ ಪಕ್ಷಿಗಳು ಹಗಲಿನಲ್ಲಿ ಕಾಣಿಸುವುದು ತೀರಾ ಕಡಿಮೆ. ಆದರೆ ಇಲ್ಲೊಂದು ಕಡೆ ಹಾಲು ಬಿಳುಪಿನ ಅಪರೂಪದ ಗೂಬೆಯೊಂದು ಪ್ರತ್ಯಕ್ಷವಾಗಿದ್ದು, ಇಡೀ ಊರಿಗೆ ಊರೇ ಇದನ್ನು ನೋಡಲು ಮುಗಿಬಿದ್ದಿದೆ. ಅಷ್ಟೇ ಅಲ್ಲ, ಇದನ್ನು ದೇವರೆಂದು ಭಾವಿಸಿ ಪೂಜೆ ಕೂಡ ಶುರುಮಾಡಿಕೊಂಡಿದ್ದಾರೆ. ಹೌದು, ಇಂತಹದೊಂದು ವಿಚಿತ್ರ ಘಟನೆ ನಡೆದಿರುವುದು ಛತ್ತೀಸ್‌ಗಢದ ಬೆಮೆತಾರಾ ಜಿಲ್ಲೆಯ ಖಮಾರಿಯಾ ಗ್ರಾಮದಲ್ಲಿ.

Locals in Chhattisgarh worship a rare white owl, believing it to be a sacred symbol of Goddess Lakshmi

White Owl – ಶುಭ ಶಕುನವೆಂದು ನಂಬಿದ ಜನ

ನಮ್ಮಲ್ಲಿ ಬಿಳಿ ಬಣ್ಣದ ಗೂಬೆ ಅಥವಾ ಹಕ್ಕಿ ಕಂಡರೆ ಅದು ಸಾಕ್ಷಾತ್ ಲಕ್ಷ್ಮೀ ದೇವಿಯ ವಾಹನ, ಅದು ಕಾಣಿಸಿದರೆ ಕಷ್ಟಗಳೆಲ್ಲಾ ದೂರವಾಗಿ ಅಂದುಕೊಂಡ ಕೆಲಸಗಳು ನೆರವೇರುತ್ತವೆ ಎಂಬ ನಂಬಿಕೆ ಜನರಲ್ಲಿದೆ. ಇದೇ ನಂಬಿಕೆಯಿಂದ ಖಮಾರಿಯಾ ಗ್ರಾಮದ ರೈತನೊಬ್ಬನ ತೋಟದ ಮನೆಯಲ್ಲಿ ಕಾಣಿಸಿಕೊಂಡ ಈ ಅಪರೂಪದ ಬಿಳಿ ಗೂಬೆಯನ್ನು ನೋಡಲು ಜನ ಸಾಗರೋಪಾದಿಯಲ್ಲಿ ಹರಿದು ಬಂದಿದ್ದಾರೆ.

ಈ ಹಿಂದೆ ಆಗಸ್ಟ್ ತಿಂಗಳಲ್ಲಿ ವಾರಣಾಸಿಯ ದೇವಸ್ಥಾನವೊಂದರ ಮೇಲೂ ಇದೇ ರೀತಿಯ ಬಿಳಿ ಗೂಬೆ ಕಾಣಿಸಿಕೊಂಡಿತ್ತು. ಈಗ ಛತ್ತೀಸ್‌ಗಢದಲ್ಲಿ ಕಾಣಿಸಿಕೊಂಡಿರುವುದು ಜನರಲ್ಲಿ ಭಕ್ತಿಭಾವ ಮೂಡಿಸಿದೆ. ನಮ್ಮ ಪೂರ್ವಜರು ಹೀಗೆ ಬಂದು ಹರಸುತ್ತಾರೆ ಎಂದುಕೊಂಡ ಗ್ರಾಮಸ್ಥರು, ಆ ಹಕ್ಕಿಗೆ ಪೂಜೆ, ಭಜನೆಗಳನ್ನು ಮಾಡುತ್ತಾ ಸಂಭ್ರಮಿಸಿದ್ದಾರೆ. Read this also : ಕೇರಳದ ವರ್ಕಲಾ ಬೀಚ್‌ನಲ್ಲಿ ದೈತ್ಯ ‘ವೇಲ್ ಶಾರ್ಕ್’ ಪ್ರತ್ಯಕ್ಷ! ರಕ್ಷಣೆಗಾಗಿ ಒಂದಾದ ಪ್ರವಾಸಿಗರು ಮತ್ತು ಸ್ಥಳೀಯರು

White Owl – ತೆಂಗಿನಕಾಯಿ ಒಡೆದು, ಅರಿಶಿನ ಕುಂಕುಮವಿಟ್ಟು ಪೂಜೆ!

ರೈತನ ತೋಟದಲ್ಲಿ ಈ ಪಕ್ಷಿ ಕಾಣಿಸಿಕೊಂಡ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ನೋಡನೋಡುತ್ತಿದ್ದಂತೆ ಅಲ್ಲಿ ಜಮಾಯಿಸಿದ ಜನ, ಇದು ಸಾಮಾನ್ಯ ಪಕ್ಷಿಯಲ್ಲ ದೇವರೆಂದು ನಿರ್ಧರಿಸಿಬಿಟ್ಟರು. ತಕ್ಷಣವೇ ಅರಿಶಿನ, ಕುಂಕುಮ, ಹೂವುಗಳನ್ನು ಅರ್ಪಿಸಿದರು. ಕೆಲವರು ಆ ಪಕ್ಷಿಯ ಮುಂದೆಯೇ ತೆಂಗಿನಕಾಯಿ ಒಡೆದು ನೈವೇದ್ಯವನ್ನೂ ಅರ್ಪಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Locals in Chhattisgarh worship a rare white owl, believing it to be a sacred symbol of Goddess Lakshmi

ಸಂಬಂಧಿಸಿದ ವಿಡಿಯೋ ಇಲ್ಲಿದೆ ನೋಡಿ : Click Here

White Owl – ಭಯದಿಂದ ನಡುಗಿದ ಮೂಕ ಪ್ರಾಣಿ

ಒಂದೆಡೆ ಭಕ್ತಿಯ ಪರಾಕಾಷ್ಠೆಯಾದರೆ, ಇನ್ನೊಂದೆಡೆ ಆ ಮೂಕ ಪ್ರಾಣಿಯ ಸ್ಥಿತಿ ಮಾತ್ರ ಅಯ್ಯೋ ಪಾಪ ಎನಿಸುವಂತಿತ್ತು. ಜನಸಾಗರ, ಅವರು ಮಾಡುತ್ತಿದ್ದ ಭಜನೆಯ ಜೋರು ಶಬ್ದ ಮತ್ತು ಪೂಜೆಯ ಗದ್ದಲಕ್ಕೆ ಬೆದರಿದ ಆ ಬಿಳಿ ಗೂಬೆ, ಪ್ರಾಣಭಯದಿಂದ ಮೂಲೆಯೊಂದರಲ್ಲಿ ನಡುಗುತ್ತಾ ಅವಿತುಕೊಂಡಿತ್ತು. ಜನರ ಅತಿಯಾದ ಪ್ರೀತಿ ಮತ್ತು ಭಕ್ತಿ ಆ ಪಕ್ಷಿಗೆ ತೊಂದರೆಯಾಗಿ ಪರಿಣಮಿಸಿದ್ದು ಮಾತ್ರ ವಿಪರ್ಯಾಸ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular