HomeNationalRampur Mother Case : ಹೆತ್ತ ಮಕ್ಕಳಿಗೇ ನಿದ್ದೆ ಮಾತ್ರೆ ಕೊಟ್ಟು, 10 ವರ್ಷ ಚಿಕ್ಕ...

Rampur Mother Case : ಹೆತ್ತ ಮಕ್ಕಳಿಗೇ ನಿದ್ದೆ ಮಾತ್ರೆ ಕೊಟ್ಟು, 10 ವರ್ಷ ಚಿಕ್ಕ ಪ್ರಿಯಕರನ ಜೊತೆ ಎಸ್ಕೇಪ್ ಆದ ‘ಕಿಲಾಡಿ’ ತಾಯಿ!

“ಪ್ರೀತಿ ಕುರುಡು” ಎಂಬ ಮಾತನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬಳು ತಾಯಿ (Rampur Mother Case) ತನ್ನ ಪ್ರೀತಿಗಾಗಿ ಹೆತ್ತ ಮಕ್ಕಳ ಪ್ರಾಣವನ್ನೇ ಪಣಕ್ಕಿಟ್ಟಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ರಾಂಪುರ್‌ನಲ್ಲಿ ನಡೆದಿದೆ. ಐವರು ಮಕ್ಕಳ ತಾಯಿಯೊಬ್ಬಳು ತನ್ನಗಿಂತ 11 ವರ್ಷ ಚಿಕ್ಕವನಾದ ಯುವಕನ ಪ್ರೇಮಪಾಶಕ್ಕೆ ಬಿದ್ದು, ಮಕ್ಕಳಿಗೆ ವಿಷದಂತ ನಿದ್ದೆ ಮಾತ್ರೆ ನೀಡಿ ಪರಾರಿಯಾಗಿದ್ದಾಳೆ!

rampur mother case woman gives sleeping pills to children and runs away with lover shocking crime

Rampur Mother Case – ಅಸಲಿಗೆ ನಡೆದಿದ್ದೇನು?

ರಾಂಪುರ್ ನಿವಾಸಿ 33 ವರ್ಷದ ಮಿಥಿಲೇಶಾ ಎಂಬಾಕೆಗೆ ಐವರು ಮಕ್ಕಳಿದ್ದಾರೆ. ಇತ್ತೀಚೆಗೆ ಈಕೆಗೆ 22 ವರ್ಷದ ಸುರೇಂದ್ರ (ಅಲಿಯಾಸ್ ಖನ್ನಾ) ಎಂಬ ಯುವಕನ ಪರಿಚಯವಾಗಿ, ಅದು ಪ್ರೇಮಕ್ಕೆ ತಿರುಗಿದೆ. ಈ ಪ್ರೇಮ ಎಷ್ಟರಮಟ್ಟಿಗೆ ಇತ್ತೆಂದರೆ, ತನ್ನ ಸಂಸಾರ ಮತ್ತು ಮಕ್ಕಳನ್ನು ತೊರೆಯಲು ಮಿಥಿಲೇಶಾ ಸಿದ್ಧಳಾಗಿದ್ದಳು.

ಸಂಬಂಧಿಸಿದ ವಿಡಿಯೋ ಇಲ್ಲಿದೆ ನೋಡಿ : Click Here

ಕಳೆದ ಕೆಲವು ದಿನಗಳ ಹಿಂದೆ, ತನ್ನ ಪ್ರಿಯಕರನ ಜೊತೆ ಓಡಿಹೋಗಲು ಮಾಸ್ಟರ್ ಪ್ಲಾನ್ ಮಾಡಿದ್ದ ಈಕೆ, ರಾತ್ರಿ ಊಟದಲ್ಲಿ ತನ್ನ ಐವರು ಮಕ್ಕಳಿಗೆ ನಿದ್ದೆ ಮಾತ್ರೆ ಬೆರೆಸಿದ್ದಾಳೆ. ಮಕ್ಕಳು ಗಾಢ ನಿದ್ರೆಗೆ ಜಾರುತ್ತಿದ್ದಂತೆ, ಮನೆಯಲ್ಲಿದ್ದ ನಗದು, ಒಡವೆ ಹಾಗೂ ಬೆಲೆಬಾಳುವ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು, ಪ್ರಿಯಕರನ ಜೊತೆ (Rampur Mother Case) ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾಳೆ.

ಪತಿಗೆ ಕಾದಿತ್ತು ಶಾಕ್!

ಮಿಥಿಲೇಶಾಳ ಪತಿ ರೂಪ್ ಕಿಶೋರ್ ದೆಹಲಿಯಲ್ಲಿ ಟೈಲರ್ ಕೆಲಸ ಮಾಡುತ್ತಿದ್ದು, ಕುಟುಂಬದ ನಿರ್ವಹಣೆಗಾಗಿ ಅಲ್ಲಿ ವಾಸವಿದ್ದರು. ಮನೆಗೆ ಫೋನ್ ಮಾಡಿದಾಗ ಯಾರೂ ಎತ್ತದಿದ್ದಾಗ ಅನುಮಾನಗೊಂಡು ತಕ್ಷಣ ಊರಿಗೆ ಬಂದಿದ್ದಾರೆ. ಮನೆಯ ಬೀಗ ಮುರಿದು (Rampur Mother Case) ಒಳಹೋದಾಗ ಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ದಿಗಿಲುಗೊಂಡಿದ್ದಾರೆ. ತಕ್ಷಣ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. Read this also : ಮದುವೆ ಮಾಡದಿದ್ದರೆ ಜೀವ ಬಿಡುವೆ ಎಂದವನು ಹೆಣವಾಗಿ ಕೆಳಗಿಳಿದ: ಪ್ರೀತಿಗಾಗಿ ಟವರ್ ಏರಿದ್ದ ಯುವಕ ಸಾವು!

rampur mother case woman gives sleeping pills to children and runs away with lover shocking crime

24 ಗಂಟೆಯೊಳಗೆ ಅರೆಸ್ಟ್!

ದೂರು ದಾಖಲಿಸಿಕೊಂಡ ರಾಂಪುರ್ (Rampur Mother Case) ಪೊಲೀಸರು ಹದ್ದಿನ ಕಣ್ಣಿಟ್ಟು ಕೇವಲ 24 ಗಂಟೆಯೊಳಗೆ ಪ್ರೇಮಿಗಳಿಬ್ಬರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಮಕ್ಕಳು ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮಿಥಿಲೇಶಾ ಪೊಲೀಸರ ಮುಂದೆ ನೀಡಿದ ಹೇಳಿಕೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. “ಮಕ್ಕಳನ್ನು ಬಿಟ್ಟು ಹೇಗೆ ಹೋಗಲು ಮನಸ್ಸು ಬಂತು?” ಎಂದು ನೆಟ್ಟಿಗರು ಈಕೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

by Baluhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular