ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ರವರು ಭಾಗಿಯಾಗಿದ್ದಾರೆ ಎಂಬ ಆಡಿಯೋ ಭಾರಿ ಸದ್ದು ಮಾಡುತ್ತಿದೆ. ಇದೀಗ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನನ್ನ ಕೇಸ್ ನಲ್ಲಿ ಡಿಕೆಶಿ ನೇರವಾಗಿ ಭಾಗಿಯಾದ ಬಗ್ಗೆ ನನ್ನ ಬಳಿ ಸಾಕ್ಷಿಗಳಿವೆ ಎಂದು ಹೇಳಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ರವರು ಗೋಕಾಕ ನಗರದಲ್ಲಿ ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡಿದರು. ಪ್ರಜ್ವಲ್ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಭಾಗಿಯಾಗಿರುವುದ ಇದೀಗ ಬಯಲಾಗಿದೆ. ಅವರ ಬಳಿ ಅಲ್ಲಿ ಇಲ್ಲಿ ಎಂದು ಸುತ್ತು ಹಾಕಿರುವುದು ಸಹ ಇದೆ. ಆದರೆ ನನ್ನ ಕೇಸ್ ನಲ್ಲಿ ಡಿಕೆ ಶಿವಕುಮಾರ್ ಮಾತಾಡಿದ್ದೆ ಕೊಡುತ್ತೇನೆ. ನನ್ನ ಬಗ್ಗೆ ಷಡ್ಯಂತ್ರ ಮಾಡಿದ್ದು ಇದೆ, ಆದರೆ ಮಾಧ್ಯಮದ ಮುಂದೆ ಹೊರಹಾಕಲ್ಲ. ಸಿಬಿಐಗೆ ಪ್ರಕರಣ ಕೊಟ್ಟರೇ ಸಾಕ್ಷಿ ಕೊಡುತ್ತೇನೆ. ನನ್ನ ಕೇಸ್ ನಲ್ಲೂ ಎಸ್.ಐಟಿ ಮೇಲೆ ವಿಶ್ವಾಸ ವಿಲ್ಲ. ಈಗಲೂ ಎಸ್.ಐ.ಟಿ ಮೇಲೆ ವಿಶ್ವಾಸವಿಲ್ಲ. ಸಿಬಿಐ ಗೆ ಕೇಸ್ ಕೊಟ್ಟರೂ ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಪ್ರಕರಣದ ಮೇಲುಸ್ತುವಾರಿ ಮಾಡಬೇಕು. ಮಹಾನ್ ನಾಯಕ ಹಣದಲ್ಲಿ ತುಂಬಾ ಪ್ರಭಾವಿ ಇದ್ದಾರೆ.
ಹಣ ಕೊಟ್ಟು ಎಲ್ಲವನ್ನೂ ಖರೀದಿ ಮಾಡಬೇಕು ಅನ್ನುವಂತಹ ಸೊಕ್ಕು ಅವರಿಗೆ ತುಂಬಾನೆ ಇದೆ. ನನ್ನ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಭಾಗಿಯಾಗಿಲ್ಲ. ನಮ್ಮವರೂ ಸಹ ಇದ್ದಾರೆ. ಜೂ.4 ರ ನಂಯರ ಎಲ್ಲವನ್ನೂ ಹೊರಹಾಕುತ್ತೇನೆ. ಸತತ ನಾಲ್ಕು ವರ್ಷದಿಂದ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ಎಲ್ಲದಕ್ಕೂ ಜೂ.4 ಬಳಿಕ ಎಲ್ಲದಕ್ಕೂ ಅಂತ್ಯ ಹಾಡೋಣ. ಇನ್ನೂ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ಯಾರು ಸಹ ಹೆಮ್ಮೆ ಪಡುವಂತಹ ವಿಚಾರವಲ್ಲ. ಎಲ್ಲರೂ ತಲೆ ತಗ್ಗಿಸುವಂತಹ ವಿಚಾರವಾಗಿದೆ. ರೇವಣ್ಣ ಕಾನೂನಿಂತೆ ಹೋರಾಟ ಮಾಡಲಿ. ಎಲ್ಲದಕ್ಕೂ ಕಾನೂನು ಒಂದೇ ಉತ್ತರ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.