ಮದುವೆಯಾಗಿ ಕೇವಲ ಮೂರೇ ತಿಂಗಳು… ಹೊಸ ಜೀವನದ ಕನಸು ಕಾಣಬೇಕಿದ್ದ ಆ ದಂಪತಿಗಳ ಬದುಕು ಸುಖಮಯವಾಗಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಆ ಸುಂದರ ಸಂಸಾರದ ಹಿಂದೆ ಅಡಗಿದ್ದದ್ದು ಮಾತ್ರ ರಕ್ತಸಿಕ್ತ ಸಂಚು! ಮೇಘಾಲಯದ ಪ್ರಖ್ಯಾತ ‘ಹನಿಮೂನ್ ಮರ್ಡರ್’ ಪ್ರಕರಣದ ಮಾದರಿಯಲ್ಲೇ (Rajasthan Murder Case) ರಾಜಸ್ಥಾನದಲ್ಲೂ ಈಗ ಮೈ ನಡುಗಿಸುವ ಘಟನೆಯೊಂದು ನಡೆದಿದೆ. ವಾಕಿಂಗ್ ಹೋದ ಪತಿ ರಸ್ತೆ ಅಪಘಾತದಲ್ಲಿ ಸತ್ತರು ಎಂದು ಕಣ್ಣೀರು ಹಾಕಿದ ಹೆಂಡತಿಯೇ, ತನ್ನ ಪ್ರಿಯಕರನ ಜೊತೆ ಸೇರಿ ಗಂಡನ ಕತ್ತು ಹಿಸುಕಿ ಕೊಂದ ಘೋರ ಕೃತ್ಯವಿದು.

Rajasthan Murder Case – ಅಪಘಾತದ ಹಿಂದೆ ಅಡಗಿದ್ದ ಸಂಚು
ಜನವರಿ 30ರ ಆ ಕರಾಳ ರಾತ್ರಿ, ರಸ್ತೆಯ ಮೇಲೆ ದಂಪತಿಗಳು ಬಿದ್ದಿರುವ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಕಂಡಿದ್ದು ಆಶಿಶ್ ಅವರ ನಿಶ್ಚೇತನ ದೇಹ. ಪಕ್ಕದಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಪತ್ನಿ ಅಂಜಲಿ, ಎಚ್ಚರವಾದ ನಂತರ ವಿವರಿಸಿದ ಕಥೆ ನಡುಕ ಹುಟ್ಟಿಸುವಂತಿತ್ತು. ವೇಗವಾಗಿ ಬಂದ ವಾಹನವೊಂದು ತಮಗೆ ಡಿಕ್ಕಿ ಹೊಡೆಯಿತೆಂದು, ಆ ನಂತರ ಬಂದ ದರೋಡೆಕೋರರು ತನ್ನ ಒಡವೆ ಕಿತ್ತುಕೊಂಡು ಹೋದರೆಂದು ಅವಳು ಕಣ್ಣೀರಿಟ್ಟಿದ್ದಳು. ಆದರೆ ಪೊಲೀಸರಿಗೆ ಆರಂಭದಲ್ಲೇ ಒಂದು ಪ್ರಶ್ನೆ ಕಾಡಿತ್ತು; ಅಷ್ಟು ದೊಡ್ಡ ಅಪಘಾತದಲ್ಲಿ ಪತಿ ಸಾವನ್ನಪ್ಪಿದರೂ, ಪತ್ನಿಗೆ ಸಣ್ಣ ಗಾಯವೂ ಆಗಿರಲಿಲ್ಲವೇಕೆ? ಎಂಬುದು.
ವೈದ್ಯಕೀಯ ವರದಿಯಿಂದ ಹೊರಬಿದ್ದ ಸತ್ಯ
ಪೊಲೀಸರ ಅನುಮಾನಕ್ಕೆ ಪುಷ್ಟಿ ನೀಡಿದ್ದು ವಿಧಿವಿಜ್ಞಾನ ಪ್ರಯೋಗಾಲಯ (FSL) ಮತ್ತು ಮರಣೋತ್ತರ ಪರೀಕ್ಷೆಯ ವರದಿ. ಆಶಿಶ್ ಅವರ ದೇಹದ ಮೇಲಿದ್ದ ಗುರುತುಗಳು ಅಪಘಾತದಿಂದ ಉಂಟಾದ ಗಾಯಗಳಲ್ಲ, ಬದಲಿಗೆ ಅವು ಯಾರೋ ಬಲವಂತವಾಗಿ ಕತ್ತು ಹಿಸುಕಿದಾಗ ಉಂಟಾದ ಗುರುತುಗಳೆಂದು ವೈದ್ಯರು ಸ್ಪಷ್ಟಪಡಿಸಿದರು. (Rajasthan Murder Case) ಇದೇ ವೇಳೆ ಪೊಲೀಸರಿಗೆ ಮೇಘಾಲಯದಲ್ಲಿ ನಡೆದಿದ್ದ ಸೋನಂ ಮತ್ತು ರಾಜಾ ರಘುವಂಶಿಯ ಕೊಲೆ ಪ್ರಕರಣ ನೆನಪಾಯಿತು. ಅಲ್ಲಿಯೂ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಪತಿಯನ್ನು ಮುಗಿಸಿದ್ದಳು. ಅದೇ ಹಾದಿಯಲ್ಲಿ ತನಿಖೆ ನಡೆಸಿದಾಗ ಅಂಜಲಿಯ ಅಸಲಿ ಬಣ್ಣ ಬಯಲಾಯಿತು.

ಮಾಜಿ ಪ್ರಿಯಕರನ ಜೊತೆ ರಕ್ತಸಿಕ್ತ ಒಪ್ಪಂದ
ತನಿಖೆಯ ವೇಳೆ ಅಂಜಲಿಯ ಫೋನ್ ದಾಖಲೆಗಳು ಆಕೆಯ ಗುಟ್ಟನ್ನು ರಟ್ಟು ಮಾಡಿದವು. ಮದುವೆಯಾಗಿದ್ದರೂ ತನ್ನ ಮಾಜಿ ಪ್ರಿಯಕರ ಸಂಜು ಜೊತೆ ಆಕೆ ನಿರಂತರ ಸಂಪರ್ಕದಲ್ಲಿದ್ದಳು. (Rajasthan Murder Case) ಈ ಮದುವೆಯಿಂದ ಅತೃಪ್ತಳಾಗಿದ್ದ ಅಂಜಲಿ, ಸಂಜು ಜೊತೆ ಸೇರಿ ಪತಿಯನ್ನು ಕೊಲ್ಲಲು ಸ್ಕೆಚ್ ಹಾಕಿದ್ದಳು. ಅಂದು ರಾತ್ರಿ ಆಶಿಶ್‌ನನ್ನು ಬೇಕೆಂದೇ ನಿರ್ಜನ ರಸ್ತೆಗೆ ಕರೆದೊಯ್ದಿದ್ದಳು. ಅಲ್ಲಿ ಹೊಂಚು ಹಾಕಿ ಕುಳಿತಿದ್ದ ಸಂಜು ಮತ್ತು ಆತನ ಸಹಚರರು ಆಶಿಶ್‌ನನ್ನು ಹಿಗ್ಗಾಮುಗ್ಗಾ ಥಳಿಸಿ, ಕತ್ತು ಹಿಸುಕಿ ಕೊಲೆ ಮಾಡಿದ್ದರು.
Read this also : ಮದುವೆ ಮಂಟಪಕ್ಕೆ ಹೊರಟಿದ್ದ ವರನಿಗೆ ಚಾಕು ಇರಿತ: ಕಣ್ಣೀರು ಹಾಕಿದ್ದ ವಧುವೇ ಅಸಲಿ ವಿಲನ್! ಕೊಳ್ಳೇಗಾಲದ ಕೇಸ್‌ಗೆ ಬಿಗ್ ಟ್ವಿಸ್ಟ್…!
ನಾಟಕವಾಡಿದರೂ ತಪ್ಪಿಸಿಕೊಳ್ಳಲಾಗಲಿಲ್ಲ
ಕೊಲೆಯ ನಂತರ ಅಂಜಲಿ ತಾನೇ ಸ್ವತಃ ತನ್ನ ಒಡವೆಗಳನ್ನು ಕೊಲೆಗಾರರಿಗೆ ನೀಡಿ ದರೋಡೆಯ ಕಥೆ ಕಟ್ಟಿದ್ದಳು. ತಾನು ಪ್ರಜ್ಞೆ ತಪ್ಪಿದವಳಂತೆ ನಟಿಸಿ (Rajasthan Murder Case) ಪೊಲೀಸರ ಹಾದಿ ತಪ್ಪಿಸಲು ಯತ್ನಿಸಿದ್ದಳು. ಆದರೆ ವಿಧಿವಿಜ್ಞಾನ ತಜ್ಞರ ತನಿಖೆ ಮತ್ತು ಪೊಲೀಸರ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಅವಳಿಗೆ ಸಾಧ್ಯವಾಗಲಿಲ್ಲ. ಸತತ ವಿಚಾರಣೆಯ ನಂತರ ಅಂಜಲಿ ತನ್ನ ಪಾಪದ ಕೃತ್ಯವನ್ನು ಒಪ್ಪಿಕೊಂಡಿದ್ದು, ಸದ್ಯ ಪ್ರಿಯಕರ ಸಂಜು ಮತ್ತು ಆತನ ಇಬ್ಬರು ಗೆಳೆಯರೊಂದಿಗೆ ಜೈಲು ಪಾಲಾಗಿದ್ದಾಳೆ.
