Crime – ರಾಜಸ್ಥಾನದಲ್ಲಿ ನಡೆದ ಒಂದು ಘಟನೆ ಇಡೀ ಸಮಾಜದ ಆತ್ಮಸಾಕ್ಷಿಯನ್ನು ಕಲಕಿದೆ. ತನ್ನ ಪ್ರಿಯಕರನ ಜೊತೆ ಇರಲು ಮೂರು ವರ್ಷದ ಮಗುವೇ ಅಡ್ಡಿಯೆಂದು ಭಾವಿಸಿದ ತಾಯಿಯೊಬ್ಬಳು ತನ್ನದೇ ಮಗಳನ್ನು ಕೊಂದಿದ್ದಾಳೆ. ಈ ಘಟನೆ ನಿಜಕ್ಕೂ ರಕ್ತ ಕುದಿಯುವಂತೆ ಮಾಡುತ್ತದೆ. ಆರಂಭದಲ್ಲಿ ಈ ಪ್ರಕರಣವನ್ನು ‘ಮಿಸ್ಸಿಂಗ್ ಕೇಸ್’ ಎಂದು ಪರಿಗಣಿಸಲಾಗಿತ್ತು. ಆದರೆ, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸತ್ಯ ಹೊರಬಿದ್ದಿದೆ.

Crime – ಮಗಳ ವಿಚಾರಕ್ಕೆ ಪ್ರಿಯಕರ ವಿವಾಹಿತೆಯ ನಡುವೆ ಜಗಳ
ಉತ್ತರಪ್ರದೇಶದ ವಾರಣಾಸಿಯ 28 ವರ್ಷದ ಮಹಿಳೆಯೊಬ್ಬಳು ತನ್ನ ಪತಿಯಿಂದ ಬೇರ್ಪಟ್ಟು ರಾಜಸ್ಥಾನದ ಅಜ್ಮೀರ್‌ನ ವ್ಯಕ್ತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದಳು. ಅಜ್ಮೀರ್‌ಗೆ ಹೋಗಿ ಹೋಟೆಲ್‌ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಆಕೆ, ತನ್ನ ಮೂರು ವರ್ಷದ ಮಗುವಿನೊಂದಿಗೆ ಇರತೊಡಗಿದ್ದಳು. ಆದರೆ, ಆಕೆಯ ಪ್ರಿಯಕರ ಮಗುವಿನ ವಿಷಯದಲ್ಲಿ ಪದೇ ಪದೇ ಜಗಳವಾಡಲು ಶುರು ಮಾಡಿದ್ದ. ಮಗು ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದೆ ಎಂದು ಹೇಳಿದ್ದನು.
Crime – ಮಗಳನ್ನೇ ಸಾಯಿಸಲು ನಿರ್ಧರಿಸಿದ ತಾಯಿ
ಪ್ರಿಯಕರನ ಒತ್ತಡದಿಂದ ಬೇಸತ್ತ ಮಹಿಳೆ ಕಠಿಣ ನಿರ್ಧಾರಕ್ಕೆ ಬಂದಳು. ತನ್ನ ಮಗಳನ್ನು ಬದುಕಿನಿಂದಲೇ ದೂರ ಮಾಡಬೇಕೆಂದು ನಿರ್ಧರಿಸಿದಳು. ಯೋಜನೆಯಂತೆ ರಾತ್ರಿ ಸಮಯದಲ್ಲಿ ತನ್ನ ಮಗಳನ್ನು ಕರೆದುಕೊಂಡು ನಗರದ ಅನಾ ಸಾಗರ್ ಸರೋವರದ ಬಳಿ ಹೋಗಿದ್ದಾಳೆ. ಯಾರೂ ಇಲ್ಲ ಎಂದು ಖಚಿತಪಡಿಸಿಕೊಂಡು ಆ ಮಗುವನ್ನು ಸರೋವರಕ್ಕೆ ತಳ್ಳಿದ್ದಾಳೆ. ಮಗು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದೆ. Read this also : ಪ್ರೀತಿಯ ದಾಂಪತ್ಯಕ್ಕೆ ದ್ರೋಹ, 3 ಮಕ್ಕಳನ್ನು ತೊರೆದು ಪ್ರಿಯಕರನ ಜೊತೆ ಓಡಿಹೋದ ಮಹಿಳೆ…!
Crime – ಪುಟ್ಟ ಕಂದಮ್ಮನ ಕೊಲೆ ಮತ್ತು ತಾಯಿಯ ನಾಟಕ
ಇದೇ ಸಮಯದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಪೇದೆ ಒಬ್ಬರು ಆ ಮಹಿಳೆ ಮತ್ತು ಅವಳ ಪ್ರಿಯಕರನನ್ನು ಕಂಡಿದ್ದಾರೆ. ‘ಈ ಸಮಯದಲ್ಲಿ ಇಲ್ಲಿ ಏನು ಮಾಡುತ್ತಿದ್ದೀರಿ?’ ಎಂದು ಪ್ರಶ್ನಿಸಿದಾಗ, ಮಹಿಳೆ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ನಾಟಕವಾಡಿದ್ದಾಳೆ. ‘ನಾವು ನಮ್ಮ ಮಗಳ ಜೊತೆಗೆ ಹೊರಗೆ ಬಂದಿದ್ದೆವು, ಆದರೆ ಅವಳು ಎಲ್ಲಿಗೋ ತಪ್ಪಿಸಿಕೊಂಡಿದ್ದಾಳೆ. ಬಹಳ ಹೊತ್ತಿನಿಂದ ಹುಡುಕುತ್ತಿದ್ದೇವೆ’ ಎಂದು ಹೇಳಿದ್ದಾಳೆ. ಪೊಲೀಸರಿಗೆ ಅನುಮಾನ ಬಂದು ಸಿಸಿಟಿವಿ ಪರಿಶೀಲಿಸಿದ್ದಾರೆ. ಮೊದಲು ಮಗುವಿನೊಂದಿಗೆ ನಡೆದುಕೊಂಡು ಹೋಗುತ್ತಿದ್ದ ದೃಶ್ಯಗಳು ಕಂಡಿದ್ದು, ನಂತರ ಆಕೆ ಒಬ್ಬಳೇ ಇದ್ದದ್ದು ಕಂಡುಬಂದಿದೆ.

Crime – ಸತ್ಯ ಒಪ್ಪಿಕೊಂಡ ಮಹಿಳೆ
ಪೊಲೀಸರು ತಮ್ಮ ಶೈಲಿಯಲ್ಲಿ ಮಹಿಳೆಯನ್ನು ವಿಚಾರಿಸಿದಾಗ ಅವಳು ಕೊನೆಗೆ ಸತ್ಯವನ್ನು ಒಪ್ಪಿಕೊಂಡಿದ್ದಾಳೆ. ತಾನೇ ಮಗಳನ್ನು ಸರೋವರಕ್ಕೆ ತಳ್ಳಿ ಕೊಂದಿದ್ದೇನೆ ಎಂದು ಹೇಳಿದ್ದಾಳೆ. ನಂತರ ಪೊಲೀಸರು ಬೆಳಿಗ್ಗೆ ಸರೋವರದಿಂದ ಮಗುವಿನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆರೋಪಿ ಮಹಿಳೆಯನ್ನು ವಶಕ್ಕೆ ತೆಗೆದುಕೊಂಡಿದ್ದು, ಈ ಘಟನೆ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
