Video – ನಿಯತ್ತು ಮತ್ತು ಬೆವರು ಸುರಿಸಿ ದುಡಿಯುವ ಕೈಗಳಿಗೆ ದ್ರೋಹ ಬಗೆಯಬಾರದು ಎಂಬುದು ಲೋಕ ನೀತಿ. ಆದರೆ, ಇಲ್ಲೊಂದು ಅಮಾನವೀಯ ಘಟನೆ ನಡೆದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ನಡೆದಿರುವುದು ಬಾಂಗ್ಲಾದೇಶದ ರಾಜಧಾನಿ ಢಾಕಾ ರೈಲು ನಿಲ್ದಾಣದಲ್ಲಿ. ಪ್ರಯಾಣಿಕನೊಬ್ಬ ರೈಲ್ವೆ ನಿಲ್ದಾಣದ ಪ್ರಾಮಾಣಿಕ ಕೂಲಿಯೊಬ್ಬನಿಗೆ ತಾನು ದುಡಿಸಿಕೊಂಡಿದ್ದ ಹಣವನ್ನು ಕೊಡದೇ ಮೋಸ ಮಾಡಿದ್ದಾನೆ. ಪಾಪ, ಆ ಕೂಲಿ ತನ್ನ ನ್ಯಾಯಯುತ ದುಡಿಮೆಯ ಹಣಕ್ಕಾಗಿ ಓಡುತ್ತಿದ್ದ ರೈಲಿನ ಹಿಂದೆ ಜೀವದ ಹಂಗು ತೊರೆದು ಓಡಿದ್ದಾನೆ.

Video – ‘ಸರ್ಪ್ಲೀಸ್ ನನ್ನ ಹಣ ನೀಡಿ’
ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ, ನೋಡಿದವರ ಕಣ್ಣಂಚಲ್ಲಿ ನೀರು ತರಿಸುವಂತಿದೆ. ಕೂಲಿ ಎಷ್ಟೇ ಅಂಗಲಾಚಿದರೂ, ಎಷ್ಟೇ ಕೇಳಿಕೊಂಡರೂ, ಆ ಪ್ರಯಾಣಿಕನ ಹೃದಯ ಕರಗಲಿಲ್ಲ. ಆತ ನಿರ್ದಯತೆಯಿಂದ ವರ್ತಿಸುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದು. ದುರದೃಷ್ಟವಶಾತ್, ಪಕ್ಕದಲ್ಲಿ ನಿಂತಿದ್ದ ಯಾರೂ ಕೂಡ ಆ ಕೂಲಿಯ ಸಹಾಯಕ್ಕೆ ಬರದಿರುವುದು ಮತ್ತಷ್ಟು ನೋವಿನ ಸಂಗತಿ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸೋಜೋಲ್ ಅಲಿ ಎಂಬುವವರು, “ನಿಮ್ಮ ಫೋನ್ ನಂಬರ್ ಹೇಳಿ, ನಾನು ಹಣ ಹಾಕುವೆ,” ಎಂದು ಕೂಲಿಗೆ ಹೇಳಿದರೂ, ಆತ ಪ್ರತಿಕ್ರಿಯೆ ನೀಡಲಿಲ್ಲ. ಕೇವಲ ಒಬ್ಬ ವ್ಯಕ್ತಿ ಮಾಡಿದ ಮೋಸ ಇಡೀ ಮನುಕುಲದ ಮೇಲೆ ಕಪ್ಪು ಚುಕ್ಕೆ ಇಟ್ಟಂತೆ ಭಾಸವಾಗುತ್ತದೆ.
Video – ನೆಟ್ಟಿಗರ ಆಕ್ರೋಶ: “ಮನುಷ್ಯ ಮೊದಲು ಮಾನವೀಯತೆ ಕಲಿಬೇಕು”
ಈ ವಿಡಿಯೋ ನೋಡಿದ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಿಯತ್ತಿನಿಂದ ದುಡಿಯುವ ಇಂತಹ ಕೂಲಿಗಳಿಗೆ ಮೋಸ ಮಾಡುವುದು ಸರಿಯಲ್ಲ. ಮೋಸ ಮಾಡುವ ಇಂತಹ ಜನರಿಗೆ ಸರಿಯಾದ ಶಿಕ್ಷೆ ಆಗಬೇಕು” ಎಂದು ಒತ್ತಾಯಿಸಿದ್ದಾರೆ.

- “ಹಣ ಕೊಡದ ವ್ಯಕ್ತಿಯ ಬಗ್ಗೆ ನನಗೆ ವಿಷಾದವಿದೆ, ಏಕೆಂದರೆ ಅವನು ದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. Read this also : ಚಿಲ್ಲರೆ ಇಲ್ಲವೆಂದಾಗ ‘ಪರವಾಗಿಲ್ಲ’ ಎಂದ ಆಟೋ ಡ್ರೈವರ್; ಆತನ ದೊಡ್ಡ ಮನಸ್ಸಿಗೆ ವಿದೇಶಿ ಮಹಿಳೆ ಕೊಟ್ಟ ಸ್ಪೆಷಲ್ ಸರ್ಪ್ರೈಸ್..!
- ಮತ್ತೊಬ್ಬರು, “ದಯವಿಟ್ಟು ಯಾರಾದರೂ ಅವನನ್ನು ಹುಡುಕಿ ಅವನ ಬಾಕಿ ಹಣವನ್ನು ಪಾವತಿಸಬಹುದೇ?” ಎಂದು ಕೇಳಿಕೊಂಡಿದ್ದಾರೆ.
- ಇನ್ನೊಬ್ಬರು, “ಪ್ರಯಾಣಿಕ ಮಾಡಿದ ಪಾಪವನ್ನು ಖಂಡಿತ ಕರ್ಮ ನೋಡಿಕೊಳ್ಳುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಮನುಷ್ಯತ್ವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಾವು ಮೊದಲು ಮಾನವೀಯತೆಯನ್ನು ಕಲಿಯಬೇಕು. ಪ್ರತಿಯೊಬ್ಬ ದುಡಿಮೆಗಾರನನ್ನು ಗೌರವದಿಂದ ಮತ್ತು ನ್ಯಾಯಯುತವಾಗಿ ನಡೆಸಿಕೊಳ್ಳುವ ಅಗತ್ಯವಿದೆ ಎಂಬ ಸಂದೇಶವನ್ನು ಈ ವೈರಲ್ ವಿಡಿಯೋ ಜಗತ್ತಿಗೆ ಸಾರಿದೆ.
