Thursday, November 21, 2024

Railway Recruitment 2024: ರೈಲ್ವೆ ಇಲಾಖೆಯ ಬೃಹತ್ ನೇಮಕಾತಿ, ಪದವಿ ಪಾಸಾಗಿದೆಯಾ ನೀವು ಅರ್ಜಿ ಹಾಕಿ…!

ಅನೇಕ ನಿರುದ್ಯೋಗಿಗಳಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಪಡೆಯುವ ಕನಸು ಹೋಂದಿರುತ್ತಾರೆ. ರೈಲ್ವೆ ಇಲಾಖೆ ಸಹ ಆಗಾಗ ತಮ್ಮ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸುತ್ತಿರುತ್ತದೆ. ಇದೀಗ ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ ನಾನ್ ಟೆಕ್ನಿಕಲ್ ಗ್ರಾಜುಯೇಟ್ ವಿಭಾಗದಲ್ಲಿ ಖಾಲಿಯಿರುವ (Railway Recruitment 2024) 8113 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಈಗಾಗಲೇ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅ.13 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಮುಂದೆ ತಿಳಿಯೋಣ.

RRB Non Technical Recruitment 8113 post

ಎಷ್ಟು ಹುದ್ದೆಗಳು ಖಾಲಿಯಿವೆ ಗೊತ್ತಾ?

  • ಮುಖ್ಯ ವಾಣಿಜ್ಯ ಕಮ್ ಟಿಕೆಟ್ ಮೇಲ್ವಿಚಾರಕ – 1,736 ಹುದ್ದೆಗಳು
  • ಸ್ಟೇಷನ್ ಮಾಸ್ಟರ್ – 994 ಹುದ್ದೆಗಳು
  • ಗೂಡ್ಸ್ ಟ್ರೈನ್ ಮ್ಯಾನೇಜರ್ – 3,144 ಸ್ಥಾನಗಳು
  • ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ – 1,507 ಹುದ್ದೆಗಳು
  • ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ – 732 ಹುದ್ದೆಗಳು

RRB ಬೆಂಗಳೂರು ನಲ್ಲಿ ಖಾಲಿಯಿರುವ ಹುದ್ದೆಗಳು:

  • ಟಿಕೆಟ್ ಮೇಲ್ವಿಚಾರಕರು: 51 ಹುದ್ದೆಗಳು
  • ಸ್ಟೇಷನ್ ಮಾಸ್ಟರ್: 116 ಹುದ್ದೆಗಳು
  • ಗೂಡ್ಸ್ ಟ್ರೈನ್ ಮ್ಯಾನೇಜರ್: 237 ಹುದ್ದೆಗಳು
  • ಅಕೌಂಟ್ಸ್ ಅಸಿಸ್ಟೆಂಟ್: 88 ಹುದ್ದೆಗಳು
  • ಸೀನಿಯರ್ ಕ್ಲರ್ಕ್: 4 ಹುದ್ದೆಗಳು

ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಅ.13ರೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದುಕೊಂಡಿರಬೇಕು. ಜೂನಿಯರ್‍ ಅಕೌಂಟ್ಸ್ ಅಸಿಸ್ಟೆಮಟ್ ಹಾಗೂ ಸೀನಿಯರ್‍ ಕ್ಲರ್ಕ್ ಹುದ್ದೆಗಳಿಗೆ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಹೆಚ್ಚುವರಿ ಕಂಪ್ಯೂಟರ್ ಟೈಪಿಂಗ್ ಕೌಶಲ್ಯಗಳು ಇರಬೇಕಾಗುತ್ತದೆ.

RRB Non Technical Recruitment 8113 post 2

ಅರ್ಜಿ ಶುಲ್ಕ:

ಅರ್ಹ ಅಭ್ಯರ್ಥಿಗಳಲ್ಲಿ ಪುರುಷರು, ಮಹಿಳೆಯರು  ಸೇರಿದ್ದಾರೆ. ಅರ್ಜಿ ಶುಲ್ಕವನ್ನು ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ₹500 ನಿಗದಿಪಡಿಸಲಾಗಿದ್ದು, ಎಸ್‌ಸಿ/ಎಸ್‌ಟಿ ಮತ್ತು ಮಾಜಿ ಸೈನಿಕರಿಗೆ ₹250 ನಿಗದಿಪಡಿಸಲಾಗಿದೆ.

ವಯಸ್ಸಿನ ಮಾನದಂಡ:

ಅರ್ಜಿದಾರರಿಗೆ ವಯಸ್ಸಿನ ಮಿತಿಯನ್ನು 18 ರಿಂದ 36 ವರ್ಷಗಳ ನಡುವೆ ನಿಗದಿಪಡಿಸಲಾಗಿದೆ. ಸರ್ಕಾರದ ನಿಯಮಗಳ ಪ್ರಕಾರ SC, ST, OBC ಮತ್ತು ಇತರ ವರ್ಗಗಳಿಗೆ ಸಡಿಲಿಕೆಗಳನ್ನು ಒದಗಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: (Selection Process)

ಈ ನೇಮಕಾತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT-1) : 100 ಅಂಕಗಳ ಮೌಲ್ಯದ ಪತ್ರಿಕೆ ಹಾಗೂ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT-2) : 120 ಅಂಕಗಳ ಒಂದು ಪತ್ರಿಕೆ. CBT-1 ರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮಾತ್ರ CBT-2 ಗೆ ಹಾಜರಾಗಲು ಅರ್ಹರಾಗಿರುತ್ತಾರೆ. ಈ ಹಂತಗಳನ್ನು ಪೂರ್ಣಗೊಳಿಸಿದ ಬಳಿಕ  ಅಂತಿಮವಾಗಿ ದಾಖಲೆಗಳ ಪ್ರಕ್ರಿಯೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ.  ವಿವರವಾದ ಉದ್ಯೋಗ ವರ್ಗೀಕರಣಗಳು, ಪರೀಕ್ಷೆಯ ಪಠ್ಯಕ್ರಮಗಳು ಮತ್ತು ಇತರ ಅಗತ್ಯ ಮಾಹಿತಿಯನ್ನು ಪರಿಶೀಲಿಸಲು ಅಭ್ಯರ್ಥಿಗಳು ತಮ್ಮ RRB ಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ. RRB ಬೆಂಗಳೂರಿಗಾಗಿ, ಅಧಿಕೃತ ವೆಬ್‌ಸೈಟ್ www.rrbbnc.gov.in ತಾಣಕ್ಕೆ ಭೇಟಿ ನೀಡಬಹುದಾಗಿದೆ.

ಅರ್ಜಿಯನ್ನು ಹೀಗೆ ಸಲ್ಲಿಸಿ :

  • ಹಂತ 1: ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ ಗೆ (Official Website) ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
    https://www.rrbapply.gov.in/
  • ಹಂತ 2: ನಂತರ ನೋಂದಣಿಯನ್ನು ಮಾಡಿಕೊಳ್ಳಿ. ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ಹಂತ 3: ಅಭ್ಯರ್ಥಿಗಳು ಫೋಟೋ, ಸಹಿ, ಹುಟ್ಟಿದ ದಿನಾಂಕದ ದಾಖಲೆ,  ಗುರುತಿನ ಪುರಾವೆ, ಅಗತ್ಯ ಅರ್ಹತೆಯ ಮಾರ್ಕ್‌ಶೀಟ್, ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ). ಹೀಗೆ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು
  • ಹಂತ 4: ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದಲ್ಲಿ)
  • ಹಂತ 5: ಸಂಪೂರ್ಣ ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಲು ಮತ್ತು ಪರಿಶೀಲಿಸಲು ಪೂರ್ವವೀಕ್ಷಣೆ ಆಯ್ಕೆ ಮೇಲೆ ಕ್ಲಿಕ್ ಮಾಡಿ
  • ಹಂತ 6: ಅಂತಿಮ ಸಲ್ಲಿಕೆ ಮೊದಲು, ಅಗತ್ಯವಿದ್ದಲ್ಲಿ ವಿವರಗಳನ್ನು ಮಾರ್ಪಡಿಸಿ ಮತ್ತು ನೀವು ಭರ್ತಿ ಮಾಡಿದ ಫೋಟೋ, ಸಹಿ ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ಬಳಿಕ ಅಂತಿಮವಾಗಿ ತಮ್ಮ ಅರ್ಜಿ ಸಬ್ಮಿಟ್ ಮಾಡಿ
by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!