Monday, February 16, 2026
HomeSpecialರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಇನ್ಮುಂದೆ ಹತ್ತಾರು ಆ್ಯಪ್ ಬೇಡ, 'ರೈಲ್ ಒನ್' (RailOne App)...

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಇನ್ಮುಂದೆ ಹತ್ತಾರು ಆ್ಯಪ್ ಬೇಡ, ‘ರೈಲ್ ಒನ್’ (RailOne App) ಒಂದೇ ಸಾಕು!

ನೀವು ರೈಲಿನಲ್ಲಿ ಪದೇ ಪದೇ ಪ್ರಯಾಣಿಸುವವರೇ? ಟಿಕೆಟ್ ಬುಕ್ ಮಾಡಲು ಒಂದು ಆ್ಯಪ್, ಸ್ಟೇಟಸ್ ನೋಡಲು ಇನ್ನೊಂದು, ಊಟ ಆರ್ಡರ್ ಮಾಡಲು ಮತ್ತೊಂದು ಆ್ಯಪ್ ಬಳಸಿ ಸುಸ್ತಾಗಿದ್ದೀರಾ? ಹಾಗಿದ್ದರೆ ನಿಮಗೊಂದು ಭರ್ಜರಿ ಸುದ್ದಿ. ಭಾರತೀಯ ರೈಲ್ವೆಯು ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ಒನ್‘ (RailOne App) ಎಂಬ ಹೊಸ ಆಲ್ ಇನ್ ಒನ್ ಅಪ್ಲಿಕೇಶನ್ ಪರಿಚಯಿಸುತ್ತಿದೆ. ಈ ಹೊಸ ಬದಲಾವಣೆಯಿಂದಾಗಿ ಇನ್ಮುಂದೆ ನಿಮ್ಮ ಫೋನ್ ಮೆಮೊರಿ ಉಳಿಯುವುದಲ್ಲದೆ, ರೈಲ್ವೆ ಸೇವೆಗಳು ಬೆರಳ ತುದಿಯಲ್ಲೇ ಸಿಗಲಿವೆ.

RailOne app interface showing ticket booking, live train status and food ordering features

RailOne App – ಏನಿದು ‘ರೈಲ್‌ಒನ್’ ಆ್ಯಪ್?

ಇದುವರೆಗೆ ನಾವು ಕಾಯ್ದಿರಿಸದ (Unreserved) ಟಿಕೆಟ್‌ಗಳಿಗಾಗಿ UTS ಆ್ಯಪ್ ಮತ್ತು ಕಾಯ್ದಿರಿಸಿದ ಟಿಕೆಟ್‌ಗಳಿಗಾಗಿ IRCTC ಆ್ಯಪ್ ಬಳಸುತ್ತಿದ್ದೆವು. ಆದರೆ ಮಾರ್ಚ್ 1 ರಿಂದ ಹಂತ-ಹಂತವಾಗಿ UTS ಆ್ಯಪ್ ಸೇವೆಯನ್ನು ಸ್ಥಗಿತಗೊಳಿಸಿ, (RailOne App) ಎಲ್ಲವನ್ನೂ ರೈಲ್‌ಒನ್’ ಅಡಿಯಲ್ಲಿ ತರಲಾಗುತ್ತಿದೆ.

ವಿಶೇಷತೆ ಏನೆಂದರೆ: ನೀವು ಹೊಸದಾಗಿ ನೋಂದಣಿ (Registration) ಮಾಡುವ ಅಗತ್ಯವಿಲ್ಲ. ನಿಮ್ಮ ಹಳೆಯ IRCTC ಅಥವಾ UTS ಲಾಗಿನ್ ವಿವರಗಳನ್ನು ಬಳಸಿಯೇ ಈ ಹೊಸ ಆ್ಯಪ್‌ಗೆ ಲಾಗಿನ್ ಆಗಬಹುದು. Read this also : ಮಹಿಳೆಯರಿಗೆ ಕೇಂದ್ರದಿಂದ ಬಂಪರ್ ಗಿಫ್ಟ್: ಉಚಿತ ಗ್ಯಾಸ್ ಸಿಲಿಂಡರ್ ಜೊತೆಗೆ ಸ್ಟೌವ್ ಕೂಡ ಫ್ರೀ! ಇಂದೇ ಅರ್ಜಿ ಸಲ್ಲಿಸಿ..!

ಒಂದೇ ಆ್ಯಪ್‌ನಲ್ಲಿ ಸಿಗುವ ಪ್ರಮುಖ ಸೌಲಭ್ಯಗಳು:

ರೈಲ್ವೆ ಇಲಾಖೆಯು ಈ ಪ್ಲಾಟ್‌ಫಾರ್ಮ್ ಅನ್ನು ಅತ್ಯಂತ ಜನಸ್ನೇಹಿಯಾಗಿ ರೂಪಿಸಿದ್ದು, ಈ ಕೆಳಗಿನ ಸೌಲಭ್ಯಗಳನ್ನು ನೀಡಿದೆ:

  • ಎಲ್ಲಾ ಮಾದರಿಯ ಟಿಕೆಟ್ ಬುಕಿಂಗ್: ಕಾಯ್ದಿರಿಸಿದ (Reserved), ಕಾಯ್ದಿರಿಸದ (Unreserved), ಪ್ಲಾಟ್‌ಫಾರ್ಮ್ ಟಿಕೆಟ್ ಮತ್ತು ಸೀಸನ್ ಟಿಕೆಟ್‌ಗಳನ್ನು ಸುಲಭವಾಗಿ ಬುಕ್ ಮಾಡಬಹುದು.
  • ಲೈವ್ ಟ್ರೈನ್ ಅಪ್ಡೇಟ್: ನಿಮ್ಮ ರೈಲು ಎಲ್ಲಿದೆ? (RailOne App) ಎಷ್ಟು ಹೊತ್ತಿಗೆ ಬರಲಿದೆ? ಎಂಬ ಲೈವ್ ಮಾಹಿತಿಯನ್ನು ಈ ಆ್ಯಪ್ ಮೂಲಕವೇ ಪಡೆಯಬಹುದು.
  • ಸೀಟಿಗೆ ಬರುತ್ತೆ ಬಿಸಿಬಿಸಿ ಊಟ: ಪ್ರಯಾಣದ ಸಮಯದಲ್ಲಿ ಹಸಿವಾದರೆ ಚಿಂತೆ ಬೇಡ. IRCTC ಅನುಮೋದಿತ ಮಾರಾಟಗಾರರಿಂದ ನೇರವಾಗಿ ನಿಮ್ಮ ಸೀಟಿಗೆ ಆಹಾರವನ್ನು ಆರ್ಡರ್ ಮಾಡಬಹುದು.
  • ಸುರಕ್ಷಿತ ಪಾವತಿ ವ್ಯವಸ್ಥೆ: ಯುಪಿಐ (UPI), ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು, ನೆಟ್ ಬ್ಯಾಂಕಿಂಗ್ ಮತ್ತು ಆರ್‌-ವ್ಯಾಲೆಟ್ (R-Wallet) ಮೂಲಕ ಸುರಕ್ಷಿತವಾಗಿ ಹಣ ಪಾವತಿಸಬಹುದು.

RailOne app interface showing ticket booking, live train status and food ordering features

ಸರತಿ ಸಾಲಿಗೆ ಗುಡ್ ಬೈ ಹೇಳಿ!

ರೈಲ್ವೆ ನಿಲ್ದಾಣಗಳಲ್ಲಿ ಟಿಕೆಟ್ ಪಡೆಯಲು ದೀರ್ಘಕಾಲ (RailOne App) ಕಾಯುವುದು ಅಥವಾ ಸರತಿ ಸಾಲಿನಲ್ಲಿ ನಿಲ್ಲುವ ಕಿರಿಕಿರಿ ತಪ್ಪಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಡಿಜಿಟಲ್ ಇಂಡಿಯಾ ಯೋಜನೆಯಡಿ ರೈಲ್ವೆ ಸೇವೆಯನ್ನು ಇನ್ನಷ್ಟು ಪಾರದರ್ಶಕ ಮತ್ತು ವೇಗವಾಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ನೆನಪಿಡಿ: ಮಾರ್ಚ್ 1 ರಿಂದ ಹಂತ ಹಂತವಾಗಿ ಬದಲಾವಣೆಗಳು ಜಾರಿಗೆ ಬರಲಿವೆ. ಆದ್ದರಿಂದ ಇಂದೇ ಹೊಸ ‘ರೈಲ್ ಒನ್’ ಪ್ಲಾಟ್‌ಫಾರ್ಮ್ ಬಗ್ಗೆ ತಿಳಿದುಕೊಳ್ಳಿ ಮತ್ತು ನಿಮ್ಮ ಪ್ರಯಾಣವನ್ನು ಸುಗಮವಾಗಿಸಿಕೊಳ್ಳಿ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular