ನಂಬಿಕೆ ದ್ರೋಹವೋ ಅಥವಾ ವಿಧಿಯಾಟವೋ ಗೊತ್ತಿಲ್ಲ, ಆದರೆ ಒಂದು ಸಣ್ಣ ನಿರ್ಧಾರ ಮನುಷ್ಯನ ಜೀವನವನ್ನು ಹೇಗೆ ನರಕ ಸದೃಶ ಮಾಡಬಲ್ಲದು ಎಂಬುದಕ್ಕೆ ಪಂಜಾಬ್‌ನ ಸರಬೀತ್ ಕೌರ್ (Punjab Woman Pakistan) ಅವರ ಕಥೆಯೇ ಸಾಕ್ಷಿ. “ನನ್ನನ್ನು ಇಲ್ಲಿ ಬಲವಂತವಾಗಿ ಇರಿಸಲಾಗಿದೆ, ದಯವಿಟ್ಟು ನನ್ನನ್ನು ಭಾರತಕ್ಕೆ ಕರೆಸಿಕೊಳ್ಳಿ” ಎಂದು ಅಳುತ್ತಿರುವ ಮಹಿಳೆಯ ಆಡಿಯೋ ಈಗ ಇಡೀ ದೇಶದ ಗಮನ ಸೆಳೆದಿದೆ.

Punjab Woman Pakistan – ಏನಿದು ಘಟನೆ?
ಪಂಜಾಬ್‌ನ ಕಪುರ್ತಲಾ ಜಿಲ್ಲೆಯ ಅಮಾನಿಪುರ ಗ್ರಾಮದ 48 ವರ್ಷದ ಸರಬೀತ್ ಕೌರ್, ಕಳೆದ ನವೆಂಬರ್‌ನಲ್ಲಿ (2025) ಗುರುನಾನಕ್ ದೇವ್ ಅವರ ಜನ್ಮದಿನಾಚರಣೆಗಾಗಿ ಸುಮಾರು 2,000 ಯಾತ್ರಿಕರೊಂದಿಗೆ ಪಾಕಿಸ್ತಾನಕ್ಕೆ ತೆರಳಿದ್ದರು. ಆದರೆ, ಎಲ್ಲರೂ ಭಾರತಕ್ಕೆ ಮರಳಿದರೂ ಸರಬೀತ್ ಮಾತ್ರ ಬರಲಿಲ್ಲ. ನಂತರ ತಿಳಿದುಬಂದ ವಿಷಯವೇನೆಂದರೆ, ಅವರು ಲಾಹೋರ್ ಸಮೀಪದ ನಾಸಿರ್ ಹುಸೇನ್ ಎಂಬ ವ್ಯಕ್ತಿಯನ್ನು ವಿವಾಹವಾಗಿ ‘ನೂರ್’ ಎಂದು ಹೆಸರು ಬದಲಾಯಿಸಿಕೊಂಡಿದ್ದರು.
ವೈರಲ್ ಆದ ನೋವಿನ ಆಡಿಯೋ
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಆಡಿಯೋದಲ್ಲಿ ಸರಬೀತ್ ಅವರು ಭಾರತದಲ್ಲಿರುವ ತಮ್ಮ ಪತಿ ಕರ್ನೈಲ್ ಸಿಂಗ್ ಅವರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಆ ಆಡಿಯೋದಲ್ಲಿನ ಮುಖ್ಯಾಂಶಗಳು ಇಲ್ಲಿವೆ:
- ಬಲವಂತದ ಮತಾಂತರ: “ನನ್ನ ಇಚ್ಛೆಗೆ ವಿರುದ್ಧವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ. ಇಲ್ಲಿ ನನಗೆ ಯಾವುದೇ ಸ್ವಾತಂತ್ರ್ಯವಿಲ್ಲ.”
- ಬಡತನದ ಬೇಗೆ: “ಪ್ರತಿ ಪೈಸೆಗೂ ನಾನು ಪರದಾಡುತ್ತಿದ್ದೇನೆ. (Punjab Woman Pakistan) ಮೈತುಂಬಾ ಬಟ್ಟೆಯೂ ಇಲ್ಲದೆ ನರಳುತ್ತಿದ್ದೇನೆ.”
- ಮಕ್ಕಳ ನೆನಪು: “ನನ್ನ ಮಕ್ಕಳನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರನ್ನು ಚಿಕ್ಕವರಿಂದ ನಾನೇ ಸಾಕಿ ಬೆಳೆಸಿದ್ದು, ಈಗ ಅವರ ಬಳಿಗೆ ಹೋಗಬೇಕು.” Read this also : ಅಬ್ಬಬ್ಬಾ.. ಎಂಥಾ ಧೈರ್ಯ! ಹಸುವಿನ ಕುತ್ತಿಗೆ ಕಚ್ಚಿ ಹಿಡಿದ ಚಿರತೆ; ಈ ವಿಡಿಯೋ ನೋಡಿದರೆ ಶಾಕ್ ಆಗ್ತೀರಾ!
“ನಾನು ಜೀವನದಲ್ಲಿ ದೊಡ್ಡ ತಪ್ಪು ಮಾಡಿಬಿಟ್ಟೆ. ದಯವಿಟ್ಟು ನನ್ನನ್ನು ಇಲ್ಲಿಂದ ರಕ್ಷಿಸಿ” ಎಂದು ಸರಬೀತ್ ಆಡಿಯೋದಲ್ಲಿ ಹತಾಶೆಯಿಂದ ಕೇಳಿಕೊಂಡಿದ್ದಾರೆ.
ಸಂಬಂಧಿಸಿದ ಪೋಸ್ಟ್ ಇಲ್ಲಿದೆ ನೋಡಿ : Click Here | Click Here
ಪತಿ ಕರ್ನೈಲ್ ಸಿಂಗ್ ನೀಡಿದ ಗಂಭೀರ ಆರೋಪಗಳೇನು?
ಸರಬೀತ್ ಅವರ ಭಾರತೀಯ ಪತಿ ಕರ್ನೈಲ್ ಸಿಂಗ್ ಅವರು ಪಾಕಿಸ್ತಾನದ ವ್ಯಕ್ತಿಯ ವಿರುದ್ಧ ಗಂಭೀರ ದೂರನ್ನು ನೀಡಿದ್ದಾರೆ. “ನನ್ನ ಪತ್ನಿಗೆ (Punjab Woman Pakistan) ಗನ್ ತೋರಿಸಿ ಬೆದರಿಸಿ, ಮತಾಂತರ ಮಾಡಿ ಮದುವೆಯಾಗಿದ್ದಾರೆ. ಆಕೆಯ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ಆಡಿಯೋ ಪುರಾವೆಗಳು ನನ್ನ ಬಳಿ ಇವೆ” ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಗಡಿಪಾರು ಪ್ರಕ್ರಿಯೆ ನಿಂತಿದ್ದೇಕೆ?
ವರದಿಗಳ ಪ್ರಕಾರ, ಕಳೆದ ವಾರ ಪಾಕಿಸ್ತಾನಿ ಅಧಿಕಾರಿಗಳು ಸರಬೀತ್ ಅವರನ್ನು ವಾಘಾ ಗಡಿಯ ಮೂಲಕ ಭಾರತಕ್ಕೆ ಕಳುಹಿಸಲು ಸಿದ್ಧತೆ ನಡೆಸಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಯಾವುದೇ ಕಾರಣ ನೀಡದೆ ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಇದು ಸರಬೀತ್ ಅವರ ಕುಟುಂಬದಲ್ಲಿ ಆತಂಕವನ್ನು ಇಮ್ಮಡಿಗೊಳಿಸಿದೆ.
