ಇಂದಿನ ವೇಗದ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆಲುವು ಸಾಧಿಸುವುದು ಸುಲಭವಲ್ಲ. ಆದರೆ, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡರೆ ಯಶಸ್ಸು ಖಂಡಿತ ಸಾಧ್ಯ. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಗುರಿಯನ್ನು ಪದವಿ ಹಂತದಲ್ಲಿಯೇ ನಿಗದಿಪಡಿಸಿಕೊಂಡು ಸಾಗಿದಾಗ ಮಾತ್ರ ಸಾಧನೆಯ ಶಿಖರ ಏರಲು ಸಾಧ್ಯ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ನಾಗಮಣಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ (PM USHA Scheme) ಪಿಎಂ ಉಷಾ ಯೋಜನೆಯಡಿ ಆಯೋಜಿಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

PM USHA Scheme – ಯುವಜನತೆಗೆ ಮೊಬೈಲ್ ವ್ಯಸನದ ಎಚ್ಚರಿಕೆ
ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನ ವರವಾಗುವ ಬದಲು ಶಾಪವಾಗುತ್ತಿದೆ ಎಂಬ ಆತಂಕವನ್ನು ನಾಗಮಣಿ ಅವರು ವ್ಯಕ್ತಪಡಿಸಿದರು. ಮೊಬೈಲ್ ಮತ್ತು ಇಂಟರ್ನೆಟ್ ಬಳಕೆ ಮಿತಿ ಮೀರಬಾರದು ಎಂದು ತಿಳಿಸಿದ ಅವರು, ಇತ್ತೀಚಿನ ದಿನಗಳಲ್ಲಿ ಯುವಜನತೆ ಇಂತಹ ಹವ್ಯಾಸಗಳಿಗೆ ಬಲಿಯಾಗಿ ಹಾದಿ ತಪ್ಪುತ್ತಿರುವುದು ಕೇವಲ ಒಂದು ಕುಟುಂಬಕ್ಕೆ ಮಾತ್ರವಲ್ಲ, ಇಡೀ ದೇಶದ ಪ್ರಗತಿಗೆ ಮಾರಕವಾಗಿದೆ ಎಂದು ಎಚ್ಚರಿಸಿದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿ ಪ್ರಮಾಣಪತ್ರ ಪಡೆದರೆ ಸಾಲದು, ಬದಲಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಉನ್ನತ ಮಟ್ಟದ ಸ್ಪರ್ಧೆಗೆ ಸಜ್ಜಾಗಬೇಕು ಎಂದು ಅವರು ಕರೆ ನೀಡಿದರು. Read this also : ಹಳ್ಳಿಗಳ ಸುಸ್ಥಿರ ಅಭಿವೃದ್ಧಿಗೆ ‘ಸೌರಶಕ್ತಿ’ಯೇ ಮದ್ದು: ಗುಡಿಬಂಡೆಯಲ್ಲಿ ‘ನೆಟ್ ಜೀರೋ ವಿಲೇಜ್’ ಕ್ರಾಂತಿ!
ಗುರಿ ಮತ್ತು ಶಿಸ್ತುಬದ್ಧ ತಯಾರಿಯ ಅಗತ್ಯತೆ
ಸ್ಪರ್ಧಾತ್ಮಕ ಪರೀಕ್ಷೆಗಳನ್ನು (PM USHA Scheme) ಎದುರಿಸಲು ಕೇವಲ ಓದೊಂದೇ ಸಾಲದು, ಅದಕ್ಕೊಂದು ಶಿಸ್ತುಬದ್ಧ ತಯಾರಿ ಬೇಕು ಎಂದು ಇಒ ತಿಳಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಹುದ್ದೆಗಳ ಪರೀಕ್ಷಾ ಪಠ್ಯಕ್ರಮ ಹಾಗೂ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ವಿದ್ಯಾರ್ಥಿಗಳು ಪದವಿ ಹಂತದಲ್ಲಿಯೇ ಅರಿವು ಬೆಳೆಸಿಕೊಳ್ಳಬೇಕು. ಪರೀಕ್ಷೆಗಳನ್ನು ಎದುರಿಸುವ ಸರಿಯಾದ ತಂತ್ರಗಾರಿಕೆ, ನಿರಂತರ ಅಧ್ಯಯನ ಮತ್ತು ಕಟ್ಟುನಿಟ್ಟಾದ ಶಿಸ್ತು ಯಶಸ್ಸಿಗೆ ಅನಿವಾರ್ಯವಾಗಿದೆ ಎಂದು ಅವರು ಕಿವಿಮಾತು ಹೇಳಿದರು.

ಸಮಯ ನಿರ್ವಹಣೆ ಹಾಗೂ ಆತ್ಮವಿಶ್ವಾಸದ ಪ್ರಾಮುಖ್ಯತೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಫ್ಜಲ್ ಬಿಜಿಲಿ ಅವರು ಮಾತನಾಡಿ, ವಿದ್ಯಾರ್ಥಿ ಜೀವನದ ಈ ಘಟ್ಟ ಅತ್ಯಂತ ಅಮೂಲ್ಯವಾದುದು ಎಂದು ಬಣ್ಣಿಸಿದರು. ಸರಿಯಾದ (PM USHA Scheme) ಮಾರ್ಗದರ್ಶನ ಮತ್ತು ಸಮಯ ನಿರ್ವಹಣೆಯ ಮೂಲಕ ಭವಿಷ್ಯದಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಲು ಸಾಧ್ಯವಿದೆ. ಸ್ಪರ್ಧಾತ್ಮಕ ಮನೋಭಾವ, ಆತ್ಮವಿಶ್ವಾಸ ಮತ್ತು ಸತತ ಪ್ರಯತ್ನವೇ ಯಶಸ್ಸಿನ ಕೀಲಿಕೈ ಎಂದು ತಿಳಿಸಿದ ಅವರು, ವಿದ್ಯಾರ್ಥಿಗಳು ಯಾವಾಗಲೂ ಕಲಿಯುವ ಮತ್ತು ಸಿದ್ಧತೆ ನಡೆಸುವ ಮನಸ್ಥಿತಿಯನ್ನು ಹೊಂದಿರಬೇಕು ಎಂದು ಸಲಹೆ ನೀಡಿದರು. Read this also : ಏಪ್ರಿಲ್ 2026 ರಿಂದ ಹೊಸ ಹಣಕಾಸು ನಿಯಮಗಳು: ನಿಮ್ಮ ಜೇಬಿನ ಮೇಲೆ ಬೀರುವ ಪ್ರಭಾವವೇನು? ಇಂದೇ ತಿಳಿದುಕೊಳ್ಳಿ!
ಗಣ್ಯರ ಉಪಸ್ಥಿತಿ
ಈ ವಿಶೇಷ ತರಬೇತಿ (PM USHA Scheme) ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕರಾದ ಡಾ. ನಯಾಜ್, ಡಾ. ಪ್ರಭಾಕರ್, ಡಾ. ಮಂಜಣ್ಣ, ಜಯಚಂದ್ರ, ಮಂಜಪ್ಪ, ಅಂಜಪ್ಪ, ಆದಿನಾರಾಯಣಪ್ಪ, ಅಶ್ವತ್, ಸುನಿಲ್, ನಾಗದೀಪ್ತಿ, ಸುಜಾತ ಮತ್ತು ಸುಧಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
