ಕೇಂದ್ರ ಸರ್ಕಾರ ರೈತರಿಗಾಗಿ ಜಾರಿಗೆ ತಂದಂತಹ ಮಹತ್ತರ ಯೋಜನೆ ಪಿಎಂ ಕಿಸಾನ್ ಸಮ್ಮಾನ್ ನಿಧಿ. ಈ ಯೋಜನೆಯ ಮೂಲಕ ವರ್ಷಕ್ಕೆ 6 ಸಾವಿರ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ. ಇದೀಗ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 18ನೇ ಕಂತಿಗಾಗಿ ನೊಂದಾಯಿತ ರೈತರು ಕಾಯುತ್ತಿದ್ದಾರೆ. ರೈತರಿಗೆ ಗುಡ್ ನ್ಯೂಸ್ ಸಿಗಲಿದ್ದು, ಅ.5 ರಂದು ಮಹಾರಾಷ್ಟ್ರದ ವಾಶಿಮ್‌ನಿಂದ ಪಿಎಂ ಕಿಸಾನ್ ನ ಮುಂದಿನ ಕಂತಿಗೆ (PM Kisan 18th Installment 2024) ಚಾಲನೆ ನೀಡಲಿದ್ದಾರೆ.
ಅ.5 ರಂದು ಮಹಾರಾಷ್ಟ್ರದ ವಾಶಿಮ್‌ನಿಂದ ಪಿಎಂ ಕಿಸಾನ್ ನ 18ನೇ ಕಂತಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಅವರು 9.5 ಕೋಟಿ ಫಲಾನುಭವಿ ರೈತರ ಖಾತೆಗಳಿಗೆ ರೂ.20,000 ಕೋಟಿ ವರ್ಗಾವಣೆ ಮಾಡಲಾಗುತ್ತದೆ. ಕೇಂದ್ರ ಸರ್ಕಾರವು ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆ (Pradhan Mantri Kisan Samman Yojana) ಅಡಿಯಲ್ಲಿ ಪ್ರತಿ ವರ್ಷ ರೂ. 6 ಸಾವಿರ ರೂಪಾಯಿಗಳನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ. ರೈತರ ಬ್ಯಾಂಕ್ ಖಾತೆಗೆ ಮೂರು ಕಂತುಗಳಲ್ಲಿ ರೂ. 2 ಸಾವಿರ ಜಮಾ ಮಾಡಲಾಗುತ್ತದೆ. ಪಿಎಂ ಕಿಸಾನ್‌ನ 17 ಕಂತುಗಳನ್ನು ಇಲ್ಲಿಯವರೆಗೆ ಬಿಡುಗಡೆ ಮಾಡಲಾಗಿದೆ. ಈಗ 18ನೇ ಕಂತು ಕೆಲವೇ ದಿನಗಳಲ್ಲಿ ನೊಂದಾಯಿತ ರೈತರ ಖಾತೆಗೆ ಸೇರಲಿದೆ.
ಇನ್ನೂ ಪಿಎಂ ಕಿಸಾನ್ ಯೋಜನೆ (PM Kisan)ಗೆ ನೊಂದಣಿ ಮಾಡುವಾಗ ಯಾವುದೇ ಮಾಹಿತಿಯನ್ನು ತಪ್ಪಾಗಿ ನಮೂದಿಸಿದ್ದರೇ ನಿಮಗೆ 18ನೇ ಕಂತು ಬರುವುದಿಲ್ಲ. ನೊಂದಣಿ ಮಾಡುವಾಗ ವಿಳಾಸ, ಬ್ಯಾಂಕ್ ಖಾತೆ ಸೇರಿದಂತೆ ಪ್ರತಿಯೊಂದನ್ನು ನಿಖರವಾಗಿ ನಮೂದಿಸಬೇಕು. NPCI ನಲ್ಲಿ ಆಧಾರ್ ಸೀಡಿಂಗ್ ಆಗದೇ ಇದ್ದರೂ PFMS ನಲ್ಲಿ ದಾಖಲೆಗಳನ್ನು ಸ್ವೀಕರಿಸದೇ ಇದ್ದರೂ ಅಥವಾ ರೈತರು ಇ-ಕೆವೈಸಿ ಮಾಡಿಸದೇ ಇದ್ದರೂ ಸಹ 18ನೇ ಕಂತಿನ ಪಿಎಂ ಕಿಸಾನ್ ಹಣ ನಿಮ್ಮ ಖಾತೆಗೆ ಬರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಇಲಾಖೆ ಅಥವಾ ಸಾಮಾನ್ಯ ಸೇವಾ ಕೇಂದ್ರಗಳು, ಗ್ರಾಮ ಒನ್ ಗಳನ್ನು ಸಂಪರ್ಕ ಮಾಡಬಹುದು.
PM Kisan ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸುವ ವಿಧಾನ:
- ಪಿಎಂ ಕಿಸಾನ್ ಯೋಜನೆಯ ಲಿಂಕ್ https://pmkisan.gov.in/ ಗೆ ಭೇಟಿ ನೀಡಿ.
- Farmer corner ಮೇಲೆ ಕ್ಲಿಕ್ ಮಾಡಿ.
- ಈಗ Beneficiary List ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಒಂದು ಫಾರ್ಮ್ ಒಪೆನ್ ಆಗುತ್ತದೆ.
- ಈ ಫಾರ್ಮ್‌ನಲ್ಲಿ ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿ Get Report ಆಯ್ಕೆ ಮಾಡಿ.
- ನಿಮ್ಮ ಗ್ರಾಮದ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ.
- ಈ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ, ಹೆಸರಿದ್ದರೆ ನಿಮಗೆ ಹಣ ಬರುತ್ತದೆ.
- ಒಂದು ವೇಳೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೇ ಇದ್ದರೇ ತಕ್ಷಣ ತಪ್ಪನ್ನು ಸರಿಪಡಿಸಿ.