PGCIL Recruitment 2025 – ಎಂಜಿನಿಯರಿಂಗ್ ಪದವಿ ಮುಗಿಸಿ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಯುವಕರಿಗೆ ಒಂದು ಸಂತಸದ ಸುದ್ದಿ. ಭಾರತದ ಅತಿದೊಡ್ಡ ಪವರ್ ಟ್ರಾನ್ಸ್‌ಮಿಷನ್ ಕಂಪನಿಯಾದ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL) ಫೀಲ್ಡ್ ಇಂಜಿನಿಯರ್ ಮತ್ತು ಫೀಲ್ಡ್ ಸೂಪರ್‌ವೈಸರ್ ಹುದ್ದೆಗಳಿಗೆ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 1543 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
PGCIL Recruitment 2025 – ಅರ್ಜಿ ಸಲ್ಲಿಕೆ ಮಾಹಿತಿ ಮತ್ತು ಪ್ರಮುಖ ದಿನಾಂಕಗಳು
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆಗಸ್ಟ್ 27, 2025 ರಿಂದ ಪ್ರಾರಂಭವಾಗಿದೆ. ಆಸಕ್ತರು ಸೆಪ್ಟೆಂಬರ್ 27, 2025 ರೊಳಗೆ ಅಧಿಕೃತ ವೆಬ್‌ಸೈಟ್ powergrid.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಈ ಅವಕಾಶವನ್ನು ಯಾರು ಕಳೆದುಕೊಳ್ಳಬಾರದು.
ವಿದ್ಯಾರ್ಹತೆ ಮತ್ತು ವಯೋಮಿತಿ ವಿವರಗಳು
ಈ ನೇಮಕಾತಿಯಲ್ಲಿ ಅರ್ಹತಾ ಮಾನದಂಡಗಳು ಬಹಳ ಸ್ಪಷ್ಟವಾಗಿವೆ. ನೀವು ಅರ್ಜಿ ಸಲ್ಲಿಸಲು ಇಚ್ಚಿಸಿದರೆ, ಕೆಳಗಿನ ವಿವರಗಳನ್ನು ಸರಿಯಾಗಿ ಓದಿಕೊಳ್ಳಿ. Read this also : BSF ನಿಂದ 1,121 ಹೆಡ್ ಕಾನ್ಸ್ ಟೇಬಲ್ ಹುದ್ದೆಗಳ ಭರ್ತಿ, ಸಂಪೂರ್ಣ ಮಾಹಿತಿ ಇಲ್ಲಿದೆ…!
ಫೀಲ್ಡ್ ಇಂಜಿನಿಯರ್ ಹುದ್ದೆಗಳು
ಫೀಲ್ಡ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿವಿಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಭಾಗಗಳಲ್ಲಿ ಬಿಇ/ಬಿಟೆಕ್ ಅಥವಾ ಬಿಎಸ್ಸಿ ಇಂಜಿನಿಯರಿಂಗ್ ಪದವಿ ಯನ್ನು ಶೇ. 55 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇದರೊಂದಿಗೆ ಒಂದು ವರ್ಷದ ಕೆಲಸದ ಅನುಭವ ಕಡ್ಡಾಯ.
ಫೀಲ್ಡ್ ಸೂಪರ್‌ವೈಸರ್ ಹುದ್ದೆಗಳು
ಇನ್ನು ಫೀಲ್ಡ್ ಸೂಪರ್‌ವೈಸರ್ ಹುದ್ದೆಗಳಿಗೆ, ಅದೇ ವಿಷಯಗಳಲ್ಲಿ ಡಿಪ್ಲೊಮಾ ವಿದ್ಯಾರ್ಹತೆಯನ್ನು ಶೇ. 55 ಅಂಕಗಳೊಂದಿಗೆ ಪಡೆದಿರಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ಗರಿಷ್ಠ ವಯಸ್ಸು 29 ವರ್ಷಗಳು. ಮೀಸಲಾತಿ ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ವಯಸ್ಸನ್ನು ಸೆಪ್ಟೆಂಬರ್ 17, 2025 ರಿಂದ ಲೆಕ್ಕ ಹಾಕಲಾಗುತ್ತದೆ.
PGCIL Recruitment 2025 – ವೇತನ ಶ್ರೇಣಿ
ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ ಆಕರ್ಷಕ ವೇತನ ಪ್ಯಾಕೇಜ್ ನೀಡಲಾಗುತ್ತದೆ.
- ಫೀಲ್ಡ್ ಇಂಜಿನಿಯರ್: ಆರಂಭಿಕ ಮೂಲ ವೇತನ ₹30,000 ಆಗಿದ್ದು, ಇದು ₹30,000–1,20,000 ವರೆಗೆ ಇದೆ. ಇದರ ಜೊತೆಗೆ ಡಿಎ, ಎಚ್‌ಆರ್‌ಎ ಮತ್ತು ಇತರೆ ಭತ್ಯೆಗಳು ಇರುತ್ತವೆ. ವಾರ್ಷಿಕ ಸಿಟಿಸಿ (CTC) ಸುಮಾರು ₹8.9 ಲಕ್ಷ ಇರುತ್ತದೆ.
- ಫೀಲ್ಡ್ ಸೂಪರ್ವೈಸರ್: ಆರಂಭಿಕ ಮೂಲ ವೇತನ ₹23,000 ಆಗಿದ್ದು, ಇದು ₹23,000–1,05,000 ವರೆಗೆ ಇದೆ. ವಾರ್ಷಿಕ ಸಿಟಿಸಿ ಸುಮಾರು ₹6.8 ಲಕ್ಷ ಇರುತ್ತದೆ.
PGCIL Recruitment 2025 – ಅರ್ಜಿ ಸಲ್ಲಿಕೆ ವಿಧಾನ
ಅರ್ಜಿ ಸಲ್ಲಿಸುವುದು ಹೇಗೆ ಎಂಬುದು ಇಲ್ಲಿದೆ:
- ಮೊದಲಿಗೆ, PGCIL ನ ಅಧಿಕೃತ ವೆಬ್‌ಸೈಟ್ in ಗೆ ಭೇಟಿ ನೀಡಿ.
- ಮುಖಪುಟದಲ್ಲಿರುವ ‘ವೃತ್ತಿ‘ (Career) ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ, ‘ಫೀಲ್ಡ್ ಇಂಜಿನಿಯರ್ ಮತ್ತು ಸೂಪರ್ವೈಸರ್ ನೇಮಕಾತಿ‘ ಲಿಂಕ್ ಅನ್ನು ಕ್ಲಿಕ್ ಮಾಡಿ.
- ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ನಂತರ ನಿಯಮಗಳ ಪ್ರಕಾರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.
- ಭವಿಷ್ಯದ ಉಪಯೋಗಕ್ಕಾಗಿ ಅರ್ಜಿಯ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
ಹೆಚ್ಚಿನ ಮಾಹಿತಿ ಹಾಗೂ ಸಂಪೂರ್ಣ ಅಧಿಸೂಚನೆಗಾಗಿ, ಅಭ್ಯರ್ಥಿಗಳು PGCIL ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಆಸಕ್ತರು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಲಾಗಿದೆ.
Important Links :
Official Notification Download | Notification PDF |
Apply Online Form | Apply Online |