PF Withdrawal – ಇತ್ತೀಚೆಗೆ ಪಿಎಫ್ ಅಕೌಂಟ್ನಲ್ಲಿರೋ ಹಣದಿಂದ ಹೊಸ ಫೋನ್, ದುಬಾರಿ ವಾಚ್ ಅಥವಾ ವಿದೇಶ ಪ್ರವಾಸದ ಪ್ಲಾನ್ ಮಾಡ್ತಿದ್ದೀರಾ? ಹಾಗಿದ್ರೆ ಒಂದು ನಿಮಿಷ ಯೋಚಿಸಿ. ನಿಮ್ಮ ಭವಿಷ್ಯದ ಆಸರೆಯಾಗಿರುವ ಪಿಎಫ್ ಹಣವನ್ನು ತುರ್ತು ಪರಿಸ್ಥಿತಿಗಾಗಿ ಮಾತ್ರ ಬಳಸಬೇಕು. ಒಂದು ವೇಳೆ ತಪ್ಪು ಕಾರಣ ನೀಡಿ ಹಣ ವಿತ್ಡ್ರಾ ಮಾಡಿದರೆ ನೀವು ದೊಡ್ಡ ತೊಂದರೆಗೆ ಸಿಲುಕಬಹುದು ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಗಂಭೀರ ಎಚ್ಚರಿಕೆ ನೀಡಿದೆ.

PF Withdrawal – ತಪ್ಪು ಮಾಹಿತಿ ನೀಡಿದ್ರೆ ಹಣ ಮರುಪಾವತಿ ಮಾಡ್ಬೇಕಾಗುತ್ತೆ!
ಇಪಿಎಫ್ಒ ತನ್ನ ಅಧಿಕೃತ ಟ್ವಿಟರ್ (ಈಗಿನ ‘X’) ಖಾತೆಯಲ್ಲಿ ಒಂದು ಪ್ರಮುಖ ಸಂದೇಶವನ್ನು ಹಂಚಿಕೊಂಡಿದೆ. “ಪಿಎಫ್ ಹಣವನ್ನು ಯಾವ ಉದ್ದೇಶಕ್ಕಾಗಿ ಪಡೆಯಲಾಗಿದೆಯೋ, ಅದಕ್ಕೇ ಬಳಸಬೇಕು. ಒಂದು ವೇಳೆ ಸುಳ್ಳು ಕಾರಣ ನೀಡಿ ಹಣ ಪಡೆದು ಅದನ್ನು ಬೇರೆ ಐಷಾರಾಮಿ ಖರ್ಚುಗಳಿಗೆ ಬಳಸಿದ್ದು ಸಾಬೀತಾದರೆ, ಆ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡುವ ಅಧಿಕಾರ ಸಂಸ್ಥೆಗಿದೆ,” ಎಂದು ಇಪಿಎಫ್ಒ ಸ್ಪಷ್ಟಪಡಿಸಿದೆ.
ಉದಾಹರಣೆಗೆ, ನೀವು ಮನೆ ಕಟ್ಟಲು ಅಥವಾ ಖರೀದಿಸಲು ಪಿಎಫ್ನಿಂದ ಮುಂಗಡವಾಗಿ ಹಣ ಪಡೆದು, ಅದನ್ನು ಹೊಸ ಕಾರು ಖರೀದಿಸಲು ಅಥವಾ ಪ್ರವಾಸಕ್ಕೆ ಬಳಸಿದರೆ, ನೀವು ನಿಯಮಗಳನ್ನು ಮುರಿದಂತಾಗುತ್ತದೆ. ಈ ರೀತಿ ಮಾಡಿದರೆ ನಿಮ್ಮ ನಿವೃತ್ತಿ ಜೀವನಕ್ಕೆ ಮೀಸಲಿಟ್ಟ ಹಣ ಹಾಳಾಗಬಹುದು.
PF Withdrawal – ದುರ್ಬಳಕೆ ಮಾಡಿದರೆ ಏನಾಗುತ್ತೆ?
ಇಪಿಎಫ್ ಯೋಜನೆ 1952, ನಿಯಮ 68B(11)ರ ಪ್ರಕಾರ, ಪಿಎಫ್ ಮುಂಗಡವನ್ನು ದುರುಪಯೋಗಪಡಿಸಿಕೊಂಡರೆ ಈ ಕೆಳಗಿನ ಕ್ರಮಗಳನ್ನು ಎದುರಿಸಬೇಕಾಗುತ್ತದೆ:
- ನೀವು ಪಡೆದ ಸಂಪೂರ್ಣ ಮುಂಗಡ ಹಣವನ್ನು ವಾಪಸ್ ಕಟ್ಟಬೇಕು. ಅದರ ಮೇಲೆ ದಂಡದ ಬಡ್ಡಿಯನ್ನೂ ಸೇರಿಸಿ ವಸೂಲಿ ಮಾಡಲಾಗುತ್ತದೆ. Read this also : EPF ಖಾತೆಯಿದ್ದವರಿಗೆ ಅವಶ್ಯಕ ಮಾಹಿತಿ, ಹಾಗಿದ್ರೆ EPFO 3.0 ಬಗ್ಗೆ ತಿಳಿಯಲೇಬೇಕು! ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?
- ಹಣವನ್ನು ಪೂರ್ತಿಯಾಗಿ ಮರುಪಾವತಿ ಮಾಡುವವರೆಗೂ ಅಥವಾ ಮುಂದಿನ ಮೂರು ವರ್ಷಗಳವರೆಗೆ ನಿಮಗೆ ಯಾವುದೇ ರೀತಿಯ ಪಿಎಫ್ ಮುಂಗಡ ಸಿಗುವುದಿಲ್ಲ.
PF Withdrawal – ಯಾವ ಕಾರಣಗಳಿಗೆ ಪಿಎಫ್ ಹಣ ಬಳಸಬಹುದು?
ಹಾಗಾದರೆ, ಪಿಎಫ್ ಹಣವನ್ನು ಕಾನೂನುಬದ್ಧವಾಗಿ ಯಾವ ಕಾರಣಗಳಿಗಾಗಿ ವಿತ್ಡ್ರಾ ಮಾಡಬಹುದು? ಇಲ್ಲಿದೆ ನೋಡಿ ಪ್ರಮುಖ ಅಂಶಗಳು:
- ಮನೆ/ವಸತಿ: ಸ್ವಂತ ಮನೆ, ಫ್ಲಾಟ್, ಅಥವಾ ನಿವೇಶನ ಖರೀದಿಗೆ ಅಥವಾ ಮನೆ ನಿರ್ಮಾಣಕ್ಕೆ (ಕನಿಷ್ಠ 5 ವರ್ಷಗಳ ಸೇವೆ ಕಡ್ಡಾಯ).
- ಮದುವೆ: ಸ್ವಂತ, ಮಕ್ಕಳ ಅಥವಾ ಸಹೋದರ/ಸಹೋದರಿಯ ಮದುವೆಗೆ (ಕನಿಷ್ಠ 7 ವರ್ಷಗಳ ಸೇವೆ ಕಡ್ಡಾಯ).
- ಶಿಕ್ಷಣ: ಮಕ್ಕಳ ಉನ್ನತ ಶಿಕ್ಷಣಕ್ಕಾಗಿ (ಕನಿಷ್ಠ 7 ವರ್ಷಗಳ ಸೇವೆ ಕಡ್ಡಾಯ).
- ವೈದ್ಯಕೀಯ ತುರ್ತುಸ್ಥಿತಿ: ನಿಮಗೆ ಅಥವಾ ಕುಟುಂಬದ ಸದಸ್ಯರಿಗೆ ಗಂಭೀರ ಕಾಯಿಲೆ ಇದ್ದಾಗ (ಯಾವುದೇ ಸೇವಾ ಮಿತಿಯಿಲ್ಲ).
ಪಿಎಫ್ ಹಣ ನಿಮ್ಮ ಭವಿಷ್ಯಕ್ಕೆ ಅತ್ಯಂತ ಪ್ರಮುಖವಾಗಿದೆ. ಇದನ್ನು ಅನಗತ್ಯ ಖರ್ಚುಗಳಿಗೆ ಬಳಸದೆ, ಕೇವಲ ತುರ್ತು ಅಗತ್ಯಗಳಿಗೆ ಮಾತ್ರ ಬಳಸುವುದು ಉತ್ತಮ . ಇಪಿಎಫ್ಒ ನಿಯಮಗಳನ್ನು ಪಾಲಿಸಿ, ನಿಮ್ಮ ಹಣದ ಭದ್ರತೆಯನ್ನು ಖಚಿತಪಡಿಸಿಕೊಳ್ಳಿ.

