Pawan Kalyan – ಜನಸೇನಾ ಪಕ್ಷದ ನಾಯಕ ಹಾಗೂ ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಇಂದು ಬೆಂಗಳೂರಿಗೆ ಆಗಮಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ರವರನ್ನು ಭೇಟಿಯಾಗಿ ಎರಡೂ ರಾಜ್ಯಗಳ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ 7 ಅಂಶಗಳ ಅಜೆಂಡಾದಡಿ ಮಾತುಕತೆ ನಡೆಸಿದರು. ಈ ವೇಳೆ ನಟ (Pawan Kalyan) ಪವನ್ ಕಲ್ಯಾಣ್ ವರನಟ ರಾಜ್ ಕುಮಾರ್ ರವರ ಗಂಧದ ಗುಡಿ ಸಿನೆಮಾದ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ತಮಗೆ ಕನ್ನಡ ಕಲಿಯುವ ಆಸೆಯಿದೆ ಎಂದು ಹೇಳಿದ್ದಾರೆ.
ಕರ್ನಾಟಕ ಹಾಗೂ ಆಂಧ್ರಪ್ರದೇಶದ ಅರಣ್ಯಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದ ಬಳಿಕ ಮಾತನಾಡಿದ (Pawan Kalyan) ಪವನ್ ಕಲ್ಯಾಣ್ ನನಗೆ ಕನ್ನಡ ಭಾಷೆಯ ಮೇಲೆ ತುಂಬಾ ಗೌರವವಿದೆ ಎಂದು ಅರಣ್ಯ ರಕ್ಷಣೆಯ ಬಗ್ಗೆ ಕುವೆಂಪು ರವರ ಕಾವ್ಯವನ್ನು ಓದಿದರು. ವರನಟ ಡಾ.ರಾಜ್ ಕುಮಾರ್ ರವರು ಗಂಧದ ಗುಡಿ ಸಿನೆಮಾದ ಮೂಲಕ ಅರಣ್ಯ ರಕ್ಷಣೆಯ ಬಗ್ಗೆ ಹಾಗೂ ಶ್ರೀಗಂಧ ಉಳಿಸುವ ಕುರಿತು ಪ್ರಯತ್ನ ಮಾಡಿದ್ದರು. ಆದರೆ ಈಗ ಶ್ರೀಗಂಧ ಕಳ್ಳನ ಮಾಡುವಂತ ಸಿನೆಮಾಗಳನ್ನು ಮಾಡುತ್ತಿದ್ದಾರೆ. ನಾನು (Pawan Kalyan) ಸಹ ಗಂಧದ ಗುಡಿಯಂತಹ ಸಿನೆಮಾ ಮಾಡಬೇಕು ಅಂದುಕೊಂಡಿದ್ದೆ. ಆದರೆ ಸಿನೆಮಾ ಮಾಡುವಾಗ ಕೆಲವೊಂದು ದೃಶ್ಯಗಳ ಚಿತ್ರೀಕರಣದ ವೇಳೆ ಯೋಚನೆ ಮಾಡುತ್ತೇನೆ. ಅದು ಏನೇ ಆದರೂ ಸಿನೆಮಾ ಅಲ್ಲವೆ ಎಂಬ ಭಾವನೆ ಬರುತ್ತದೆ. ಸದ್ಯ ಆಂಧ್ರದ ಪಿಠಾಪುರಂ ಕ್ಷೇತ್ರದಿಂದ ಜನರು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಅವರು ನೀಡಿದ ಜವಾಬ್ದಾರಿಯನ್ನು ನಿರ್ವಹಿಸಲು ಬಂದಿದ್ದೇನೆ ಎಂದರು.
ಇನ್ನೂ ನಾನೂ (Pawan Kalyan) ಸಹ ಅರಣ್ಯ ರಕ್ಷಕನಾಗಿದ್ದೇನೆ. ಕುವೆಂಪು ರವರ ಕಾವ್ಯಗಳಿಂದ ಪ್ರೇರಿತನಾಗಿದ್ದೇನೆ. ಆದರೆ ಈಗ ನಾನು ಇಂಗ್ಲೀಷ್ ಭಾಷೆಯನ್ನು ಬಳಸುತ್ತಿರುವುದಕ್ಕೆ ನನಗೆ ನೋವಿದೆ. ಕನ್ನಡ ಭಾಷೆ ಕಲಿತು ಮಾತನಾಡಲು ಪ್ರಯತ್ನ ಪಡೆಯುತ್ತಿದ್ದೇನೆ. ನನಗೆ ಕನ್ನಡ ಕಲಿಯೋಕೆ ಆಸೆಯಿದೆ. ನಾನು ಆಂಧ್ರಪ್ರದೇಶ (Pawan Kalyan) ಅರಣ್ಯ ಇಲಾಖೆಯ ಖಾತೆಯನ್ನು ನಿಭಾಯಿಸುತ್ತಿದ್ದೇನೆ. ರಾಜ್ ಕುಮಾರ್ ರವರ ಗಂಧದಗುಡಿ ಸಿನೆಮಾ ನೋಡಿದ್ದೇನೆ. ಅರಣ್ಯ ಲೂಟಿಯ ಬಗ್ಗೆ ಈ ಸಿನೆಮಾದಲ್ಲಿ ಚೆನ್ನಾಗಿ ತೋರಿಸಿದ್ದಾರೆ. ರಿಯಲ್ ಲೈಫ್ ನಲ್ಲೂ ಅರಣ್ಯ ಸಂಪತ್ತನ್ನು ನಾವು ರಕ್ಷಣೆ ಮಾಡಬೇಕಿದೆ.
ನಮ್ಮ ರಾಜ್ಯ ಹಾಗೂ ಕರ್ನಾಟಕದ ನಡುವೆ ಉತ್ತಮ ಸಂಬಂಧವಿದೆ. ಇಂದಿನ ಸಭೆಯಲ್ಲಿ (Pawan Kalyan) ನಾವು ಏಳು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಪುಂಡಾನೆಗಳ ಸೆರೆ, ರಕ್ತಚಂದನದ ರಕ್ಷಣೆ, ಅರಣ್ಯ ರಕ್ಷಣೆ ಸೇರಿದಂತೆ 7 ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಕರ್ನಾಕಟ ಅರಣ್ಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ನನಗೆ (Pawan Kalyan) ಖುಷಿಯಿದೆ ಎಂದು ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳ ಸೇವೆಯನ್ನು ಹೊಗಳಿದ್ದಾರೆ.