ತೆಲುಗು ರಾಷ್ಟ್ರಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣದ (Andra-Telangana Flood) ಹಲವು ಕಡೆ ಪ್ರವಾಹ ಸೃಷ್ಟಿಯಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಆಂಧ್ರ ಪ್ರದೇಶ, ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 40 ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ ಸಾವಿರ ಕೋಟಿ ಮೌಲ್ಯದ ಆಸ್ತಿ ನಷ್ಟವಾಗಿದೆ. ಹಲವಾರು ಮಂದಿ ಮನೆ, ಜಾನುವಾರ ಆಸ್ತಿಗಳನ್ನು ಕಳೆದುಕೊಂಡಿದ್ದಾರೆ. ಇದೀಗ ನೆರೆ ಸಂತ್ರಸ್ತರಿಗೆ ಆಂಧ್ರಪ್ರದೇಶದ ಡಿಸಿಎಂ ನಟ ಪವನ್ ಕಲ್ಯಾಣ್ ಕೋಟಿ ಕೋಟಿ (Pawan Kalyan) ದೇಣಿಗೆ ನೀಡಿದ್ದಾರೆ.
ಜನಸೇನಾ ಪಕ್ಷದ ನಾಯಕ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ (Pawan Kalyan) ಪವನ್ ಕಲ್ಯಾಣ್ ನೆರೆ ಸಂತ್ರಸ್ತರಿಗೆ ಆರು ಕೋಟಿ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಆಂದ್ರಪ್ರದೇಶ ಹಾಗೂ ತೆಲಂಗಾಣ ರಾಷ್ಟ್ರಗಳಿಗೆ ಕೋಟಿ ಕೋಟಿ ದೇಣಿಗೆ ನೀಡಿದ್ದಾರೆ. ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ 1 ಕೋಟಿ ಹಾಗೂ ನೆರೆಯಿಂದ ಸಮಸ್ಯೆಗೆ ಸಿಲುಕಿದಂತಹ (Pawan Kalyan) ಪಂಚಾಯತಿಗಳಿಗೆ ನಾಲ್ಕು ಕೋಟಿ ದೇಣಿಗೆ ನೀಡಿದ್ದಾರೆ. ಒಟ್ಟು ಆರು ಕೋಟಿ ದೇಣಿಗೆಯನ್ನು ನಟ ಪವನ್ ಕಲ್ಯಾಣ್ ನೀಡಿದ್ದಾರೆ.
ಆಂಧ್ರ ಹಾಗೂ ತೆಲಂಗಾಣ ರಾಜ್ಯ ಸರ್ಕಾರಗಳು ಪ್ರವಾಹ ಪೀಡಿತರ ನೆರವಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ತೆಲುಗು ಚಿತ್ರರಂಗ ಸಹ ಎರಡೂ ರಾಜ್ಯಗಳ ಸರ್ಕಾರಗಳ ನೆರವಿಗೆ ನಿಂತಿದೆ. ಅದರಲ್ಲೂ ಕೆಲ ಸ್ಟಾರ್ ನಟರುಗಳು ದೊಡ್ಡ ಮೊತ್ತವನ್ನು ಪರಿಹಾರ ಕಾರ್ಯಗಳಿಗಾಗಿ ದೇಣಿಗೆ ನೀಡುತ್ತಿದ್ದಾರೆ. ನಟ ಜೂ ಎನ್ಟಿಆರ್ ನಿನ್ನೆಯಷ್ಟೆ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ ತಲಾ 50 ಲಕ್ಷ ರೂಪಾಯಿಗಳಂತೆ ಒಂದು ಕೋಟಿ ರೂಪಾಯಿ ನೆರವನ್ನು ಘೋಷಣೆ ಮಾಡಿದ್ದರು. ‘ಕಲ್ಕಿ 2898 ಎಡಿ’ ಚಿತ್ರತಂಡ ತಲಾ 25 ಲಕ್ಷ , ನಟ ಮೆಗಾಸ್ಟಾರ್ ಚಿರಂಜೀವಿ ಎರಡು ರಾಜ್ಯಗಳಿಗೆ ತಲಾ 50 ಲಕ್ಷ ರೂಪಾಯಿಯಂತೆ ಒಂದು ಕೋಟಿ ರೂಪಾಯಿ, ನಟ ಬಾಹುಬಲಿ ಪ್ರಭಾಸ್ 2 ಕೋಟಿ ದೇಣಿಗೆ, ಮಹೇಶ್ ಬಾಬು ತಲಾ 50 ಲಕ್ಷದಂತೆ 1 ಕೋಟಿ, ನಟ ರಾಮ್ ಚರಣ್ 1 ಕೋಟಿ, ನಟ ಅಲ್ಲು ಅರ್ಜುನ್ 1 ಕೋಟಿ, ನಂದಮೂರಿ ಬಾಲಕೃಷ್ಣ 1 ಕೋಟಿ, ಯುವನಟ ವಿಶ್ವಕ್ ಸೇನ್ 10 ಲಕ್ಷ, ಸಿದ್ದು ಜೊನ್ನಗಡ್ಡ 30 ಲಕ್ಷ, ನಟಿ ಅನನ್ಯಾ ನಾಗಳ್ಳ ಐದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.