HomeStateEco Club : ಪರಿಸರ ಸಂರಕ್ಷಣೆ ಇಂದಿನ ಅನಿವಾರ್ಯತೆ: ಗೌಡೇಟಿಯಲ್ಲಿ ವಿದ್ಯಾರ್ಥಿಗಳಿಂದ ‘ವನಭೇಟಿ’

Eco Club : ಪರಿಸರ ಸಂರಕ್ಷಣೆ ಇಂದಿನ ಅನಿವಾರ್ಯತೆ: ಗೌಡೇಟಿಯಲ್ಲಿ ವಿದ್ಯಾರ್ಥಿಗಳಿಂದ ‘ವನಭೇಟಿ’

ಪಾವಗಡ ತಾಲೂಕಿನ ಗೌಡೇಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಹ್ಯಾದ್ರಿ ಇಕೋ ಕ್ಲಬ್ (Eco Club) ವತಿಯಿಂದ ಮಂಗಳವಾರ ಸಾಮಾಜಿಕ ಅರಣ್ಯ ಪ್ರದೇಶಕ್ಕೆ ‘ವನಭೇಟಿ’ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಲಾಯಿತು. ಗ್ರಾಮದಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಅರಣ್ಯಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳಿಗೆ ಪ್ರಕೃತಿಯ ಮಡಿಲಲ್ಲಿಯೇ ಪರಿಸರ ಪಾಠವನ್ನು ಬೋಧಿಸಲಾಯಿತು. ಮಧುಗಿರಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಗೆ ಬರುವ ಈ ಶಾಲೆಯು ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಲು ಈ ವಿನೂತನ ಕ್ರಮ ಕೈಗೊಂಡಿದೆ.

Government High School Pavagada students participating in an eco club forest visit to promote environmental awareness

Eco Club – ಪರಿಸರ ಅಸಮಾತೋಲನದ ಬಗ್ಗೆ ಎಚ್ಚರಿಕೆ

ಇಕೋ ಕ್ಲಬ್ ಮಾರ್ಗದರ್ಶಿ ಶಿಕ್ಷಕ ಲವ ಎಚ್. ಮಾತನಾಡಿ, “ಪ್ರಕೃತಿಯ ಮೇಲೆ ಮಾನವನ ಅತಿಯಾದ ಹಸ್ತಕ್ಷೇಪದಿಂದಾಗಿ ಪರಿಸರ ಅಸಮಾತೋಲನ ಉಂಟಾಗುತ್ತಿದೆ. ಇದನ್ನು ತಡೆಯಲು ಗಿಡಗಳನ್ನು ಬೆಳೆಸುವುದು ಮತ್ತು ಇರುವ ಅರಣ್ಯವನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ” ಎಂದು ತಿಳಿಸಿದರು.

ಮಾಲಿನ್ಯ ಮುಕ್ತ ಸಮಾಜಕ್ಕೆ ಕರೆ

ಸಮಾಜ ವಿಜ್ಞಾನ ಶಿಕ್ಷಕ ನರಸಿಂಹರೆಡ್ಡಿ ಎಂ. ಅವರು ಪ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ವಾಯು, ಜಲ ಮತ್ತು ಮಣ್ಣಿನ ಮಾಲಿನ್ಯದ ಕಾರಣಗಳನ್ನು ವಿವರಿಸಿದರು. ಮಾಲಿನ್ಯದ ದುಷ್ಪರಿಣಾಮಗಳಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು, ಇದಕ್ಕೆ ಪರಿಹಾರವಾಗಿ ಸುಸ್ಥಿರ ಜೀವನಶೈಲಿ ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. (Eco Club) ಕನ್ನಡ ಶಿಕ್ಷಕ ಮಹಾಂತಪ್ಪ ಪೂಜಾರಿ ಅವರು ಸಸ್ಯರಾಶಿ ಮತ್ತು ಮಳೆಯ ನಡುವಿನ ಸಂಬಂಧದ ಬಗ್ಗೆ ಬೆಳಕು ಚೆಲ್ಲಿದರು. Read this also : ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಲಿಕಾ ಹಬ್ಬ ಸಹಕಾರಿ : ಬಿಇಒ ಕೃಷ್ಣಕುಮಾರಿ

ಶಾಲಾ ಸಂಘಟನೆಗಳ ಪಾತ್ರ

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮುಖ್ಯ ಶಿಕ್ಷಕ ತಿಮ್ಮೇಶಪ್ಪ ಎಂ. ಮಾತನಾಡಿ, “ಶಾಲಾ ಹಂತದಲ್ಲಿ ಇಕೋ ಕ್ಲಬ್‌ಗಳು ಕೇವಲ ಹೆಸರಿಗಿರದೆ, ಪ್ರಾಯೋಗಿಕವಾಗಿ ಕೆಲಸ ಮಾಡಬೇಕು. ಇಂದಿನ ಈ (Eco Club) ವನಭೇಟಿಯು ಮಕ್ಕಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ” ಎಂದರು.

Government High School Pavagada students participating in an eco club forest visit to promote environmental awareness

ಈ ಸಂದರ್ಭದಲ್ಲಿ (Eco Club)  ಸಹಶಿಕ್ಷಕರಾದ ರಜನಿ ವಿ., ರಾಜೇಶ್, ಮಾಧವ ಎ., ಸಿಬ್ಬಂದಿಗಳಾದ ಅರ್ಷಿಯ, ಜ್ಯೋತಿ, ಸುಜಾತಮ್ಮ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಕೃತಿಯ ನಡುವೆ ನಡೆದ ಈ ಕಲಿಕಾ ಪ್ರಕ್ರಿಯೆಯು ಮಕ್ಕಳ ಜ್ಞಾನಾರ್ಜನೆಗೆ ಪೂರಕವಾಗಿತ್ತು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular