ಕೇಂದ್ರ ಸರ್ಕಾರವು ಪ್ಯಾನ್ (PAN CARD) ಮತ್ತು ಆಧಾರ್ (Aadhaar) ಕಾರ್ಡ್‌ಗಳನ್ನು ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿರುವುದು ನಿಮಗೆಲ್ಲಾ ತಿಳಿದೇ ಇದೆ. ಆದರೆ, ನೀವು ಇನ್ನೂ ಈ ಪ್ರಮುಖ ಕೆಲಸವನ್ನು ಮುಗಿಸಿಲ್ಲ ಎಂದಾದರೆ, ತಕ್ಷಣ ಎಚ್ಚೆತ್ತುಕೊಳ್ಳಿ! ಯಾಕೆಂದರೆ, ಮುಂದಿನ ವರ್ಷ ಅಂದರೆ 2026ರ ಜನವರಿ 1ರಿಂದ ಲಿಂಕ್ ಆಗದ ಎಲ್ಲ ಪ್ಯಾನ್ ಕಾರ್ಡ್‌ಗಳು ನಿಷ್ಕ್ರಿಯಗೊಳ್ಳಲಿವೆ (Inoperative). ಹೌದು, ನೀವು ಓದಿದ್ದು ನಿಜ! ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಏನಾಗುತ್ತದೆ? ಪರಿಹಾರವೇನು? ಇಲ್ಲಿದೆ ಸಂಪೂರ್ಣ ವಿವರ.

PAN Card – ಕೊನೆಯ ದಿನಾಂಕ ಯಾವಾಗ? ತಪ್ಪಿದರೆ ಏನು?
ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ನೀಡಿರುವ ಗಡುವಿನ ಪ್ರಕಾರ, 2025ರ ಅಕ್ಟೋಬರ್ 1ಕ್ಕಿಂತ ಮುನ್ನ ಪ್ಯಾನ್ ಕಾರ್ಡ್ ಪಡೆದವರು, ಅದನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು 2025ರ ಡಿಸೆಂಬರ್ 31ರವರೆಗೆ ಮಾತ್ರ ಕಾಲಾವಕಾಶವಿದೆ.
- ಗಡುವು ಮೀರಿದರೆ: ಡಿಸೆಂಬರ್ 31, 2025 ರೊಳಗೆ ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಸಂಖ್ಯೆ ಜನವರಿ 1, 2026ರಿಂದ ‘ಇನಾಪರೇಟಿವ್‘ ಆಗಲಿದೆ.
ಪರ್ಮನೆಂಟ್ ಅಕೌಂಟ್ ನಂಬರ್ (PAN CARD) ಎಂಬುದು ತೆರಿಗೆ ಪಾವತಿ ಮತ್ತು ಬಹುತೇಕ ಎಲ್ಲ ಪ್ರಮುಖ ಹಣಕಾಸು ವ್ಯವಹಾರಗಳಿಗೆ ಕಡ್ಡಾಯವಾಗಿದೆ. ಇದು ನಿಷ್ಕ್ರಿಯಗೊಂಡರೆ ನಿಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಬಹುದು.

PAN Card – ಪ್ಯಾನ್ ನಿಷ್ಕ್ರಿಯಗೊಂಡರೆ ಎದುರಾಗುವ ಸಮಸ್ಯೆಗಳೇನು?
ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ, ಅದು ನಿಮ್ಮ ಬಳಿ ಇದ್ದೂ ಇಲ್ಲದಂತಾಗುತ್ತದೆ. ಇದರಿಂದ ಎದುರಾಗುವ ಕೆಲವು ಪ್ರಮುಖ ಸಮಸ್ಯೆಗಳು ಇಲ್ಲಿವೆ:
- ಐಟಿ ರಿಟರ್ನ್ (ITR) ಸಲ್ಲಿಸಲಾಗುವುದಿಲ್ಲ: ನೀವು ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಲು ಸಾಧ್ಯವಾಗುವುದಿಲ್ಲ.
- ರೀಫಂಡ್ ಇಲ್ಲ: ನೀವು ಸಲ್ಲಿಸಿರುವ ಐಟಿಆರ್‌ಗಳ ಪ್ರೊಸೆಸಿಂಗ್ ಆಗುವುದಿಲ್ಲ ಮತ್ತು ಯಾವುದೇ ರೀಫಂಡ್ (ಮರುಪಾವತಿ) ಸಿಗುವುದಿಲ್ಲ.
- ಹೆಚ್ಚಿದ TDS: ಟಿಡಿಎಸ್ (TDS) ಕಡಿತಗೊಳಿಸುವ ಸಂದರ್ಭದಲ್ಲಿ, ಸಾಮಾನ್ಯ ಶೇ. 10ರ ಬದಲು ಶೇ. 20ರಷ್ಟು ತೆರಿಗೆಯನ್ನು ಹಿಡಿದುಕೊಳ್ಳಲಾಗುತ್ತದೆ.
- ಬ್ಯಾಂಕಿಂಗ್ ಸಮಸ್ಯೆ: ಹೊಸ ಬ್ಯಾಂಕ್ ಖಾತೆ ತೆರೆಯಲು, ದೊಡ್ಡ ಮೊತ್ತದ ಕ್ಯಾಷ್ ಡೆಪಾಸಿಟ್ ಮಾಡಲು ಮತ್ತು ಇತರ ಪ್ರಮುಖ ಹಣಕಾಸು ಸೇವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.
- SIP ಮತ್ತು ಸಂಬಳ ತೊಂದರೆ: ಉದ್ಯೋಗಿಗಳಿಗೆ ಸಂಬಳ ಕ್ರೆಡಿಟ್ ಆಗದೇ ಇರಬಹುದು, ಮತ್ತು ನಿಮ್ಮ ಯಾವುದೇ SIP (Systematic Investment Plan) ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬಹುದು.
ಸಂಕ್ಷಿಪ್ತವಾಗಿ ಹೇಳುವುದಾದರೆ, ನಿಮ್ಮ ಬಹುತೇಕ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ!
PAN Card – ಆಧಾರ್ಗೆ ಪ್ಯಾನ್ ಲಿಂಕ್ ಮಾಡುವುದು ಹೇಗೆ?
ಪ್ಯಾನ್ ನಿಷ್ಕ್ರಿಯಗೊಳ್ಳುವ ಮುನ್ನ ಅದನ್ನು ತಕ್ಷಣವೇ ಲಿಂಕ್ ಮಾಡಿ. ಪ್ರಕ್ರಿಯೆ ಸರಳವಾಗಿದೆ.
- ವೆಬ್ಸೈಟ್ಗೆ ಭೇಟಿ ನೀಡಿ: ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್‌ಗೆ (www.incometax.gov.in) ಭೇಟಿ ನೀಡಿ.
- ‘ಲಿಂಕ್ ಆಧಾರ್‘ ಕ್ಲಿಕ್ ಮಾಡಿ: ವೆಬ್‌ಸೈಟ್‌ನ ಮುಖಪುಟದಲ್ಲಿರುವ ‘ಕ್ವಿಕ್ ಲಿಂಕ್ಸ್‘ ವಿಭಾಗದ ಅಡಿಯಲ್ಲಿ ‘ಲಿಂಕ್ ಆಧಾರ್‘ ಆಯ್ಕೆಯನ್ನು ಕ್ಲಿಕ್ ಮಾಡಿ. Read this also : ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್‌ನಲ್ಲಿ ಮಾಹಿತಿ ತಪ್ಪಿದೆಯೇ? ಆನ್‌ಲೈನ್‌ನಲ್ಲಿ ಸರಿಪಡಿಸುವುದು ಹೇಗೆ?
- ವಿವರಗಳನ್ನು ನಮೂದಿಸಿ: ನಿಮ್ಮ 10-ಅಂಕಿಯ (PAN CARD) ಪ್ಯಾನ್ ಸಂಖ್ಯೆ ಮತ್ತು 12-ಅಂಕಿಯ ಆಧಾರ್ ಸಂಖ್ಯೆ ಯನ್ನು ನಮೂದಿಸಿ.
- ದೃಢೀಕರಿಸಿ: ಆಧಾರ್‌ನಲ್ಲಿರುವ ನಿಮ್ಮ ಹೆಸರನ್ನು ನಮೂದಿಸಿ ಮತ್ತು ‘ಐ ಅಗ್ರೀ ಟು ವ್ಯಾಲಿಡೇಟ್ ಮೈ ಆಧಾರ್ ಡೀಟೇಲ್ಸ್‘ ಬಾಕ್ಸ್ ಅನ್ನು ಚೆಕ್ ಮಾಡಿ.
- OTP ಹಾಕಿ: ಆಧಾರ್‌ಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP (ಒನ್ ಟೈಮ್ ಪಾಸ್‌ವರ್ಡ್) ಅನ್ನು ನಮೂದಿಸಿ.
- ವ್ಯಾಲಿಡೇಟ್ ಮಾಡಿ: ಅಂತಿಮವಾಗಿ ‘ವ್ಯಾಲಿಡೇಟ್‘ ಬಟನ್ ಕ್ಲಿಕ್ ಮಾಡಿ.

ನಿಮ್ಮ ಲಿಂಕ್ ಮಾಡುವ ಪ್ರಕ್ರಿಯೆ ಯಶಸ್ವಿಯಾಗಿದೆ ಎಂದು ನಿಮಗೆ ಸಂದೇಶ ಬರುತ್ತದೆ.
ನೆನಪಿರಲಿ: ತಡ ಮಾಡಿದರೆ ದಂಡ ಗ್ಯಾರಂಟಿ!
ನೀವು ಗಡುವು ಮುಗಿದ ನಂತರ ಅಂದರೆ ಡಿಸೆಂಬರ್ 31ರ ನಂತರ ಪ್ಯಾನ್ ಲಿಂಕ್ ಮಾಡಲು ಪ್ರಯತ್ನಿಸಿದರೆ, ನೀವು ₹1,000 ರೂಪಾಯಿಗಳ ದಂಡವನ್ನು ಪಾವತಿಸಬೇಕಾಗುತ್ತದೆ. ದಂಡ ಕಟ್ಟುವ ಪ್ರಕ್ರಿಯೆಯೂ ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ‘ಕಂಟಿನ್ಯೂ ಟು ಪೇ ತ್ರೂ ಇ–ಪೇ ಟ್ಯಾಕ್ಸ್‘ (Continue to Pay through e-Pay Tax) ಆಯ್ಕೆಯ ಮೂಲಕ ನೀವು ದಂಡ ಪಾವತಿಸಿ ನಂತರ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಮುಂದುವರಿಸಬಹುದು.
