Pakistan – ಪಾಕಿಸ್ತಾನ… ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ರಾಷ್ಟ್ರ, ಅಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ, ಅಲ್ಪಸಂಖ್ಯಾತರಿಗೆ ಬದುಕಲು ಕಷ್ಟಕರ ವಾತಾವರಣ ಎಂಬುದು ವಿಶ್ವಕ್ಕೆ ತಿಳಿದ ವಿಚಾರವಾಗಿದೆ. ಆದರೆ, ಇದರ ಜೊತೆಗೆ ಅಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಮಾಣವೂ ಆತಂಕಕಾರಿಯಾಗಿ ಹೆಚ್ಚುತ್ತಿದೆ. ಈ ಕುರಿತು ಪಾಕಿಸ್ತಾನದ ಮಾಜಿ ಸಂಸದೆಯೊಬ್ಬರು ಬಹಿರಂಗಪಡಿಸಿರುವ ವಿಷಯ ಕೇಳಿ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ.
Pakistan ಕರಾಳ ಮುಖ: ಮನೆಯವರೇ ಅತ್ಯಾಚಾರಿಗಳು!
ಪಾಕಿಸ್ತಾನದಲ್ಲಿ ಮಹಿಳೆಯರ ಸ್ವಾತಂತ್ರ್ಯವನ್ನು ಮೊದಲಿನಿಂದಲೂ ಹತ್ತಿಕ್ಕಲಾಗಿದೆ. ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಇದೀಗ ಪಾಕಿಸ್ತಾನದ ಮಾಜಿ ಸಂಸದೆ ಶಾಂತನಾ ಗುಲ್ಜಾರ್ ಖಾನ್ ಅವರು ಟಿವಿ ಸಂದರ್ಶನವೊಂದರಲ್ಲಿ ಪಾಕಿಸ್ತಾನದ ಮತ್ತೊಂದು ಭಯಾನಕ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಪಾಕಿಸ್ತಾನದಲ್ಲಿ ಸಂಭವಿಸುವ ಶೇ. 82ರಷ್ಟು ಅತ್ಯಾಚಾರ ಪ್ರಕರಣಗಳಲ್ಲಿ ಬಲಿಪಶುಗಳಾದ ಮಹಿಳೆಯರು ತಮ್ಮ ಸ್ವಂತ ತಂದೆ ಮತ್ತು ಸಹೋದರರಿಂದಲೇ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ. ಈ ವಿಷಯವು ಪಾಕಿಸ್ತಾನದಲ್ಲಿ ಮಹಿಳೆಯರ ಸುರಕ್ಷತೆಯ ಕುರಿತು ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ. Read this also : Balochistan : ಪಾಕಿಸ್ತಾನಕ್ಕೆ ಭಾರತದ ತಿರುಗೇಟು – ಸ್ವತಂತ್ರ ದೇಶ ಘೋಷಿಸಿಕೊಂಡ ಬಲೂಚಿಸ್ತಾನ….!
Pakistan – ತಂದೆ, ಅಣ್ಣ, ಅಜ್ಜ, ಚಿಕ್ಕಪ್ಪಂದಿರು ಅತ್ಯಾಚಾರಿಗಳು!
ಪಾಕಿಸ್ತಾನದಲ್ಲಿ ಶೇ. 82ರಷ್ಟು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯರ ಕುಟುಂಬ ಸದಸ್ಯರು ಶಾಮೀಲಾಗಿದ್ದಾರೆ ಎಂದು ಮಾಜಿ ಸಂಸದೆ ಹೇಳಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರಲ್ಲಿ ಹೆಚ್ಚಾಗಿ ತಂದೆ, ಸಹೋದರರು, ಅಜ್ಜ ಮತ್ತು ಚಿಕ್ಕಪ್ಪಂದಿರು ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಪಾಕಿಸ್ತಾನದ ಮಹಿಳೆಯರ ಮೇಲೆ ಅವರ ರಕ್ತ ಸಂಬಂಧಿಗಳೇ ಅತ್ಯಾಚಾರ ಎಸಗುವ ಮೂಲಕ ಅಮಾನವೀಯವಾಗಿ ವರ್ತಿಸುತ್ತಿರುವುದು ರಾಷ್ಟ್ರೀಯ ಸುದ್ದಿವಾಹಿನಿಯ ನೇರ ಪ್ರಸಾರದಲ್ಲಿ ಬಹಿರಂಗವಾಗಿದೆ.
Pakistan -ದೂರು ನೀಡಲೂ ಹಿಂಜರಿಯುವ ಮಹಿಳೆಯರು
ಮಾಜಿ ಸಂಸದರ ಪ್ರಕಾರ, ಈ ರೀತಿಯ ಹಿಂಸೆಗೆ ಒಳಗಾದ ಹೆಣ್ಣುಮಕ್ಕಳು ಮತ್ತು ಮಹಿಳೆಯರು ಪೊಲೀಸರಿಗೆ ದೂರು ನೀಡಲು ಸಹ ಭಯಪಡುತ್ತಾರೆ. ಪಾಕಿಸ್ತಾನಿ ಸಮಾಜದಲ್ಲಿ ಈ ಗಂಭೀರ ವಿಷಯದ ಬಗ್ಗೆ ಯಾರೂ ಮಾತನಾಡಲು ಏಕೆ ಸಿದ್ಧರಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಆಧುನಿಕ ಸಮಾಜದಲ್ಲೂ ಈ ರೀತಿಯ ಅಮಾನವೀಯ ಕೃತ್ಯಗಳು ನಡೆಯುತ್ತಿರುವುದಕ್ಕೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ವೀಡಿಯೊ ಇಲ್ಲಿದೆ ನೋಡಿ : Click Here
ಈ ಆಘಾತಕಾರಿ ಮಾಹಿತಿಯು ಪಾಕಿಸ್ತಾನದಲ್ಲಿ ಮಹಿಳೆಯರ ಪರಿಸ್ಥಿತಿ ಎಷ್ಟರ ಮಟ್ಟಿಗೆ ಚಿಂತಾಜನಕವಾಗಿದೆ ಎಂಬುದನ್ನು ತೋರಿಸುತ್ತದೆ. ಮಹಿಳಾ ಹಕ್ಕುಗಳು ಮತ್ತು ಮಹಿಳಾ ಸುರಕ್ಷತೆಯ ಕುರಿತು ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿರುವ ಈ ಸಮಯದಲ್ಲಿ, ಪಾಕಿಸ್ತಾನದ ಈ ಕರಾಳ ಸತ್ಯವು ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ.