ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶೀಘ್ರದಲ್ಲೇ ಪಾಕ್ ಆಕ್ರಮಿತ ಕಾಶ್ಮೀರವನ್ನು (POK) ಭಾರತದೊಂದಿಗೆ ವಿಲೀನ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಜಮ್ಮು-ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ರಿಯಾಕ್ಟ್ ಆಗಿದ್ದಾರೆ. ಬಲವಂತವಾಗಿ ಪಿಒಕೆ ವಶಪಡಿಸಿಕೊಳ್ಳೋಕೆ ಹೋದರೇ ಪಾಕಿಸ್ತಾನ ಪ್ರತೀಕಾರ ತೀರಿಸಿಕೊಳ್ಳಲು ಅಣುಬಾಂಬ್ ಹಾಕುತ್ತೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇತ್ತೀಚಿಗಷ್ಟೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನ ಗೊಳಿಸಲಾಗುತ್ತದೆ ಎಂದು ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆ ತುಂಬಾನೆ ಚರ್ಚೆಯಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಮತಗಳನ್ನು ಪಡೆಯಲು ಬಿಜೆಪಿ ಈ ಗಿಮಿಕ್ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಈ ನಡುವೆ ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಸಹ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನ ಕೈಗೆ ಬಳೆ ತೊಟ್ಟು ಕುಳಿತಿಲ್ಲ, ಆ ದೇಶದಲ್ಲಿ ಅಣುಬಾಂಬ್ ಗಳಿವೆ. ಬಲವಂತವಾಗಿ ಪಿಒಕೆ ವಶಪಡಿಸಿಕೊಳ್ಳಲು ಹೋದರೇ ಪಾಕಿಸ್ತಾನ ಪ್ರತೀಕಾರ ತೀರಿಸಿಕೊಳ್ಳಲು ಗಡಿಯಾಚೆಯಿಂದ ನಮ್ಮ ಮೇಲೆ ಬಾಂಬ್ ಹಾಕುತ್ತಾರೆ. ಒಂದು ವೇಳೆ ಪರಮಾಣು ಬಾಂಬ್ ಗಳು ನಮ್ಮ ಮೇಲೆ ಬಿದ್ದರೇ ನಮ್ಮ ಗತಿ ಏನು ಎಂದು ಫಾರುಕ್ ಅಬ್ದುಲ್ಲಾ ಪ್ರಶ್ನೆ ಮಾಡಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತವು ಪಾಕ್ ಆಕ್ರಮಿತ ಕಾಶ್ಮೀರದ ಮೇಲಿನ ತನ್ನ ಹಕ್ಕನ್ನು ಎಂದೂ ಬಿಟ್ಟುಕೊಡುವುದಿಲ್ಲ. ಆದರೆ ದೇಶದಲ್ಲಿನ ಅಭಿವೃದ್ದಿಯನ್ನು ಕಂಡ ಬಳಿಕ ಜನರು ಭಾರತದ ಭಾಗವಾಆಗಲು ಬಯಸುತ್ತಿರುವುದರಿಂದ ಅದನ್ನು ಬಲವಂತವಾಗಿ ಆಕ್ರಮಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ, ಕೇಂದ್ರ ರಕ್ಷಣಾ ಸಚಿವರು ಆ ರೀತಿ ಹೇಳಿದ್ದರೇ ಅವರು ಮುಂದೆ ಹೋಗಲಿ ಅವರನ್ನು ಯಾರು ತಡೆಯುತ್ತಾರೆ. ಆದರೆ ಪಾಕಿಸ್ತಾನ ಏನು ಕೈಗೆ ಬಳೆ ತೊಟ್ಟು ಕುಳಿತಿಲ್ಲ. ಆ ದೇಶದಲ್ಲಿ ಅಣು ಬಾಂಬ್ ಗಳಿದ್ದು, ಒಂದು ಅವು ನಮ್ಮ ಮೇಲೆ ಹಾಕಿದರೇ ನಮ್ಮ ಪರಿಸ್ಥಿತಿ ಏನಾಗಬಹುದು ಎಂದಿದ್ದಾರೆ.