Dr K Sudhakar – ಇಂದು ವಿಶ್ವದಲ್ಲಿ ಭಾರತ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರವಾಗಿದೆ. ಆಪರೇಷನ್ ಸಿಂಧೂರದ ಮೂಲಕ ಇಡೀ ವಿಶ್ವಕ್ಕೆ ಭಾರತದ ಶಕ್ತಿ ಏನು ಎಂಬುದನ್ನು ತೋರಿಸಿದೆ. ಈ ನಿಟ್ಟಿನಲ್ಲಿ ಭಾರತವನ್ನು ವಿಶ್ವದಲ್ಲೇ ಅಗ್ರರಾಷ್ಟ್ರವನ್ನಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿಯವರು ದಿಟ್ಟ ಹೆಜ್ಜೆಯನ್ನಿಟ್ಟು ಸಾಗುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.
Dr K Sudhakar – ಆಪರೇಷನ್ ಸಿಂಧೂರ ಮೂಲಕ ಭಾರತದ ಶಕ್ತಿ ವಿಶ್ವಕ್ಕೆ ತೋರಿಸಿದೆ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 79ನೇ ಸ್ವತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಏಪ್ರಿಲ್ 22 ರಂದು ನಡೆದ ಪೆಹಲ್ಗಾಮ್ ದಾಳಿಯಲ್ಲಿ ಅಮಾಯಕ ಪ್ರವಾಸಿಗರ ತಲೆಗೆ ಗುಂಡಿಕ್ಕಿ ಅವರ ಧರ್ಮ ಕೇಳಿ ಕೊಂದರು. ಇಲ್ಲಿಯವರೆಗೂ ಉಗ್ರರು ಅವರ ಧರ್ಮ ಕೇಳಿ ಕೊಲೆ ಮಾಡಿದ್ದು ಇದೇ ಮೊದಲು ಎನ್ನಬಹುದಾಗಿದೆ. ತಾಯಂದಿರ ಸಿಂಧೂರವನ್ನು ಕಿತ್ತುಕೊಂಡ ಉಗ್ರಗಾಮಿಗಳಿಗೆ ದಿಟ್ಟ ಉತ್ತರ ನೀಡಿದೆ. ಆಪರೇಷನ್ ಸಿಂದೂರ್ ಮೂಲಕ ನಮ್ಮ ಸೈನಿಕರು ಸಾಧನೆಯನ್ನು ಮಾಡಿವೆ. ಇದು ನಮ್ಮ ನವ ಭಾರತ, ನಮ್ಮ ದೇಶ ಅಭಿವೃದ್ಧಿ ಆಗಿರುವುದಕ್ಕೆ ಸಾಕ್ಷಿಯಾಗಿದೆ. ಜೊತೆಗೆ ಇಡೀ ವಿಶ್ವಕ್ಕೆ ಭಾರತದ ಸೇನಾ ಶಕ್ತಿ, ಆತ್ಮನಿರ್ಭರ ಭಾರತದ ಶಕ್ತಿ ಹೇಗಿದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದರು.
Dr K Sudhakar – ದೇಶ ಕಟ್ಟುವತ್ತ ಯುವಜನತೆ ಮುಂದಾಗಿ
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ರವರು ಹೇಳಿದಂತೆ ಯಾರಾದರೂ ಕನಸು ಕಂಡರೇ ಮಾತ್ರ ಸಾಲದು, ಆ ಕನಸನ್ನು ನನಸು ಮಾಡಿಕೊಳ್ಳಲು ಹೋರಾಡಬೇಕು. ಒಬ್ಬ ವ್ಯಕ್ತಿಯಿಂದ ದೇಶ ಬದಲಾಗಲ್ಲ, ಎಲ್ಲರೂ ಬದಲಾದರೇ ಮಾತ್ರ ದೇಶದ ಅಭಿವೃದ್ದಿ ಸಾಧ್ಯ. ಸಮಾನತೆ ಬರಬೇಕು, ನಮ್ಮ ನಡುವಿನ ಬಡವ ಶ್ರೀಮಂತ ಎಂಬ ವ್ಯತ್ಯಾಸ ಕಡಿಮೆಯಾಗಬೇಕು. ಕರ್ನಾಟಕದ ಜಲಿಯನ್ ವಾಲಾಬಾಗ್’ ಎಂದೇ ಪ್ರಸಿದ್ಧವಾಗಿರುವ ವಿದುರಾಶ್ವತ್ಥ ಹೋರಾಟದಲ್ಲಿ ಗುಡಿಬಂಡೆಯ ಅನೇಕರು ಭಾಗವಹಿಸಿದ್ದಾರೆ. ಅದೇ ರೀತಿ ಇಂದು ದೇಶವನ್ನು ಕಟ್ಟುವತ್ತ ಯುವಜನತೆ ಮುಂದಾಗಬೇಕು ಎಂದರು. Read this also : ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ! 434 ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಹಿತಿ ಇಲ್ಲಿದೆ ನೋಡಿ..!
Dr K Sudhakar – ವಿಕಸಿತ ಭಾರತಕ್ಕೆ ಮೋದಿ ಅಡಿಪಾಯ
ಇನ್ನೂ ನರೇಂದ್ರ ಮೋದಿ ಯವರು ವಿಕಸಿತ ಭಾರತ ಹೇಗಿರಬೇಕು ಎಂಬುದರ ಬಗ್ಗೆ ಚಿಂತನೆ ಮಾಡಿದ್ದಾರೆ. ವಿಶ್ವದ ಅತ್ಯಂತ ದೊಡ್ಡ ದೇಶಾವಾಗಬೇಕೆಂದು ಅವರ ಕನಸು. ಈ ನಿಟ್ಟಿನಲ್ಲಿ ಅವರು ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ಪಿ.ಎಂ. ಕಿಸಾನ್, ಫಸಲ್ ಭೀಮಾ ಯೋಜನೆ, ಅವಾಜ್ ಯೋಜನೆ, 17 ಕೋಟಿ ಅಮೃತ್ 2.0 ಮನೆ ಮನೆಗೆ ಕುಡಿಯುವ ನೀರು, ಸೇರಿದಂತೆ ಅನೇಕ ಕೇಂದ್ರ ಸರ್ಕಾರ ಜನರಿಗೆ ರೈತನಗೆ ಅನುಕೂಲ ಮಾಡಿದೆ. ಡಿಜಿಟಲ್ ಪೇಮೆಂಟ್ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ದೇಶ ಬದಲಾವಣೆ ಆಗಿದೆ. ವಿಕಸಿತ ಭಾರತದ ಕನಸನ್ನು ಕಾಣಬೇಕು ಎಂದರು.
Dr K Sudhakar – ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಮಾಡೊಲ್ಲ
ಇನ್ನೂ ನಾನು ಅಭಿವೃದ್ದಿಯ ವಿಚಾರದಲ್ಲಿ ಎಂದೂ ರಾಜಕಾರಣ ಮಾಡಲ್ಲ. ಸ್ಥಳೀಯವಾಗಿ ಯಾರೇ ಶಾಸಕರಿದ್ದರೂ ಕೇಂದ್ರದಿಂದ ಬರುವಂತಹ ಅನುದಾನವನ್ನು ನೀಡುತ್ತೇನೆ. ಗುಡಿಬಂಡೆ ನನ್ನ ಹುಟ್ಟೂರಿನ ಪಕ್ಕದ ತಾಲೂಕು ಕೇಂದ್ರವಾಗಿದೆ. ಗುಡಿಬಂಡೆಯನ್ನು ಅಭಿವೃದ್ದಿ ಮಾಡಲು ಮತ್ತಷ್ಟು ಅನುದಾನವನ್ನು ತರುತ್ತೇನೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇಂತಹ ವೀರೋಚಿತ ಇತಿಹಾಸ ಹೊಂದಿರುವ ಗುಡಿಬಂಡೆ ತಾಲ್ಲೂಕಿನಲ್ಲಿ ಈ ಬಾರಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸಂತಸ ಮತ್ತು ಹೆಮ್ಮೆ ಉಂಟುಮಾಡಿದೆ ಎಂದರು.