ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಪೋಷಕರು “ನಮ್ಮ ಮಗು ಅಲ್ಲಿ ಸುರಕ್ಷಿತವಾಗಿರುತ್ತೆ, ಗುರುಗಳು ಅಪ್ಪ-ಅಮ್ಮನಂತೆ ಸಲಹುತ್ತಾರೆ” ಎಂಬ ಅಚಲ ನಂಬಿಕೆಯಲ್ಲಿರುತ್ತಾರೆ. ಆದರೆ, ಪೋಷಕರ ಆ ನಂಬಿಕೆಗೆ ಕೊಡಲಿ ಪೆಟ್ಟು ನೀಡುವಂತಹ ಘೋರ ಕೃತ್ಯವೊಂದು ಓಡಿಶಾದಲ್ಲಿ ನಡೆದಿದೆ. ವಿದ್ಯಾ ಬುದ್ಧಿ ಕಲಿಸಬೇಕಾದ ಶಿಕ್ಷಕರೇ (Odisha School Abuse Case) ಕಾಮ ಮೃಗಗಳಾಗಿ ಬದಲಾಗಿ, ಅಪ್ರಾಪ್ತ ವಿದ್ಯಾರ್ಥಿನಿಯ ಜೀವನದ ಜೊತೆ ಚೆಲ್ಲಾಟವಾಡಿದ್ದಾರೆ. ಒಂದು ವರ್ಷದಿಂದ ನಡೆಯುತ್ತಿದ್ದ ಈ ನೀಚ ಕೃತ್ಯ ಈಗ ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ.

Odisha School Abuse Case – ಮೃಗಗಳಾದರೇ ಶಿಕ್ಷಕರು?
ಓಡಿಶಾದ ಖಾಸಗಿ ಇಂಗ್ಲಿಷ್ ಮೀಡಿಯಂ ಶಾಲೆಯೊಂದರಲ್ಲಿ ಈ ಘಟನೆ ಸಂಭವಿಸಿದೆ. ಕೇವಲ ಒಬ್ಬ ವ್ಯಕ್ತಿಯಲ್ಲ, ಬದಲಿಗೆ ನಾಲ್ವರು ಶಿಕ್ಷಕರು ಮತ್ತು ಒಬ್ಬ ಪ್ಯೂನ್ ಸೇರಿ ಕಳೆದ ಒಂದು ವರ್ಷದಿಂದ ಬಾಲಕಿಯನ್ನು ಲೈಂಗಿಕವಾಗಿ ಪೀಡಿಸುತ್ತಿದ್ದರು. ಅತ್ಯಂತ ಆಘಾತಕಾರಿ ವಿಷಯವೆಂದರೆ, ಈ ನೀಚ ಕೃತ್ಯಕ್ಕೆ ಅದೇ ಶಾಲೆಯ ಒಬ್ಬ ಮಹಿಳಾ ಶಿಕ್ಷಕಿ ಕೂಡ ಸಾಥ್ ನೀಡಿದ್ದಾಳೆ. ಈ ಕಾಮಪಿಶಾಚಿಗಳನ್ನು ರಕ್ಷಿಸಲು ಆಕೆ ಸತತ ಪ್ರಯತ್ನ ನಡೆಸಿದ್ದಳು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಯಾರಿಗಾದರೂ ವಿಷಯ ತಿಳಿಸಿದರೆ ಪ್ರಾಣಾಪಾಯ ಉಂಟುಮಾಡುವುದಾಗಿ ಆರೋಪಿಗಳು ಬಾಲಕಿಗೆ ಬೆದರಿಕೆ ಹಾಕಿದ್ದರು. ಇದರಿಂದ ಹೆದರಿದ್ದ ಬಾಲಕಿ ಸುಮ್ಮನಿದ್ದಳು. ಆದರೆ ಕಳೆದ ತಿಂಗಳು ನೋವು ತಾಳಲಾರದೆ ತನ್ನ ತಾಯಿಯ ಮುಂದೆ ಮಗು ಎಲ್ಲವನ್ನೂ ತೋಡಿಕೊಂಡಿದೆ. ತಕ್ಷಣ ಎಚ್ಚೆತ್ತ ಪೋಷಕರು (Odisha School Abuse Case) ಫೆಬ್ರವರಿ 18ರಂದು ಬಾಲ ಕಲ್ಯಾಣ ಸಮಿತಿಗೆ (CWC) ದೂರು ನೀಡಿದ್ದಾರೆ. ಮರುದಿನವೇ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ತನಿಖೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ.
Read this also : ದೆಹಲಿಯಲ್ಲಿ ಘೋರ ಕೃತ್ಯ: ಎರಡೇ ವರ್ಷದ ಮಗುವಿನ ಗಂಟಲು ಸೀಳಿ ಕೊಂದ ಅತ್ತೆ, ಅಸಲಿ ಕಾರಣವೇನು?
ಪೊಲೀಸರ ಬಿಗಿ ಕ್ರಮ ಮತ್ತು ತನಿಖೆ
ಪ್ರಕರಣದ ತೀವ್ರತೆಯನ್ನು ಅರಿತ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಈ ಬಗ್ಗೆ ಎಸ್ಪಿ ಸಿದ್ಧಾರ್ಥ್ ಕಟಾರಿಯಾ ಅವರು ಮಾಹಿತಿ ನೀಡಿದ್ದು, ಒಟ್ಟು ಐವರು ಆರೋಪಿಗಳನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಪೋಕ್ಸೋ ಮತ್ತು ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. (Odisha School Abuse Case) ಪ್ರಕರಣದ ಗಾಂಭೀರ್ಯತೆ ದೃಷ್ಟಿಯಿಂದ ಕೇಂದ್ರ ಕಚೇರಿಯಿಂದ ಮಹಿಳಾ ಕ್ರೈಂ ವಿಭಾಗದ ಹಿರಿಯ ಅಧಿಕಾರಿಗಳನ್ನು ತನಿಖೆಗೆ ನಿಯೋಜಿಸಲಾಗಿದೆ.
ಶಾಲಾ ಮಂಡಳಿಯ ನಿರ್ಲಕ್ಷ್ಯದ ಆರೋಪ
ಬಾಲಕಿಯ ಕುಟುಂಬಸ್ಥರ ಪ್ರಕಾರ, (Odisha School Abuse Case) ಶಾಲಾ ಆಡಳಿತ ಮಂಡಳಿಗೆ ಈ ಮೊದಲೇ ದೂರು ನೀಡಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ಪ್ರಾಂಶುಪಾಲರು ಮಾತ್ರ ನಮಗೆ ಈ ವಿಷಯ ತಡವಾಗಿ ತಿಳಿಯಿತು ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಸದ್ಯ ಪೊಲೀಸರು ಶಾಲೆಯ ಸಿಸಿಟಿವಿ ದೃಶ್ಯಾವಳಿ ಹಾಗೂ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ತನಿಖೆಯ ನಂತರವಷ್ಟೇ ಪೂರ್ಣ ಸತ್ಯ ಹೊರಬರಲಿದೆ.

