Odisha Police – ಸರ್ಕಾರಿ ಉದ್ಯೋಗದ ಕನಸು ಕಂಡಿದ್ದ ಮಹಿಳೆಯೊಬ್ಬರು ತನ್ನ ಕಂದಮ್ಮನೊಂದಿಗೆ ಪರೀಕ್ಷೆಗೆ ಹಾಜರಾಗಲು ಬಂದಿದ್ದರು. ಒಡಿಶಾದ (Odisha) ಮಲ್ಕನ್‌ಗಿರಿ ಜಿಲ್ಲೆಯಲ್ಲಿ ನಡೆದ ನೇಮಕಾತಿ ಪರೀಕ್ಷೆಯ (Recruitment Exam) ವೇಳೆ ನಡೆದ ಈ ಘಟನೆ ಮಾನವೀಯತೆ ಮತ್ತು ತಾಯ್ತನದ (Motherhood and Humanity) ಅಪರೂಪದ ನಿದರ್ಶನವಾಗಿದೆ. ಕರ್ತವ್ಯದಲ್ಲಿದ್ದ ಓರ್ವ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ (Lady Police Constable) ಅವರು ತೋರಿದ ಔದಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.

Odisha Police – ಒಳಗೆ ಪರೀಕ್ಷೆ, ಹೊರಗೆ ಕಂದನ ಅಳಲು
ಭಾನುವಾರ ಬಿಬಿಗುಡಾ ಪರೀಕ್ಷಾ ಕೇಂದ್ರದಲ್ಲಿ ಆರ್‌ಐ (RI) ಮತ್ತು ಅಮೀನ್ ನೇಮಕಾತಿ ಪರೀಕ್ಷೆಗಳು ನಡೆಯುತ್ತಿದ್ದವು. ಈ ಪರೀಕ್ಷೆಗೆ ಬಂದಿದ್ದವರಲ್ಲಿ ಭೈರವಿ ಮಂಡಲ್ ಎಂಬ ಬಾಣಂತಿ ಕೂಡ ಒಬ್ಬರು. ಒಂದೂವರೆ ತಿಂಗಳ ಪುಟ್ಟ ಮಗುವಿನ ತಾಯಿಯಾಗಿದ್ದ ಭೈರವಿ, ಪರೀಕ್ಷೆ ಬರೆಯಲು ಒಳಗೆ ಹೋದರೆ ಹೊರಗೆ ಅವರ ಮಗು ಜೋರಾಗಿ ಅಳಲಾರಂಭಿಸಿತು. ಮಗುವಿನ ಅಳಲು ನಿಲ್ಲದೇ, ತಂದೆ ಎಷ್ಟೇ ಸಮಾಧಾನ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಒಳಗೆ ಪರೀಕ್ಷೆ ಬರೆಯುತ್ತಿದ್ದ ಭೈರವಿಗೆ ತಮ್ಮ ಮಗುವಿನ ಅಳಲು ಕೇಳಿ ಗಮನ ಕೇಂದ್ರೀಕರಿಸಲು ಆಗಲೇ ಇಲ್ಲ. ಸಂಕಟ ತಾಳಲಾರದೆ ಪರೀಕ್ಷೆಯನ್ನು ಮಧ್ಯದಲ್ಲೇ ಬಿಟ್ಟು ಹೊರಗೆ ಬರುವ ಯೋಚನೆಯಲ್ಲಿದ್ದರು ಆ ತಾಯಿ.
Odisha Police – ‘ನಾನೇ ನೋಡ್ಕೋತೀನಿ, ನೀವು ಪರೀಕ್ಷೆ ಬರೆಯಿರಿ’
ಪರೀಕ್ಷಾ ಕೇಂದ್ರದ ಹೊರಗೆ ಜೋರಾಗಿ ಅಳುತ್ತಿದ್ದ ಮಗುವನ್ನು ಹಾಗೂ ಆತಂಕದಲ್ಲಿದ್ದ ಪೋಷಕರನ್ನು ಕಂಡವರು ಅಲ್ಲೇ ಭದ್ರತಾ ಕರ್ತವ್ಯದಲ್ಲಿದ್ದ ಮಹಿಳಾ ಕಾನ್‌ಸ್ಟೆಬಲ್ ರಜನಿ ಮಾಝಿ. 7 ವರ್ಷಗಳಿಂದ ಮಲ್ಕನ್‌ಗಿರಿ ಮೀಸಲು ಪೊಲೀಸರಲ್ಲಿ ಸೇವೆ ಸಲ್ಲಿಸುತ್ತಿರುವ ರಜನಿ ಮಾಝಿ ಅವರಿಗೂ 9 ತಿಂಗಳ ಮಗುವಿದೆ.
ಮಗುವಿನ ಅಳಲು ಕೇಳಿ, ತಾಯಿಯ ಕಷ್ಟವನ್ನು ಅರ್ಥ ಮಾಡಿಕೊಂಡ ಕಾನ್‌ಸ್ಟೆಬಲ್ ರಜನಿ ಮಾಝಿ ಅವರು ತಕ್ಷಣವೇ ಆ ಪುಟ್ಟ ಮಗುವನ್ನು ತಮ್ಮ ಕೈಗೆ ತೆಗೆದುಕೊಂಡರು. “ಆ ಮಹಿಳೆ ಪರೀಕ್ಷೆ ಬರೆಯಬೇಕೋ, ಬಿಡಬೇಕೋ ಎಂಬ ಗೊಂದಲದಲ್ಲಿದ್ದರು. ಮಗುವಿನ ಹಸಿವು ನನಗೆ ಅರ್ಥವಾಯಿತು. ನಾನು ನಿಮಗೆ ಮಗುವನ್ನು ನೋಡಿಕೊಳ್ಳುತ್ತೇನೆ, ನೀವು ನೆಮ್ಮದಿಯಿಂದ ಪರೀಕ್ಷೆ ಬರೆಯಿರಿ ಎಂದು ಆಶ್ವಾಸನೆ ನೀಡಿದೆ,” ಎಂದು ರಜನಿ ಮಾಝಿ ಅವರು ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
Odisha Police – ಮಡಿಲಲ್ಲಿ ಮಲಗಿಸಿ, ಹಾಲುಣಿಸಿ ‘ತಾಯ್ತನ’ ತೋರಿದ ಕಾನ್‌ಸ್ಟೆಬಲ್
ಹಸಿವಿನಿಂದ ಅಳುತ್ತಿದ್ದ ಆ ಒಂದೂವರೆ ತಿಂಗಳ ಮಗುವಿಗೆ ಕಾನ್‌ಸ್ಟೆಬಲ್ ಮಾಝಿ ಅವರು ತಮ್ಮ ಮಡಿಲಲ್ಲಿ ಮಲಗಿಸಿಕೊಂಡು ಎದೆಹಾಲು (Breast Feeding) ಕುಡಿಸಿದರು! ಅಳು ನಿಲ್ಲಿಸಿದ ಮಗು ಶಾಂತವಾಗಿ ರಜನಿ ಮಾಝಿ ಅವರ ಮಡಿಲಲ್ಲೇ ನಿದ್ರೆಗೆ ಜಾರಿತು. ಸುಮಾರು ಎರಡು ಗಂಟೆಗಳ ಕಾಲ ರಜನಿ ಮಾಝಿ ಅವರು ಆ ಮಗುವನ್ನು ತಮ್ಮ ಮಗುವಿನಂತೆ ಆರೈಕೆ ಮಾಡಿದರು. ಇದರಿಂದ ತಾಯಿ ಭೈರವಿ ಮಂಡಲ್ ನೆಮ್ಮದಿಯಿಂದ ಪರೀಕ್ಷೆ ಬರೆದು ಪೂರ್ಣಗೊಳಿಸಲು ಸಾಧ್ಯವಾಯಿತು.

Odisha Police – ಪರೀಕ್ಷೆ ಮುಗಿಸಿ ಬಂದ ತಾಯಿಯಿಂದ ಕೃತಜ್ಞತೆ!
ಪರೀಕ್ಷೆ ಮುಗಿಸಿ ಹೊರಗೆ ಬಂದ ಭೈರವಿ ಮಂಡಲ್ ಅವರು ಮಗು ನೆಮ್ಮದಿಯಾಗಿರುವುದನ್ನು ಕಂಡು ಭಾವುಕರಾದರು. ಕಣ್ಣೀರು ಸುರಿಸುತ್ತಾ ಕಾನ್‌ಸ್ಟೆಬಲ್ ರಜನಿ ಮಾಝಿ ಅವರಿಗೆ ಧನ್ಯವಾದ ಅರ್ಪಿಸಿದರು.
ಸಂಬಂಧಿಸಿದ ಪೋಸ್ಟ್ ಇಲ್ಲಿದೆ ನೋಡಿ : Click Here
“ನನ್ನ ಮಗು ಅಳುತ್ತಿದ್ದಾಗ ಪರೀಕ್ಷೆಗೆ ಹಾಜರಾಗದಿರಲು ನಿರ್ಧರಿಸಿದ್ದೆ. ಆದರೆ, ಕಾನ್‌ಸ್ಟೆಬಲ್ ಅಕ್ಕನವರು ಮುಂದೆ ಬಂದು ಮಗುವಿನ ಜವಾಬ್ದಾರಿಯನ್ನು ತಾವೇ ತೆಗೆದುಕೊಂಡರು. ನನ್ನ ಮಗು ಚೆನ್ನಾಗಿ ನೋಡಿಕೊಂಡಿದ್ದಕ್ಕೆ ನಾನು ಅವರಿಗೆ ಎಂದೆಂದಿಗೂ ಕೃತಜ್ಞಳಾಗಿರುತ್ತೇನೆ,” ಎಂದು ಭೈರವಿ ಮಂಡಲ್ ಸಂತೋಷ ವ್ಯಕ್ತಪಡಿಸಿದ್ದಾರೆ. Read this also : 14 ರ ಬಾಲಕನಿಂದ 40 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ- ಕೊಲೆ, ಉತ್ತರ ಪ್ರದೇಶದಲ್ಲಿ ನಡೆದ ಘಟನೆ..!
ಈ ಮಾನವೀಯ ಘಟನೆಯನ್ನು ಒಡಿಶಾ ಪೊಲೀಸ್ ಇಲಾಖೆ ಕೂಡ ತಮ್ಮ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿದ್ದು, ಕಾನ್‌ಸ್ಟೆಬಲ್ ರಜನಿ ಮಾಝಿ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಖಾಕಿ ಧರಿಸಿದ ಈ ತಾಯಿಯ ಮನಸ್ಸು ಇಡೀ ಪೊಲೀಸ್ ಇಲಾಖೆಯ ಹೆಮ್ಮೆಯಾಗಿದೆ.
