HomeStateCrime : ಬೆಂಗಳೂರಿನಲ್ಲಿ ನವವಿವಾಹಿತೆ ಗಾನವಿ ದುರಂತ ಸಾವು: 58 ದಿನಗಳ ಸಂಸಾರದಲ್ಲಿ ಅಸಲಿಗೆ ನಡೆದಿದ್ದೇನು?

Crime : ಬೆಂಗಳೂರಿನಲ್ಲಿ ನವವಿವಾಹಿತೆ ಗಾನವಿ ದುರಂತ ಸಾವು: 58 ದಿನಗಳ ಸಂಸಾರದಲ್ಲಿ ಅಸಲಿಗೆ ನಡೆದಿದ್ದೇನು?

ದಾಂಪತ್ಯ ಜೀವನದ ನೂರಾರು ಕನಸು ಕಂಡಿದ್ದ ಆ ಯುವತಿಗೆ ಮದುವೆಯಾಗಿ ಕೇವಲ ಎರಡು ತಿಂಗಳು ಕೂಡ ಕಳೆದಿರಲಿಲ್ಲ. ಅದ್ದೂರಿಯಾಗಿ ನಡೆದ ಮದುವೆ, ರಂಗೇರಬೇಕಿದ್ದ ಸಂಸಾರದಲ್ಲಿ ಅಸಮಾಧಾನದ ಕಿಚ್ಚು ಹೊತ್ತಿಕೊಂಡಿತ್ತು. ಕೊನೆಗೆ ಹನಿಮೂನ್ ಮುಗಿಸಿ ಬಂದ ಕೆಲವೇ ದಿನಗಳಲ್ಲಿ ನವವಿವಾಹಿತೆ ಗಾನವಿ (26) ಬ್ರೈನ್ ಡೆಡ್ (Crime) ಆಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಬೆಂಗಳೂರಿನ ರಾಮಮೂರ್ತಿನಗರದಲ್ಲಿ ನಡೆದಿದ್ದು, ಇಡೀ ಕುಟುಂಬ ಕಣ್ಣೀರಲ್ಲಿ ಮುಳುಗಿದೆ.

Bengaluru crime case involving newlywed Ganavi who died after alleged dowry harassment and marital abuse in Ramamurthy Nagar

Crime News – ಏನಿದು ಘಟನೆ?

ಬೆಂಗಳೂರಿನ ಗಾನವಿ ಮತ್ತು ಸೂರಜ್ ಎಂಬುವವರ ವಿವಾಹ ಕಳೆದ ಅಕ್ಟೋಬರ್ 29 ರಂದು ಅದ್ದೂರಿಯಾಗಿ ನೆರವೇರಿತ್ತು. ಕುಟುಂಬದವರು ಅರಮನೆ ಮೈದಾನದಲ್ಲಿ ವೈಭವದ ಆರತಾಕ್ಷತೆ ಕೂಡ ನಡೆಸಿದ್ದರು. ಆದರೆ, ಮದುವೆಯಾದ ಕೇವಲ 58 ದಿನಗಳಲ್ಲೇ ಗಾನವಿ ಆತ್ಮಹತ್ಯೆಯ ಹಾದಿ ಹಿಡಿದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ (ಡಿ.24) ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಹನಿಮೂನ್‌ನಲ್ಲಿ ಶುರುವಾದ ಸಂಘರ್ಷ!

ಗಾನವಿ ಮತ್ತು ಸೂರಜ್ ಇತ್ತೀಚೆಗಷ್ಟೇ 10 ದಿನಗಳ ಪ್ರವಾಸಕ್ಕಾಗಿ ಶ್ರೀಲಂಕಾಕ್ಕೆ ಹನಿಮೂನ್‌ಗೆ ತೆರಳಿದ್ದರು. ಆದರೆ ಪ್ರವಾಸದ ನಡುವೆಯೇ ದಂಪತಿಗಳ ನಡುವೆ ಜಗಳ ತಾರಕಕ್ಕೇರಿದೆ. ಪ್ರವಾಸ ಮುಗಿಸುವ ಮೊದಲೇ ಇಬ್ಬರೂ ಅರ್ಧದಲ್ಲೇ ಬೆಂಗಳೂರಿಗೆ ವಾಪಸ್ ಬಂದಿದ್ದರು. “ಸೂರಜ್ ಮದುವೆಯಾದ ಮೊದಲ ದಿನದಿಂದಲೇ ಗಾನವಿಗೆ ಮಾನಸಿಕ ಹಿಂಸೆ (Crime)  ನೀಡುತ್ತಿದ್ದ” ಎಂದು ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ.

“ಆತ ಗಂಡಸೇ ಅಲ್ಲ!” – ದೊಡ್ಡಮ್ಮನ ಆಕ್ರೋಶ

ಗಾನವಿಯ ದೊಡ್ಡಮ್ಮ ರಾಧಾ ಕಣ್ಣೀರು ಹಾಕುತ್ತಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. “ನಾನೇ ಒಳ್ಳೆಯ ಸಂಬಂಧವೆಂದು ಈ ಮದುವೆ ಮಾಡಿಸಿದ್ದೆ. ಆದರೆ ವರದಕ್ಷಿಣೆ ಮತ್ತು ಒಡವೆಗಾಗಿ ಅವರು ನನ್ನ ಮಗಳಿಗೆ ಚಿತ್ರಹಿಂಸೆ ನೀಡಿದ್ದಾರೆ. ಮದುವೆಯಾಗಿ ಇಷ್ಟು ದಿನವಾದರೂ ಆತ ನಮ್ಮ ಹುಡುಗಿಯನ್ನು ಮುಟ್ಟಿಯೂ ಇಲ್ಲ. ತನ್ನ ಸಮಸ್ಯೆ ಮುಚ್ಚಿಡಲು ಆಕೆ ಮೇಲೆ ದಬ್ಬಾಳಿಕೆ ಮಾಡುತ್ತಿದ್ದ. ಹನಿಮೂನ್ ಹೋದಾಗಲೂ ಜಗಳ ಮಾಡಿದ್ದಾನೆ,” ಎಂದು ಆಕ್ರೋಶ (Crime)  ಹೊರಹಾಕಿದ್ದಾರೆ.

Bengaluru crime case involving newlywed Ganavi who died after alleged dowry harassment and marital abuse in Ramamurthy Nagar

ವರದಕ್ಷಿಣೆ ಕಿರುಕುಳದ ಆರೋಪ

ಗಾನವಿಯ ಚಿಕ್ಕಪ್ಪ ಕಾರ್ತಿಕ್ ಈ ಬಗ್ಗೆ ಮಾತನಾಡಿ, “ಸೂರಜ್ ಮತ್ತು ಆತನ ಕುಟುಂಬದವರು ಇನ್ನೋವಾ ಕಾರು ಬೇಕೆಂದು ಪೀಡಿಸುತ್ತಿದ್ದರು. ಮದುವೆ ನಂತರ ಸಂಸಾರಿಕ ಜೀವನದ ಬಗ್ಗೆ ಆತನಿಗೆ ಕಿಂಚಿತ್ತೂ ಆಸಕ್ತಿ ಇರಲಿಲ್ಲ. ಈ ಸತ್ಯವನ್ನು ಮುಚ್ಚಿಟ್ಟು ಮದುವೆಯಾಗಿದ್ದರು. ಈಗ ಮೂವರ ವಿರುದ್ಧ ನಾವು ದೂರು ನೀಡಿದ್ದೇವೆ,” ಎಂದಿದ್ದಾರೆ. Read this also : ಮದುವೆಯಾದ ಕೇವಲ ಒಂದೂವರೆ ತಿಂಗಳಲ್ಲೇ ನವವಧು ಆ**ಹತ್ಯೆಗೆ ಯತ್ನ; ವರದಕ್ಷಿಣೆ ಕಿರುಕುಳದ ಗಂಭೀರ ಆರೋಪ

ಪೊಲೀಸ್ ತನಿಖೆ ತೀವ್ರ

ಪ್ರಸ್ತುತ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪತಿ ಸೂರಜ್, ಅತ್ತೆ ಹಾಗೂ ಸಂಜಯ್ ಎಂಬುವವರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ FIR ದಾಖಲಾಗಿದೆ. ಸದ್ಯ ಆರೋಪಿಗಳ (Crime)  ಫೋನ್ ಸ್ವಿಚ್ ಆಫ್ ಆಗಿದ್ದು, ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular