Nail Biting – ಹಲವರಿಗೆ ಉಗುರು ಕಚ್ಚುವ ಅಭ್ಯಾಸ ಇರುತ್ತೆ. ಕೆಲವರು ಟೆನ್ಷನ್ ಆದ್ರೆ, ಮತ್ತೆ ಕೆಲವರು ಬೋರ್ ಆದಾಗ ಉಗುರು ಕಚ್ಚುತ್ತಾರೆ. ಸಣ್ಣ ಮಕ್ಕಳಂತೂ ಉಗುರು ಕಚ್ಚುವಾಗ ಸಿಕ್ಕಾಪಟ್ಟೆ ಮುದ್ದು ಮುದ್ದಾಗಿ ಕಾಣಿಸುತ್ತಾರೆ. ಆದ್ರೆ ಈ ಅಭ್ಯಾಸ ಆರೋಗ್ಯಕ್ಕೆ ಅಷ್ಟೇ ಅಲ್ಲ, ಜ್ಯೋತಿಷ್ಯದ ಪ್ರಕಾರ ನಿಮ್ಮ ಅದೃಷ್ಟಕ್ಕೂ ಮಾರಕವಾಗಿದೆಯಂತೆ.

Nail Biting – ಏಕೆ ಉಗುರು ಕಚ್ಚುವುದು ಕೆಟ್ಟ ಅಭ್ಯಾಸ?
ನೀವು ಅರಿವಿಲ್ಲದೆಯೆ ಮಾಡುವ ಉಗುರು ಕಚ್ಚುವ ಅಭ್ಯಾಸ, ನಿಮ್ಮ ಆರೋಗ್ಯ ಮತ್ತು ನಿಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಉಗುರಿನ ಕೆಳಗೆ ಸಂಗ್ರಹವಾಗಿರುವ ಧೂಳು, ಕೊಳಕು, ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ಬಾಯಿಯ ಮೂಲಕ ದೇಹ ಸೇರಿ, ಹೊಟ್ಟೆಯ ಸಮಸ್ಯೆ, ಸೋಂಕು ಮತ್ತಿತರ ಕಾಯಿಲೆಗಳಿಗೆ ಕಾರಣವಾಗಬಹುದು. ಅಲ್ಲದೆ ಜ್ಯೋತಿಷ್ಯದ ಪ್ರಕಾರ, ಈ ಅಭ್ಯಾಸ ಹಣದ ಕೊರತೆ, ಹಣಕಾಸಿನ ತೊಂದರೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕುಗ್ಗಿಸುವುದಕ್ಕೆ ಕಾರಣವಾಗಿದೆಯಂತೆ.
Nail Biting – ಹಣದ ಕೊರತೆ ಮತ್ತು ಆರ್ಥಿಕ ಬಿಕ್ಕಟ್ಟು?
ಜ್ಯೋತಿಷ್ಯದ ಪ್ರಕಾರ, ಉಗುರು ಕಚ್ಚುವ ಅಭ್ಯಾಸವು ಶನಿ ದೋಷದ ಸಂಕೇತವಾಗಿದೆ. ಹಾಗಾಗಿ ಈ ಅಭ್ಯಾಸದಿಂದ ಶನಿಯ ದುಷ್ಟದೃಷ್ಟಿ ನಿಮ್ಮ ಮೇಲೆ ಬೀಳುತ್ತದೆ. ಇದರ ಪರಿಣಾಮವಾಗಿ ನಿಮ್ಮ ಹಣಕಾಸಿನ ಸ್ಥಿತಿ ಹದಗೆಡುತ್ತದೆ ಮತ್ತು ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು. Read this also : Brain Health : ಮೆದುಳಿಗೆ ಹಾನಿ ಮಾಡುವ ಒತ್ತಡ: ರಕ್ಷಿಸಿಕೊಳ್ಳಲು 5 ಸುಲಭ ಮಾರ್ಗಗಳು…!
ಆತ್ಮವಿಶ್ವಾಸ ಕುಂಠಿತಗೊಳ್ಳುತ್ತೆ
ಪದೇ ಪದೇ ಉಗುರು ಕಚ್ಚುವ ಅಭ್ಯಾಸವಿದ್ದರೆ, ನಿಮ್ಮ ಸೂರ್ಯ ಗ್ರಹ ದುರ್ಬಲಗೊಳ್ಳುತ್ತದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಕುಂಠಿತಗೊಳ್ಳುವುದಲ್ಲದೆ, ವೃತ್ತಿಜೀವನದಲ್ಲಿ ಅಡೆತಡೆಗಳು ಉಂಟಾಗುತ್ತವೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ.

Nail Biting – ಈ ಅಭ್ಯಾಸವನ್ನು ನಿಲ್ಲಿಸುವುದು ಹೇಗೆ?
- ನಿಯಮಿತವಾಗಿ ಉಗುರು ಕತ್ತರಿಸಿ: ನಿಮ್ಮ ಉಗುರುಗಳನ್ನು ಸಣ್ಣದಾಗಿ ಕತ್ತರಿಸಿ, ಅವುಗಳನ್ನು ಕಚ್ಚಲು ಅವಕಾಶ ನೀಡದಿರಿ.
- ಕಹಿ ನೆನಪಿಡಿ: ಮಾರುಕಟ್ಟೆಯಲ್ಲಿ ಸಿಗುವ ಕಹಿ ರುಚಿಯ ಉಗುರು ಬಣ್ಣವನ್ನು ಹಚ್ಚುವುದರಿಂದ ಉಗುರು ಕಚ್ಚುವ ಆಸಕ್ತಿ ಕಡಿಮೆಯಾಗುತ್ತದೆ.
- ಒತ್ತಡವನ್ನು ನಿಭಾಯಿಸಿ: ಸಾಮಾನ್ಯವಾಗಿ ಒತ್ತಡದಲ್ಲಿರುವಾಗ ಉಗುರು ಕಚ್ಚುವ ಅಭ್ಯಾಸ ಹೆಚ್ಚಿರುತ್ತದೆ. ಯೋಗ ಮತ್ತು ಧ್ಯಾನದಂತಹ ಅಭ್ಯಾಸಗಳ ಮೂಲಕ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ.
