Siddaramaiah – ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್‌ನ ‘ಸಾಧನಾ ಸಮಾವೇಶ’ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಬೇಕೆಂಬ ಉದ್ದೇಶದಿಂದ ಆಯೋಜಿಸಲಾಗಿತ್ತು. ಆದರೆ, ಈ ಸಮಾವೇಶದಲ್ಲಿ ಕಾಂಗ್ರೆಸ್‌ನ ಉನ್ನತ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ಸ್ಪಷ್ಟವಾಗಿಯೇ ಭಾಸವಾಯ್ತು ಎನ್ನಬಹುದಾಗಿದೆ. ಸಿದ್ದರಾಮಯ್ಯನವರ ಭಾಷಣಕ್ಕೂ ಮುನ್ನವೇ ಡಿ.ಕೆ.ಶಿವಕುಮಾರ್ ರವರು ಕಾರ್ಯಕ್ರಮದಿಂದ ನಿರ್ಗಮಿಸಿದ್ದರು. ಈ ವೇಳೆ ಸಿಎಂ ಸಿದ್ದು ಡಿ.ಕೆ.ಶಿವಕುಮಾರ್ ರವರಿಗೆ ಟಾಂಗ್ ನೀಡಿದ್ದಾರೆ.
Siddaramaiah – ಸಿದ್ದರಾಮಯ್ಯ ಭಾಷಣಕ್ಕೂ ಮುನ್ನವೇ ಡಿಕೆಶಿ ನಿರ್ಗಮನ: ಅಸಮಾಧಾನ ಸ್ಫೋಟ!
ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಆರಂಭಿಸುವ ಮುನ್ನವೇ ಡಿಸಿಎಂ ಡಿ.ಕೆ. ಶಿವಕುಮಾರ್ ವೇದಿಕೆಯಿಂದ ಇಳಿದು ಬೆಂಗಳೂರಿನತ್ತ ಹೊರಟಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಒಂದು ಕಡೆ ಡಿಕೆಶಿ ನಿರ್ಗಮನವಾದರೆ, ಇನ್ನೊಂದೆಡೆ ವೇದಿಕೆಯಲ್ಲೇ ಸಿಎಂ ಸಿದ್ದರಾಮಯ್ಯ ಅವರು ಡಿಕೆಶಿಗೆ ‘ಟಾಂಗ್’ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.
ಸುದ್ದಿಗೆ ಸಂಬಂಧಪಟ್ಟ ಲಿಂಕ್ ಇಲ್ಲಿದೆ ನೋಡಿ: ಕ್ಲಿಕ್ ಮಾಡಿ
ಕಾಂಗ್ರೆಸ್ ಮುಖಂಡ, ನಟ ಸಾಧುಕೋಕಿಲ ಅವರು ಸಿಎಂ ಭಾಷಣ ಆರಂಭಕ್ಕೂ ಮುನ್ನ, ಎಲ್ಲರಿಗೂ ಸ್ವಾಗತ ಕೋರುವಾಗ ಡಿಕೆ ಶಿವಕುಮಾರ್ ಹೆಸರನ್ನು ಪ್ರಸ್ತಾಪಿಸಲಿಲ್ಲ ಎಂದು ಗಮನಸೆಳೆದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, “ಸ್ವಾಗತ ಮಾಡೋದು ಇಲ್ಲಿ ಇರೋರಿಗೆ. ಮನೆಯಲ್ಲಿ ಕೂತಿರೋ ಅವರಿಗೆ ಅಲ್ಲ” ಎಂದು ಹೇಳುವ ಮೂಲಕ ಕಾರ್ಯಕ್ರಮದ ಮಧ್ಯದಲ್ಲೇ ವೇದಿಕೆಯಿಂದ ಹೊರಟ ಡಿಸಿಎಂ ಡಿಕೆ. ಶಿವಕುಮಾರ್ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
Read this also : RBI ಕಡೆಯಿಂದ ಸಾಲಗಾರರಿಗೆ ಸಿಹಿಸುದ್ದಿ: ಆಗಸ್ಟ್ 2025ರಲ್ಲಿ ಮತ್ತೊಮ್ಮೆ ಬಡ್ಡಿ ದರ ಕಡಿತದ ನಿರೀಕ್ಷೆ!
Siddaramaiah – ಮೈಸೂರಿಗೆ ಸಿದ್ದರಾಮಯ್ಯ ಭರಪೂರ ಕೊಡುಗೆ: ₹2658 ಕೋಟಿ ಅನುದಾನ!
ಸಮಾವೇಶದಲ್ಲಿ ರಾಜಕೀಯ ಜಟಾಪಟಿಗಳ ನಡುವೆಯೂ ಸಿಎಂ ಸಿದ್ದರಾಮಯ್ಯ ಮೈಸೂರು ನಗರಕ್ಕೆ ಭರಪೂರ ಕೊಡುಗೆಗಳನ್ನು ಘೋಷಿಸಿದರು. ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ, ₹2658 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು.
Siddaramaiah – ಮೈಸೂರು ಅಭಿವೃದ್ಧಿಗೆ ಬೃಹತ್ ಯೋಜನೆಗಳು:
- 24 ಇಲಾಖೆಗಳ 74 ಕಾಮಗಾರಿಗಳಿಗೆ ಚಾಲನೆ: ಮೈಸೂರಿನ ಸಮಗ್ರ ಅಭಿವೃದ್ಧಿಗೆ ಇದರಿಂದ ಬಲ ಸಿಗಲಿದೆ.
- ಚೆಸ್ಕಾಂ ಇಲಾಖೆಗೆ ₹408 ಕೋಟಿ: ವಿದ್ಯುತ್ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು.
- ರಸ್ತೆ ಅಭಿವೃದ್ಧಿ ಕಾಮಗಾರಿಗೆ ₹393 ಕೋಟಿ: ನಗರದ ರಸ್ತೆಗಳ ಗುಣಮಟ್ಟ ಸುಧಾರಣೆ.
- ಅರಮನೆ ಮಾದರಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ₹120 ಕೋಟಿ: ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ.
- ವಿದ್ಯಾರ್ಥಿ ನಿಲಯಗಳಿಗೆ ₹108 ಕೋಟಿ: ವಿದ್ಯಾರ್ಥಿಗಳ ವಸತಿ ಸೌಲಭ್ಯಕ್ಕೆ ಬೆಂಬಲ.
- ಕ್ಯಾನ್ಸರ್ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆ ಕಟ್ಟಡಗಳ ನಿರ್ಮಾಣಕ್ಕೆ ₹175 ಕೋಟಿ: ಆರೋಗ್ಯ ಮೂಲಸೌಕರ್ಯ ಬಲವರ್ಧನೆ.
- ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ ₹23 ಕೋಟಿ: ಪ್ರವಾಸೋದ್ಯಮ ಉತ್ತೇಜನಕ್ಕೆ ಸಹಕಾರಿ.