ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರು ಸದಾ ಚಿಂತೆಯಲ್ಲಿರುತ್ತಾರೆ. ಆದರೆ, ಮುಂಬೈನ ವಿಖ್ರೋಲಿಯಲ್ಲಿ (Vikhroli) ನಡೆದ ಘಟನೆಯೊಂದು ಈಗ ಪ್ರತಿಯೊಬ್ಬರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದೆ. ದುರಸ್ತಿಗಾಗಿ ಮುಚ್ಚಲಾದ ಫುಟ್ ಓವರ್ ಬ್ರಿಡ್ಜ್ (FOB) ಒಂದನ್ನು ಶಾಲಾ ಬಾಲಕಿಯರು ಅತ್ಯಂತ ಅಪಾಯಕಾರಿಯಾಗಿ ದಾಟುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಿದೆ.

Viral – ಏನಿದು ಘಟನೆ?
ವೈರಲ್ ಆಗಿರುವ ವಿಡಿಯೋದಲ್ಲಿ ಕಂಡುಬರುವಂತೆ, ವಿಖ್ರೋಲಿಯ ರೈಲ್ವೆ ಫುಟ್ ಓವರ್ ಬ್ರಿಡ್ಜ್‌ಗೆ ದುರಸ್ತಿ ಕಾಮಗಾರಿಗಾಗಿ ತಗಡಿನ ಶೀಟ್‌ಗಳನ್ನು ಹಾಕಿ ಮುಚ್ಚಲಾಗಿದೆ. ಆದರೆ, ಬ್ರಿಡ್ಜ್ ಬಂದ್ ಆಗಿದ್ದರೂ ಸಹ, ಶಾಲಾ ಸಮವಸ್ತ್ರ ಧರಿಸಿರುವ ಬಾಲಕಿಯರ ಗುಂಪೊಂದು ಆ ತಡೆಗೋಡೆಗಳನ್ನು ದಾಟಿ ಬ್ರಿಡ್ಜ್ ಇಳಿಯಲು ಪ್ರಯತ್ನಿಸುತ್ತಿದೆ. Read this also : ವಾಹ್.. ಸ್ವಲ್ಪದರಲ್ಲೇ ಪ್ರಾಣ ಉಳೀತು! ಮುಂಜಾನೆ ಜನರಿಗೆ ಶಾಕ್ ಕೊಟ್ಟ ಚಿರತೆ : ಮೈ ಜುಂ ಎನ್ನಿಸುವ ವಿಡಿಯೋ ವೈರಲ್..!
ಇದರಲ್ಲಿ ಒಬ್ಬ ಬಾಲಕಿ ಬ್ರಿಡ್ಜ್‌ನ ಹೊರಭಾಗದ ಕಂಬಿಗಳನ್ನು ಹಿಡಿದುಕೊಂಡು, ಕೆಳಗೆ ಬೀಳುವ ಭೀತಿಯ ನಡುವೆಯೂ ಇಳಿಯಲು ಯತ್ನಿಸುತ್ತಿದ್ದಾಳೆ. ಆಕೆಯ ಹಿಂದೆ ಮತ್ತೊಬ್ಬ ಬಾಲಕಿ ಅದೇ ಸಾಹಸಕ್ಕೆ ಮುಂದಾಗಿದ್ದರೆ, ಕೆಳಗೆ ಇಬ್ಬರು ಬಾಲಕಿಯರು ಅವರಿಗಾಗಿ ಕಾಯುತ್ತಿರುವುದು ಕಂಡುಬಂದಿದೆ. ಅತ್ಯಂತ ಬೇಸರದ ಸಂಗತಿಯೆಂದರೆ, ಅಕ್ಕಪಕ್ಕದಲ್ಲಿ ಜನ ಓಡಾಡುತ್ತಿದ್ದರೂ, ಯಾರೊಬ್ಬರೂ ಈ ಮಕ್ಕಳನ್ನು ತಡೆಯುವ ಅಥವಾ ಬುದ್ಧಿ ಹೇಳುವ ಪ್ರಯತ್ನ ಮಾಡದಿರುವುದು ಸಾರ್ವಜನಿಕರ ಜವಾಬ್ದಾರಿಯನ್ನೂ ಪ್ರಶ್ನಿಸುವಂತಿದೆ.
Viral – ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ
ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ‘ವಿಖ್ರೋಲಿಕರ್’ (Vikhrolikarr) ಎಂಬ ಪುಟ ಹಂಚಿಕೊಂಡಿದೆ. “ರಿಪೇರಿ ನೆಪದಲ್ಲಿ ಬ್ರಿಡ್ಜ್ ಮುಚ್ಚಿ ಇಷ್ಟು ದಿನವಾದರೂ ಕಾಮಗಾರಿ ಮುಗಿದಿಲ್ಲವೇಕೆ? ಮಕ್ಕಳು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ” ಎಂದು ಪ್ರಶ್ನಿಸಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ವಿರುದ್ಧ ಕೆಂಡಾಮಂಡಲವಾಗಿದ್ದಾರೆ. “ಇದು ಆಡಳಿತದ ಸಂಪೂರ್ಣ ವೈಫಲ್ಯ. ದೊಡ್ಡ ದುರಂತ ನಡೆಯುವವರೆಗೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದಿಲ್ಲವೇ?” ಎಂದು ಜನ ಪ್ರಶ್ನಿಸುತ್ತಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click here
Viral – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿಶಾಪ
ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದೇ ಇಂತಹ ಅವಘಡಗಳಿಗೆ ಆಹ್ವಾನ ನೀಡಿದಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. “ರಾಜಕೀಯ ನಾಯಕರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಾಮಾನ್ಯ ಜನರ ಪ್ರಾಣಕ್ಕೆ ಬೆಲೆಯೇ ಇಲ್ಲದಂತಾಗಿದೆ” ಎಂದು ಕೆಲವರು ಕಮೆಂಟ್ ಬಾಕ್ಸ್‌ನಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆ ಮುಂಬೈ ಮಹಾನಗರದ ಮೂಲಸೌಕರ್ಯಗಳ ದುಸ್ಥಿತಿ ಮತ್ತು ಸುರಕ್ಷತಾ ಲೋಪಗಳನ್ನು ಮತ್ತೊಮ್ಮೆ ಬಟಾಬಯಲು ಮಾಡಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ಇಂತಹ ಅಪಾಯಕಾರಿ ಸ್ಥಳಗಳಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.
