ಭಾಷಾಭಿಮಾನ ಇರಬೇಕು, ನಿಜ. ನಮ್ಮ ಭಾಷೆಯನ್ನು ನಾವು ಪ್ರೀತಿಸಬೇಕು, ಉಳಿಸಬೇಕು. ಆದರೆ ಆ ಭಾಷೆಯ ಮೇಲಿನ ವ್ಯಾಮೋಹ ಎಳೆ ಮಗುವಿನ ಪ್ರಾಣ ತೆಗೆಯುವ ಮಟ್ಟಕ್ಕೆ ಹೋಗಬಹುದೇ? ಖಂಡಿತ ಇಲ್ಲ. ಆದರೆ ನವಿ ಮುಂಬೈನಲ್ಲಿ (Mumbai Crime) ನಡೆದ ಘಟನೆಯೊಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಕೇವಲ ‘ಮಾತೃಭಾಷೆ ಮಾತನಾಡುತ್ತಿಲ್ಲ’ ಎಂಬ ಕಾರಣಕ್ಕೆ ತಾಯಿಯೊಬ್ಬಳು ತನ್ನ 6 ವರ್ಷದ ಮಗಳನ್ನೇ ಕೊಲೆಗೈದ ಭಯಾನಕ ಘಟನೆ ನಡೆದಿದೆ.

Mumbai – ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.
ಅಜ್ಜಿ ಮನೆಗೆ ಬಂದಾಗ ಬೆಳಕಿಗೆ ಬಂತು ಸತ್ಯ! ನವಿ ಮುಂಬೈನ ಕಲಂಬೋಲಿಯಲ್ಲಿ ವಾಸವಾಗಿರುವ ಕುಟುಂಬವೊಂದರಲ್ಲಿ ಈ ದುರಂತ ನಡೆದಿದೆ. ಆರೋಪಿ ತಾಯಿಗೆ ಇಬ್ಬರು ಮಕ್ಕಳಿದ್ದರು. ಆಕೆಯ 6 ವರ್ಷದ ಮಗಳು ಮನೆಯ ಬೆಡ್ ಮೇಲೆ ಅಸ್ವಸ್ಥಗೊಂಡು ಬಿದ್ದಿದ್ದಳು. ಮಗುವಿನ ಅಜ್ಜಿ ಮನೆಗೆ ಭೇಟಿ ನೀಡಿದಾಗ ಮಗು ಚಲನವಲನ ಇಲ್ಲದೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಅಜ್ಜಿ ಎಷ್ಟೇ ಕರೆದರೂ, ಅಲುಗಾಡಿಸಿದರೂ ಮಗು ಸ್ಪಂದಿಸಲಿಲ್ಲ. ಉಸಿರಾಟ ಪರಿಶೀಲಿಸಿದಾಗ ಅಜ್ಜಿಗೆ ಆಘಾತ ಕಾದಿತ್ತು. ತಕ್ಷಣವೇ (Mumbai Crime) ಮಗುವನ್ನು ಎತ್ತಿಕೊಂಡು ಆಟೋದಲ್ಲಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಹೃದಯಾಘಾತದ ಕತೆ ಕಟ್ಟಿದ ತಾಯಿ
ಆಸ್ಪತ್ರೆಗೆ ಹೋದಾಗ ಮಗುವಿನ ತಾಯಿ, “ನನ್ನ ಮಗಳಿಗೆ ಹೃದಯಾಘಾತವಾಗಿದೆ (Heart Attack)” ಎಂದು ಸುಳ್ಳು ಕಥೆ ಕಟ್ಟಿದ್ದಾಳೆ. ಆದರೆ 6 ವರ್ಷದ ಮಗುವಿಗೆ ಹೃದಯಾಘಾತವಾಗಲು ಹೇಗೆ ಸಾಧ್ಯ? ಎಂಬ ಅನುಮಾನ ಅಜ್ಜಿಗೆ ಶುರುವಾಗಿದೆ. ಇತ್ತ ಆಸ್ಪತ್ರೆ ಸಿಬ್ಬಂದಿಗೂ ಸಂಶಯ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. (Mumbai Crime) ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ (Post-mortem) ಕಳುಹಿಸಿದಾಗ ಸ್ಫೋಟಕ ಸತ್ಯ ಬಯಲಾಗಿದೆ.
ಉಸಿರುಗಟ್ಟಿಸಿ ಕೊಂದಿದ್ದು ದೃಢ!
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಗುವಿನದ್ದು ಸಹಜ ಸಾವಲ್ಲ, ಬದಲಾಗಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬುದು ದೃಢಪಟ್ಟಿದೆ. ತಕ್ಷಣವೇ ಪೊಲೀಸರು ತಾಯಿಯನ್ನು (Mumbai Crime) ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆಕೆ ನೀಡಿದ ಉತ್ತರ ಕೇಳಿ ಪೊಲೀಸರೇ ದಂಗಾಗಿದ್ದಾರೆ. Read this also : ಮದುವೆಯಾದ ಕೇವಲ ಒಂದೂವರೆ ತಿಂಗಳಲ್ಲೇ ನವವಧು ಆ**ಹತ್ಯೆಗೆ ಯತ್ನ; ವರದಕ್ಷಿಣೆ ಕಿರುಕುಳದ ಗಂಭೀರ ಆರೋಪ
“ಮರಾಠಿ ಮಾತಾಡ್ತಿಲ್ಲ, ಅದಕ್ಕೆ ಕೊಂದೆ”
ಪೊಲೀಸರ ವಿಚಾರಣೆಯಲ್ಲಿ ತಾಯಿ ವಿಚಿತ್ರ ಹೇಳಿಕೆ ನೀಡಿದ್ದಾಳೆ. “ನನ್ನ ಮಗಳು ನಮ್ಮ ಮಾತೃಭಾಷೆಯಾದ ಮರಾಠಿಯನ್ನು ಮಾತನಾಡುತ್ತಿರಲಿಲ್ಲ. ಅದಕ್ಕೆ ಕೋಪ ಬಂದು ನಾನೇ ಅವಳನ್ನು ಉಸಿರುಗಟ್ಟಿಸಿ ಕೊಂದೆ” (Mumbai Crime) ಎಂದು ತಪ್ಪೊಪ್ಪಿಕೊಂಡಿದ್ದಾಳೆ.

ಆದರೆ, ಕೇವಲ ಭಾಷೆಯ ಕಾರಣಕ್ಕೆ ತಾಯಿ ಮಗುವನ್ನು ಕೊಲ್ಲಲು ಸಾಧ್ಯವೇ? ಎಂಬ ಪ್ರಶ್ನೆ ಪೊಲೀಸರನ್ನು ಕಾಡುತ್ತಿದೆ. ಆಕೆಯ ವರ್ತನೆಯನ್ನು ಗಮನಿಸಿದರೆ ಆಕೆ ಮಾನಸಿಕವಾಗಿ ಅಸ್ವಸ್ಥಗೊಂಡಿರುವ (Mental Health Issues) ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
