HomeNationalBike Stunt Accident : ಧೂಮ್ ಸ್ಟೈಲ್ ವೀಲಿಂಗ್ ಮಾಡಲು ಹೋಗಿ ಅವಾಂತರ: ಪ್ರೇಯಸಿಯ ಖಾಸಗಿ...

Bike Stunt Accident : ಧೂಮ್ ಸ್ಟೈಲ್ ವೀಲಿಂಗ್ ಮಾಡಲು ಹೋಗಿ ಅವಾಂತರ: ಪ್ರೇಯಸಿಯ ಖಾಸಗಿ ಅಂಗಕ್ಕೆ ಗಂಭೀರ ಗಾಯ!

ಪ್ರೀತಿಯ ಅಮಲಿನಲ್ಲಿ ಸಾಹಸ ಮಾಡಲು ಹೋಗುವ ಯುವಕರಿಗೆ ಈ ಘಟನೆ ಕಣ್ಣು ತೆರೆಸುವಂತಿದೆ. ಬೈಕ್ ಸವಾರಿಯಲ್ಲಿ ರೋಮಾಂಚನ ಇರಬೇಕು ನಿಜ, ಆದರೆ ಅದು ಪ್ರಾಣಕ್ಕೇ ಕಂಟಕವಾಗಬಾರದು. ಗೆಳತಿಯನ್ನು ಹಿಂದಕ್ಕೆ ಕೂರಿಸಿಕೊಂಡು ಬೈಕ್‌ನಲ್ಲಿ ಸುತ್ತಾಡಲು ಹೊರಟ ಈ ಯುವಕನಿಗೆ, ತನ್ನ (Bike Stunt Accident) ಒಂದು ಸಣ್ಣ ತಪ್ಪು ಇಡೀ ಬದುಕನ್ನೇ ಇಕ್ಕಟ್ಟಿಗೆ ಸಿಲುಕಿಸುತ್ತದೆ ಎಂಬ ಅಂದಾಜೇ ಇರಲಿಲ್ಲ. ‘ಧೂಮ್’ ಸ್ಟೈಲ್‌ನಲ್ಲಿ ಸ್ಟಂಟ್ ಪ್ರದರ್ಶಿಸಲು ಹೋದ ಯುವಕನ ಈ ಹುಚ್ಚಾಟ ಈಗ ಆ ಯುವತಿ ಆಸ್ಪತ್ರೆ ಪಾಲಾಗಬೇಕಿದೆ.

Mumbai bike stunt gone wrong leaves woman seriously injured during dangerous wheelie attempt

Bike Stunt Accident – ಏನಿದು ಘಟನೆ?

ಯುವಕ ಮತ್ತು ಯುವತಿಯಿಬ್ಬರು ರಾತ್ರಿ ಸಮಯದಲ್ಲಿ ಬೈಕ್‌ನಲ್ಲಿ ಔಟಿಂಗ್ ಹೊರಟಿದ್ದರು. ಆರಂಭದಲ್ಲಿ ಎಲ್ಲವೂ ಸುಗಮವಾಗಿಯೇ ಇತ್ತು. ತಣ್ಣನೆಯ ಗಾಳಿಯಲ್ಲಿ ಬೈಕ್ ಸವಾರಿ (Bike Stunt Accident) ಮಾಡುತ್ತಾ ಇಬ್ಬರೂ ಎಂಜಾಯ್ ಮಾಡುತ್ತಿದ್ದರು. ಆದರೆ, ಯಾವಾಗ ಯುವಕನಿಗೆ ತನ್ನ ಸಾಹಸ ಪ್ರದರ್ಶಿಸುವ ಬುದ್ಧಿ ಬಂತೋ, ಅಲ್ಲಿಂದಲೇ ಕಥೆ ತಿರುವು ಪಡೆಯಿತು. Read this also : ಫುಟ್‌ ಪಾತ್ ಮೇಲೆ ಬೈಕ್ ಹತ್ತಿಸಿದವನಿಗೆ ‘ಸಿಂಹಿಣಿ’ಯಂತೆ ಅಡ್ಡ ನಿಂತ ಅಜ್ಜಿ: ಕೇರಳದ ವೃದ್ಧೆಯ ಧೈರ್ಯಕ್ಕೆ ಇಂಟರ್ನೆಟ್ ಫಿದಾ!

ಬೈಕ್ ಓಡಿಸುತ್ತಿದ್ದ ಯುವಕ, ಹಿಂದೆ ಕುಳಿತಿದ್ದ ಗೆಳತಿಯ ಸುರಕ್ಷತೆಯ ಬಗ್ಗೆ ಯೋಚಿಸದೆ ಸಿನೆಮಾ ಶೈಲಿಯಲ್ಲಿ ದಿಢೀರನೆ ವೀಲಿಂಗ್ (Wheeling) ಮಾಡಿದ್ದಾನೆ. ಈ ಸ್ಟಂಟ್‌ನ ಬಗ್ಗೆ ಕಿಂಚಿತ್ತೂ ಸುಳಿವಿರದ ಯುವತಿ, ಒಮ್ಮೆಗೆ ಬ್ಯಾಲೆನ್ಸ್ ತಪ್ಪಿ ಹಿಂದಿನ ಸೀಟಿನಿಂದ ಕೆಳಕ್ಕೆ ಜಾರಿದ್ದಾರೆ.

ಗಾಬರಿ ಹುಟ್ಟಿಸುವ ಅಪಘಾತ

ಯುವತಿ ಕೆಳಗೆ ಬಿದ್ದ ವೇಗಕ್ಕೆ ಆಕೆಯ ಕಾಲುಗಳು ಮತ್ತು ದೇಹದ ಕೆಳಭಾಗವು ಬೈಕಿನ ಹಿಂದಿನ ಚಕ್ರ ಮತ್ತು ಸೀಟಿನ ನಡುವಿನ ಇಕ್ಕಟ್ಟಾದ ಜಾಗದಲ್ಲಿ ಸಿಲುಕಿಕೊಂಡಿವೆ. ಬೈಕ್ ಚಲಿಸುತ್ತಿದ್ದರಿಂದ (Bike Stunt Accident) ಆಕೆಯ ಗುಪ್ತಾಂಗ ಹಾಗೂ ಖಾಸಗಿ ಭಾಗಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ ಎಂದು ವರದಿಯಾಗಿದೆ.  ಈ ಇಡೀ ಘಟನೆಯನ್ನು ಇವರ ಹಿಂದೆ ಬರುತ್ತಿದ್ದ ಇತರ ವಾಹನ ಸವಾರರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಯುವಕನ ಬೇಜವಾಬ್ದಾರಿತನದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Mumbai bike stunt gone wrong leaves woman seriously injured during dangerous wheelie attempt

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here

ಎಚ್ಚರಿಕೆ ವಹಿಸುವುದು ಮುಖ್ಯ

ಅಪಘಾತ ಸಂಭವಿಸುತ್ತಿದ್ದಂತೆ ಗಾಬರಿಯಾದ ಯುವಕ ತಕ್ಷಣ ಬೈಕ್ ನಿಲ್ಲಿಸಿ, ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಪ್ರೀತಿಯ ಹೆಸರಿನಲ್ಲಿ ಅಥವಾ (Bike Stunt) ಮೋಜಿನ ಹೆಸರಿನಲ್ಲಿ ಮಾಡುವ ಇಂತಹ ಅಪಾಯಕಾರಿ ಸಾಹಸಗಳು ಪ್ರಾಣಕ್ಕೇ ಕುತ್ತು ತರಬಲ್ಲವು. ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್ ಮಾಡುವುದು ಕಾನೂನುಬಾಹಿರ ಮಾತ್ರವಲ್ಲ, ಅಪಾಯಕಾರಿ ಕೂಡ. ಚಾಲಕ ಮಾತ್ರವಲ್ಲದೆ ಹಿಂದೆ ಕುಳಿತವರೂ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಅಗತ್ಯ. ಈ ಘಟನೆಯು ಬೈಕ್ ಸ್ಟಂಟ್ ಮಾಡುವವರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಕ್ಷಣದ ಮೋಜು ಯಾರಿಗೂ ಮುಳುವಾಗದಿರಲಿ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular