MUDA Scam – ಕರ್ನಾಟಕ ಸಿಎಂ ಸಿದ್ದರಾಮಯ್ಯನವರ ವಿರುದ್ದ ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು, ಈ ಸಂಬಂಧ ಶಾಸಕ ಜನಾರ್ಧನ ರೆಡ್ಡಿ ರಿಯಾಕ್ಟ್ ಆಗಿದ್ದಾರೆ. (MUDA Scam) ರಾಜ್ಯಪಾಲರು ರಾಜ್ಯದ ಸಿಎಂ ಸಿದ್ದರಾಮಯ್ಯ ಮೇಲೆ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಾರೆ. ಬೆಳಗ್ಗೆ ಎದ್ರೆ ನೈತಿಕತೆ ಬಗ್ಗೆ, ಕಾನೂನಿನ ಬಗ್ಗೆ ಮಾತಾಡುವ ಸಿದ್ದರಾಮಯ್ಯಗೆ ಕಿಂಚಿತ್ತು ನೈತಿಕತೆ (MUDA Scam) ಇದ್ದರೆ, ಈ ಕ್ಷಣಕ್ಕೆ ರಾಜೀನಾಮೆ ಕೊಡಬೇಕಿತ್ತು ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯನವರ ವಿರುದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮುಡಾ ನಿವೇಶನದ ಹಂಚಿಕೆ (MUDA Scam) ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು, ಇದಕ್ಕಾಗಿ ಕಾಂಗ್ರೇಸ್ ಪಕ್ಷ ಆಕ್ರೋಷ ವ್ಯಕ್ತಪಡಿಸಿ ರಾಜ್ಯದ ಹಲವು ಕಡೆ ಪ್ರತಿಭಟನೆ ನಡೆಸಿದೆ. ಜೊತೆಗೆ ಸೋಮವಾರ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವಂತೆ ಕೆಪಿಸಿಸಿ ಸೂಚನೆ ಸಹ ನೀಡಿದೆ. ಇನ್ನೂ ಈ ಸಂಬಂಧ ವಿರೋಧ (MUDA Scam) ಪಕ್ಷಗಳು ಸಿಎಂ ರಾಜಿನಾಮೆಗೆ ಪಟ್ಟು ಹಿಡಿದಿದೆ. ಈ ಸಂಬಂಧ (Janardhana Reddy) ಶಾಸಕ ಗಾಲಿ ಜನಾರ್ಧನರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ಸಿಎಂ ಆಗಿದ್ದಾಗ ಯಡಿಯೂರಪ್ಪ, ನನ್ನ ಮೇಲೆ ಪ್ರಾಸಿಕ್ಯೂಷನ್ ಬಿಡಿ, ಲೋಕಾಯುಕ್ತದಲ್ಲಿ ನಮ್ಮ ಹೆಸರನ್ನ ದಾಖಲಿಸಿದ ಕೂಡಲೇ ರಾಜೀನಾಮೆ (Janardhana Reddy) ನೀಡಿದ್ದೆವು. (MUDA Scam) ಯಡಿಯೂರಪ್ಪ ಅವರು ನಮ್ಮನ್ನ ಕರೆದು ನಾವು ಇನ್ನೂ ಮುಂದುವರೆಯೋದು ಸರಿಯಲ್ಲ ಅಂತಾ ಹೇಳಿದ್ದರು. ನಾವು ರಾಜಭವನಕ್ಕೆ ತೆರಳಿ ರಾಜೀನಾಮೆ (Janardhana Reddy) ನೀಡಿದ್ದೆವು. (MUDA Scam) ಆದರೆ ತಾವು ಮಾಡಿರುವ ತಪ್ಪುಗಳನ್ನು ಮರೆಮಾಚಿ, ತಾವೇನೂ ತಪ್ಪೇ ಮಾಡಿಲ್ಲ ಅಂತಾ ಮಂಡುತನ ಪ್ರದರ್ಶನ ಮಾಡುತ್ತಿರುವುದು ನಾಚಿಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.
ತಾನು ಅಹಿಂದ (MUDA Scam) ಅಂತಾ ಹೇಳಿಕೊಳ್ಳುವ ಸಿಎಂ ಅಧಿಕಾರದ ಆಸೆಗೆ ಮುಂದುವರೆದಿದ್ದಾರೆ. ಅಂದು ಬಳ್ಳಾರಿ ಪಾದಯಾತ್ರೆಗೆ ಬಂದ ಈ ಮಹಾನುಭಾವ ಬಳ್ಳಾರಿ ಪಾದಯಾತ್ರೆಗೆ ಬಿಡ್ತಿಲ್ಲ (MUDA Scam) ಅಂತಾ ಆರೋಪ ಮಾಡಿ, ರಿಪಬ್ಲಿಕನ್ ಬಳ್ಳಾರಿ (Janardhana Reddy) ಎಂಬೆಲ್ಲಾ ಆರೋಪಗಳನ್ನು ಮಾಡಿದ್ದರು. ನಾವು ಒಳ್ಳೆಯ ಕರ್ಮ ಮಾಡಿದರೇ ಒಳ್ಳೆಯದು ಆಗುತ್ತೆ. ಕೆಟ್ಟದ್ದು ಮಾಡಿದ್ದರೇ ಕರ್ಮ ಸುಮ್ಮನೆ ಬಿಡೊಲ್ಲ. ನಮ್ಮ ವಿರುದ್ದ ಮಾಡಿದ ಆರೋಪಗಳಿಗೆ ಸಿದ್ದರಾಮಯ್ಯನವರಿಗೆ ಕರ್ಮ ರಿಟರ್ನ್ಸ್ ಆಗಿದೆ ಎಂದರು.