ಕರ್ನಾಟಕ ರಾಜ್ಯದಲ್ಲಿ ಕೆಲವು ದಿನಗಳಿಂದ ಮುಡಾ ಸೈಟು ಹಂಚಿಕೆ ಹಗರಣ (MUDA Case) ಭಾರಿ ಸದ್ದು ಮಾಡುತ್ತಿದೆ. ಈ ಹಗರಣದ ಬಗ್ಗೆ ಸಿದ್ದರಾಮಯ್ಯ (Siddaramaiah) ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡಿದ್ದರು. ಈ ಸಂಬಂಧ ರಾಜ್ಯಪಾಲರ ನಡೆ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರಣೆಯ ತೀರ್ಪು ಇದೇ ಮಂಗಳವಾರ ಪ್ರಕಟವಾಗಲಿದೆ (MUDA Case) ಎಂದು ಹೇಳಲಾಗಿದೆ. ಒಂದು ವೇಳೆ ರಾಜ್ಯಪಾಲರ ನಿರ್ಧಾರ ಸರಿಯಿದೆ ಎಂಬುದಾಗಿ ತೀರ್ಪು ಬಂದರೇ ಸಿಎಂ ಸಿದ್ದರಾಮಯ್ಯ ರಾಜಿನಾಮೆ (MUDA Case) ನೀಡಬೇಕಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಮೈಸೂರು ಮುಡಾ ಹಗರಣದಲ್ಲಿ (MUDA Case)ಸಿಎಂ ಸಿದ್ದರಾಮಯ್ಯನವರ ವಿರುದ್ದ ಗಂಭೀರ ಆರೋಪ ಕೇಳಿಬಂದಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಆಡಳಿತ ವಿರೋಧ ಪಕ್ಷಗಳು ಈ ಹಗರಣದ ಬಗ್ಗೆ ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಂಡರು. ಈ ನಡುವೆ ಮುಡಾ ಹಗರಣದ (MUDA Case)ಸಂಬಂಧ ರಾಜ್ಯಪಾಲರಾದ ಥಾವರ್ ಚಂದ್ ಗೆಲ್ಹೋಟ್ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದರು. ಈ ಅನುಮತಿಯನ್ನು ಪ್ರಶ್ನಿಸಿ ಗೆಹ್ಲೋಟ್ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಾದ ಪ್ರತಿವಾದಗಳ್ನು (MUDA Case)ಆಲಿಸಿದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ಇದೀಗ ಕೇಳಿಬರುತ್ತಿರುವ ಮಾಹಿತಿಯಂತೆ ಇಂದು ಅಂದರೇ ಸೆ.24 ರಂದು ಮದ್ಯಾಹ್ನ ಈ ಕುರಿತು ತೀರ್ಪು ಪ್ರಕಟವಾಗಲಿದೆ ಎಂದು ಹೇಳಲಾಗುತ್ತಿದೆ.
ಇನ್ನೂ ಮಂಗಳವಾರ (ಸೆ.22) ರಂದು ಮದ್ಯಾಹ್ನ 12 ಗಂಟೆಗೆ ಮುಡಾ ಹಗರಣದ (MUDA Case) ತೀರ್ಪು ಹೊರಬರಲಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಸಿದ್ದರಾಮಯ್ಯ ಪರವಾಗಿ ಆದೇಶ ಬಂದರೇ ಅವರು ಬೀಸೋ ದೊಣ್ಣೆಯಿಂದ ಪಾರಾಗಲಿದ್ದಾರೆ. ವಿರುದ್ದದ ಆದೇಶ ಬಂದರೇ ಸಿಎಂ ರವರಿಗೆ ರಾಜಕೀಯ ಸಂಕಷ್ಟ ಎದುರಾಗಬಹುದು (MUDA Case) ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಣೆ ಮಾಡುತ್ತಿದ್ದಾರೆ. ಇನ್ನೂ ಹೈಕೋರ್ಟ್ ತೀರ್ಪಿನ ಬಳಿಕ ರಾಜ್ಯದಲ್ಲಿ ರಾಜಕೀಯ ಸಂಚಲನ ಸೃಷ್ಟಿಯಾಗಬಹುದು ಎನ್ನಲಾಗಿದ್ದು, ಸಿಎಂ (MUDA Case) ರಾಜಿನಾಮೆ ನೀಡುವ ಸಾಧ್ಯತೆಯಿದೆ. ಜೊತೆಗೆ ಸಿಎಂ ವಿರುದ್ದ ಎಫ್.ಐ.ಆರ್ ದಾಖಲಾಗಬಹುದು.
MUDA Case: ಸಿದ್ದರಾಮಯ್ಯ ಪರ ಆದೇಶ ಬಂದರೇ,
- ಮುಡಾ ಪ್ರಕರಣದಿಂದ ಕುಗ್ಗಿಹೋಗಿರುವ ಸಿದ್ದರಾಮಯ್ಯಗೆ ಆನೆ ಬಲ ಬಂದಂತಾಗುತ್ತದೆ.
- ಸಿಎಂ ಸಿದ್ದರಾಮಯ್ಯ ಅವರು ಬೀಸುವ ದೊಣ್ಣೆಯಿಂದ ಪಾರಾಗಬಹುದು.
- ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದ ರಾಜ್ಯಪಾಲರಿಗೆ ಹಿನ್ನಡೆ.
- ಕಾಂಗ್ರೆಸ್ ಸರ್ಕಾರಕ್ಕೆ ನೈತಿಕ ಶಕ್ತಿ ಬರುತ್ತದೆ ಜೊತೆಗೆ ರಾಜಕೀಯವಾಗಿ ಸಿಎಂ ಸಿದ್ದರಾಮಯ್ಯ ಮತ್ತಷ್ಟು ಬಲಿಷ್ಠರಾಗುತ್ತಾರೆ.
- ಸಿಎಂ ಹಾಗೂ ಸರ್ಕಾರದ ವಿರುದ್ದ ಹೋರಾಟ ನಡೆಸುತ್ತಿದ್ದ ಬಿಜೆಪಿಗೆ ತಿರುಗೇಟು ನೀಡಲು ಅವಕಾಶ ದೊರೆಯಲಿದೆ.
- ಇಡೀ ದೇಶಕ್ಕೆ ಬಿಜೆಪಿ ವಿರುದ್ದ ಕಾಂಗ್ರೆಸ್ ಸಂದೇಶ ಹೊರಡಿಸಿದಂತಾಗುತ್ತದೆ.
MUDA Case: ಸಿದ್ದರಾಮಯ್ಯ ವಿರುದ್ದದ ಆದೇಶ ಬಂದರೇ,
- ಸಿಎಂ ವಿರುದ್ದ ಆದೇಶ ಬಂದರೆ ತನಿಖೆಗೆ ಆದೇಶ ದೊರೆಯಲಿದೆ. ತಕ್ಷಣವೇ ಸಿಎಂ ವಿರುದ್ದ ಎಫ್ಐಆರ್ ಸಾಧ್ಯತೆ ಇದೆ.
- ಸಿಎಂ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ ಇದೆ. ರಾಜೀನಾಮೆ ಕೊಡದೇ ಮತ್ತೆ ಕಾನೂನು ಹೋರಾಟ ಮುಂದುವರಿಸುವ ಮತ್ತೊಂದು ಆಯ್ಕೆ ಸಹ ಇದೆ.
- ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಬಹುದು.
- ರಾಜ್ಯಪಾಲರ ವಿರುದ್ಧ ಮತ್ತೆ ಕಾನೂನು ಜೊತೆ ರಾಜಕೀಯ ಸಮರ ನಡೆಯಬಹುದು.
- ರಾಷ್ಟ್ರಮಟ್ಟದಲ್ಲಿ ಕಾಂಗ್ರೇಸ್ ಪಕ್ಷ ಬಿಜೆಪಿ ವಿರುದ್ದ ಹೋರಾಟ ನಡೆಸಬಹುದು.