Tuesday, November 5, 2024

Union Budget: ಕೇಂದ್ರ ಬಜೆಟ್ ವೋಟ್ ಬ್ಯಾಂಕ್ ಬಜೆಟ್ ಅಲ್ಲ, ಇದು ವಿಕಸಿತ ಭಾರತದ ಬಜೆಟ್ ಎಂದ ಸಂಸದ ಸುಧಾಕರ್….!

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು Union budget 2024 (ಕೇಂದ್ರ ಬಜೆಟ್ 2024) ಅನ್ನು ಮಂಡಿಸಿದೆ. ಈ ಬಜೆಟ್ ಬಗ್ಗೆ ಅನೇಕ ವಿಮರ್ಶೆಗಳು, ಟೀಕೆಗಳು ಕೇಳಿಬರುತ್ತಿವೆ. ಈ ಕುರಿತು ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್‍, (Union Budget) ಬಜೆಟ್ ಬಗ್ಗೆ ಮಾತನಾಡಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಜಕೀಯ ಬಜೆಟ್ ಮಂಡಿಸದೇ, ರಾಷ್ಟ್ರೀಯ ಬಜೆಟ್ ಮಂಡಿಸಿದೆ. ವೋಟ್ ಬ್ಯಾಂಕ್ ಬಜೆಟ್ ಮಂಡಿಸದೇ ವಿಕಸಿತ ಭಾರತದ ಬಜೆಟ್ ನೀಡಿದೆ ಎಂದು ಹೇಳಿದ್ದಾರೆ.

Dr K Sudhakar comments on budget

ಕೇಂದ್ರ ಬಜೆಟ್ (Union Budget) ಕುರಿತು ಪ್ರತಿಕ್ರಿಯೆ ನೀಡಿದ ಸಂಸದ ಡಾ.ಕೆ.ಸುಧಾಕರ್‍, ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ರವರು, ಅಭಿವೃದ್ದಿ ಗುರಿ ಹಾಗೂ ತೆರಿಗೆ ಹೊರೆ ಇಲ್ಲದೇ ಸಮತೋಲನದ ಬಜೆಟ್ ನೀಡಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ಕಡಿಮೆ ಸ್ಥಾನಗಳು ಬಂದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಕೇಂದ್ರ ಬಜೆಟ್ (Union Budget) ನಲ್ಲಿ ತಾರತಮ್ಯ ಮಾಡಬಹುದು ಎಂದು ಸುಳ್ಳಿನ ಊಹೆಗಳನ್ನು ಮಾಡಿದ್ದರು. ಈ ಸುಳ್ಳಿನ ಊಹೆಗಳಿಗೆ ಬಜೆಟ್ ತಣ್ಣಿರು ಎರಚಿದೆ. ಯುವಜನರು, ಮಹಿಳೆಯರು, ರೈತರು ಸೇರಿದಂತೆ ಎಲ್ಲಾ ವರ್ಗದ ಆಶೋತ್ತರಗಳಿಗೆ ಬಜೆಟ್ ಸ್ಪಧಿಸಿದೆ, ದೇಶದ ಭವಿಷ್ಯವನ್ನು ಊಹಿಸಿ ಮಾಡಿದ ಬಜೆಟ್ (Union Budget) ಇದಾಗಿದೆ ಎಂದಿದ್ದಾರೆ.

ಕೃಷಿ ಕ್ಷೇತ್ರದ ಸಮಗ್ರ ಪ್ರಗತಿಯ ದೃಷ್ಟಿಯಿಂದ ಹಲವು (Union Budget) ಯೋಜನೆಗಳನ್ನು ತರಲಾಗಿದೆ. ತರಕಾರಿ ಪೂರೈಕೆಗಾಗಿ ಸಪ್ಲೈ ಚೈನ್‌ ಬಲಗೊಳಿಸುವ ಕ್ರಮದಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ರೈತರಿಗೆ ಹೆಚ್ಚು ಲಾಭ ಸಿಗಲಿದೆ. ನಮ್ಮ ಬಯಲುಸೀಮೆ ಭಾಗದಲ್ಲಿ ತರಕಾರಿ ಸೇರಿದಂತೆ ತೋಟಗಾರಿಕೆ ಬೆಳೆಗಾರರ ಸಂಖ್ಯೆ ಹೆಚ್ಚಿರುವುದರಿಂದ ಈ ಕ್ರಮ ನಮ್ಮ (Union Budget) ಭಾಗದ ರೈತರಿಗೆ ಅನುಕೂಲ ಮಾಡಿಕೊಡಲಿದೆ. ಟಾಪ್ 500 ಕಂಪನಿಗಳಲ್ಲಿ 1 ಕೋಟಿ ಯುವಜನರಿಗೆ 12 ತಿಂಗಳ ಇಂಟರ್ನ್‌ಶಿಪ್ ಅವಕಾಶ, ಮೊದಲ ಬಾರಿಗೆ ಉದ್ಯೋಗಕ್ಕೆ ಸೇರಿದವರಿಗೆ 1 ತಿಂಗಳ ವೇತನದಂತಹ ಕ್ರಮಗಳು ಯುವಜನರಿಗೆ ಹೊಸ ಆಶಾಕಿರಣವನ್ನು ನೀಡಿದೆ.

Dr K Sudhakar comments on budget 0

(Union Budget) ಹೈದರಾಬಾದ್‌-ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಯೋಜನೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ಭಾಗಗಳ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ. ಇದರಿಂದಾಗಿ ಈ ಭಾಗದ ಆರ್ಥಿಕ ಸ್ಥಿತಿಯಲ್ಲಿ ಅಗಾಧ ಸುಧಾರಣೆ ಕಂಡುಬರಲಿದೆ. ಈ ಯೋಜನೆ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಇತ್ತೀಚೆಗಷ್ಟೇ ಮನವಿ ಮಾಡಿದ್ದೆ. ನನ್ನ ಮನವಿಗೆ ಸ್ಪಂದಿಸಿ ಯೋಜನೆಯನ್ನು ಬಜೆಟ್‌ನಲ್ಲಿ ತಂದಿರುವುದಕ್ಕೆ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಮಹಿಳಾ ಉದ್ಯೋಗಿಗಳಿಗೆ ಸುಭದ್ರತೆ ಒದಗಿಸಲು ವಸತಿ ನಿಲಯಗಳನ್ನು ಆರಂಭಿಸುವುದಾಗಿ ಬಜೆಟ್‌ನಲ್ಲಿ ಹೇಳಿರುವುದು ಕೂಡ ಶ್ಲಾಘನೀಯವಾಗಿದ್ದು, ಔದ್ಯೋಗಿಕವಾಗಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಲಿದೆ (Union Budget) ಎಂದು ಹೇಳಿದ್ದಾರೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!