Crime – ಅಮ್ಮ-ಮಗು ಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ, ಇಲ್ಲೊಬ್ಬಳು ತಾಯಿ ತನ್ನ ಪ್ರೇಮದಾಹಕ್ಕಾಗಿ ಕೇವಲ ಐದು ತಿಂಗಳ ಹಸುಗೂಸಿನ ಜೀವವನ್ನೇ ಬಲಿ ಕೊಟ್ಟಿದ್ದಾಳೆ. ಹೌದು, ಮಕ್ಕಳ ಪೋಷಣೆಯೇ ಜೀವನವಾಗಿರಬೇಕಾದವಳು, ತನ್ನ ಸಲಿಂಗ ಕಾಮಕೇಳಿಗೆ ಅಡ್ಡಿಯೆಂದು ತಿಳಿದು ತಾನೇ ಹೆತ್ತ ಮಗುವನ್ನು ಉಸಿರುಗಟ್ಟಿಸಿ ಕೊಂದಿರುವ ಅಮಾನವೀಯ ಘಟನೆ ಎಲ್ಲೆಡೆ ತೀವ್ರ ಆಘಾತ ಮೂಡಿಸಿದೆ. ಈ ಕರುಳು ಹಿಂಡುವ ಘಟನೆ ನಡೆದಿರುವುದು ಕರ್ನಾಟಕ ಗಡಿ ಭಾಗದ ಅನೇಕಲ್ ಸಮೀಪದ ತಮಿಳುನಾಡಿನ ಕೆಳಮಂಗಲಂ ಪ್ರದೇಶದ ಚಿನ್ನಟ್ಟಿಯಲ್ಲಿ.

Crime – ಅಸಹಜ ಸಂಬಂಧ, ಕೊಂದಿತು ಕಂದಮ್ಮನ ಜೀವ!
ಚಿನ್ನಟ್ಟಿಯ ನಿವಾಸಿಗಳಾದ ಭಾರತಿ (26) ಮತ್ತು ಸುರೇಶ್ ದಂಪತಿಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳು ಹಾಗೂ ಕೊಲೆಯಾದ ಐದು ತಿಂಗಳ ಪುಟ್ಟ ಗಂಡು ಮಗುವಿತ್ತು. ಇದೇ ಏರಿಯಾದ ಸುಮಿತ್ರಾ (22) ಎಂಬ ಯುವತಿಯೊಂದಿಗೆ ಭಾರತಿ ನಾಲ್ಕು ವರ್ಷಗಳ ಹಿಂದೆ ಸ್ನೇಹ ಬೆಳೆಸಿದ್ದಳು. ಆ ಸ್ನೇಹವು ಕ್ರಮೇಣ ಸಲಿಂಗ ಕಾಮದ ಹುಚ್ಚಿಗೆ ತಿರುಗಿದೆ. ಪತಿ ಸುರೇಶ್ ಮನೆಯಲ್ಲಿ ಇಲ್ಲದಿದ್ದಾಗ ಇಬ್ಬರೂ ಸೇರಿಕೊಂಡು ಚಕ್ಕಂದವಾಡುತ್ತಿದ್ದರು.
Crime – ಬೆತ್ತಲೆ ವಿಡಿಯೋ ಕಾಲ್, ‘ಸುಮಿ’ ಟ್ಯಾಟೂ: ಇವರ ಪ್ರೇಮಲೋಕದ ರಹಸ್ಯ!
ಇಬ್ಬರೂ ತಮ್ಮ ಸಂಬಂಧವನ್ನು ಗೋಪ್ಯವಾಗಿಡಲು ಮತ್ತೊಂದು ಮೊಬೈಲ್ ಬಳಸುತ್ತಿದ್ದರು. ಸ್ನಾನ ಮಾಡುವಾಗ ನಗ್ನವಾಗಿ ವಿಡಿಯೋ ಕಾಲ್ ಮಾಡುವುದು, ಕಿಸ್ಸಿಂಗ್ ಫೋಟೋಗಳನ್ನು ಕ್ಲಿಕ್ಕಿಸುವುದು ಇವರ ದಿನಚರಿಯಾಗಿತ್ತು. ಭಾರತಿ ತನ್ನ ಎದೆ ಮೇಲೆ ‘sumi’ ಎಂದು ಟ್ಯಾಟೂ ಸಹ ಹಾಕಿಸಿಕೊಂಡಿದ್ದಳು. ಇಷ್ಟೇ ಅಲ್ಲದೇ, ಕೈ ಕೊಯ್ದುಕೊಂಡು ರಕ್ತದಿಂದ ರೀಲ್ಸ್ ವಿಡಿಯೋಗಳನ್ನು ಮಾಡಿ ತಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಪ್ರಯತ್ನಿಸಿದ್ದರು.
Crime – ಮಗುವಿನ ಆಗಮನ… ಮನಸ್ತಾಪಕ್ಕೆ ಕಾರಣ!
ಐದು ತಿಂಗಳ ಹಿಂದೆ ಭಾರತಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಮಗು ಹುಟ್ಟಿದ ನಂತರ, ಭಾರತಿ ತನ್ನಿಂದ ದೂರವಾಗುತ್ತಿದ್ದಾಳೆಂದು ಸುಮಿತ್ರಾ ಪದೇ ಪದೇ ಜಗಳ ತೆಗೆಯುತ್ತಿದ್ದಳು. ಈ ಗಲಾಟೆಗೆ ಮಗುವೇ ಕಾರಣ ಎಂದು ಭಾವಿಸಿದ ಸುಮಿತ್ರಾ, ಮಗುವನ್ನು ಕೊಲೆ ಮಾಡುವಂತೆ ಭಾರತಿಯನ್ನು ಪ್ರಚೋದಿಸಿದ್ದಾಳೆ! ಪಾಪ! ತನ್ನ ಪ್ರೀತಿಗಾಗಿ ಕರುಳ ಕುಡಿಯನ್ನು ಕೊಲ್ಲಲು ಭಾರತಿ ನಿರ್ಧರಿಸಿದ್ದಳು. ಸುಮಿತ್ರಾಳ ಕುಮ್ಮಕ್ಕಿನಂತೆ, ಭಾರತಿ ತನ್ನ ಪುಟ್ಟ ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು. ಕುಟುಂಬಸ್ಥರನ್ನು ನಂಬಿಸಲು “ಮಗು ಹಾಲು ಕುಡಿಯುವಾಗ ಗಂಟಲಲ್ಲಿ ಸಿಕ್ಕಿ ಸಾವನ್ನಪ್ಪಿದೆ” ಎಂದು ಸುಳ್ಳು ಕಥೆ ಹೇಳಿದ್ದಳು. ಇದನ್ನು ನಂಬಿದ ಕುಟುಂಬಸ್ಥರು, ಮಗುವಿನ ಅಂತ್ಯಸಂಸ್ಕಾರವನ್ನೂ ಮುಗಿಸಿದ್ದರು.

Crime – ರಹಸ್ಯ ಬಯಲಾಗಿದ್ದು ಹೇಗೆ?
ಘಟನೆ ನಡೆದ ಕೆಲ ದಿನಗಳ ನಂತರ ಭಾರತಿ ಮತ್ತು ಸುಮಿತ್ರಾ ಬಳಸುತ್ತಿದ್ದ ರಹಸ್ಯ ಮೊಬೈಲ್ ಪತಿ ಸುರೇಶ್ ಅವರ ಕೈಗೆ ಸಿಕ್ಕಿದೆ! ಮೊಬೈಲ್ ಪರಿಶೀಲಿಸಿದಾಗ ಸಲಿಂಗ ಕಾಮದ ವಿಡಿಯೋಗಳು, ಫೋಟೋಗಳು ಮತ್ತು ಮಗುವಿನ ಕೊಲೆಯ ರಹಸ್ಯಗಳು ಹೊರಬಿದ್ದಿವೆ. ವಿಷಯ ತಿಳಿಯುತ್ತಿದ್ದಂತೆ ಪೋಲಿಸರಿಗೆ ದೂರು ನೀಡಲು ಹೊರಟ ಸುರೇಶ್ ಅವರಿಗೆ ಭಾರತಿ ತಾನೇ ಕರೆ ಮಾಡಿ “ನಾನು ಮಗುವನ್ನು ಕೊಂದಿದ್ದೇನೆ” ಎಂದು ಒಪ್ಪಿಕೊಂಡಿದ್ದಾಳೆ. Read this also : ದೃಶ್ಯಂ ಸ್ಟೈಲ್ ಮರ್ಡರ್: ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದ ಪತ್ನಿ, ಅಡಿಗೆಮನೆ ನೆಲದಡಿಯಲ್ಲಿ ಹೂತಿದ್ದ ಸತ್ಯ!
ಇದಾದ ಬಳಿಕ, ಎಲ್ಲ ಸಾಕ್ಷ್ಯಗಳೊಂದಿಗೆ ಸುರೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಕೆಳಮಂಗಲಂ ತಹಸೀಲ್ದಾರ್ ಗಂಗೈ ಸಮ್ಮುಖದಲ್ಲಿ ಮಗುವಿನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸದ್ಯ, ಕೆಳಮಂಗಲಂ ಪೊಲೀಸರು ಭಾರತಿ ಮತ್ತು ಸುಮಿತ್ರಾ ವಿರುದ್ಧ ಪ್ರಕರಣ ದಾಖಲಿಸಿ, ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
