Miracle – ‘ಜನ ಮರುಳೋ, ಜಾತ್ರೆ ಮರುಳೋ’ ಎಂಬಂತೆ, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಚೆಂಡೂರು ಗ್ರಾಮದಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ. ಗ್ರಾಮದ ಹೊರಗಿರುವ ಕಣಗಲಮ್ಮ ದೇವಿಯ ದೇವಸ್ಥಾನದ ಸಮೀಪದ ಬೇವಿನ ಮರದಲ್ಲಿ ಕಳೆದ ಒಂದು ದಿನದಿಂದ ಬಿಳಿ ಬಣ್ಣದ ದ್ರವ ನಿರಂತರವಾಗಿ ಸೋರುತ್ತಿದ್ದು, ಇದನ್ನು ನೋಡಿದ ಗ್ರಾಮಸ್ಥರು ಕಣಗಲಮ್ಮ ದೇವಿಯ ಪವಾಡ ಎಂದು ನಂಬಿ ಪೂಜೆ ಸಲ್ಲಿಸಲು ಆರಂಭಿಸಿದ್ದಾರೆ.

Miracle – ದೃಶ್ಯ ನೋಡಲು ಮುಗಿಬಿದ್ದ ಜನರು: ಚೆಂಡೂರಿನಲ್ಲಿ ಮಿನಿ ಜಾತ್ರೆ!
ಚೆಂಡೂರು ಗ್ರಾಮ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಜನರಲ್ಲಿ ಈ ವಿಷಯವು ದೊಡ್ಡ ಮಟ್ಟದ ಕುತೂಹಲ ಮೂಡಿಸಿದೆ. ಕಣಗಲಮ್ಮ ದೇವಿಯ ಮೂರ್ತಿಯ ಸನಿಹದಲ್ಲಿರುವ ಈ ಬೇವಿನ ಮರದಿಂದ ನೊರೆ ನೊರೆಯಾಗಿ ಹಾಲು ಜಿನುಗುತ್ತಿರುವಂತೆ ಕಾಣುವ ದೃಶ್ಯವನ್ನು ನೋಡಲು ಜನ ತಂಡೋಪತಂಡವಾಗಿ ಬರುತ್ತಿದ್ದಾರೆ. ಮರದ ಸುತ್ತಲೂ ಈ ಬಿಳಿ ದ್ರವ ಹರಿದು ನೆಲದಲ್ಲಿ ಸಣ್ಣ ಹಾಲಿನ ಹೊಳೆಯಂತೆ ಕಾಣುತ್ತಿದೆ. ಇದು ದೈವದ ಪವಾಡವೆಂದು ಭಾವಿಸಿ ಭಕ್ತರು ಭಯಭಕ್ತಿಗಳಿಂದ ಮರಕ್ಕೆ ನಮಸ್ಕರಿಸಿ, ಪೂಜೆ ಸಲ್ಲಿಸುತ್ತಿದ್ದಾರೆ. ಹಿರಿಯರು, ಕಿರಿಯರು ಎನ್ನದೆ ಎಲ್ಲರೂ ಮರದತ್ತ ಆಗಮಿಸುತ್ತಿದ್ದು, ಚೆಂಡೂರು ಗ್ರಾಮದಲ್ಲಿ ಸಣ್ಣ ಪ್ರಮಾಣದ ಜಾತ್ರೆಯ ವಾತಾವರಣ ನಿರ್ಮಾಣವಾಗಿದೆ. ಭಕ್ತರು ಭಕ್ತಿಯಿಂದ ಮರಕ್ಕೆ ಕೈ ಮುಗಿದು ಆಶೀರ್ವಾದ ಪಡೆದು ಹೋಗುತ್ತಿದ್ದಾರೆ.
Miracle – ಕಣಗಲಮ್ಮ ದೇವಿಯ ಹಿನ್ನೆಲೆ ಏನು?
ಚೆಂಡೂರು ಗ್ರಾಮದಲ್ಲಿ ಕಣಗಲಮ್ಮ ದೇವಿಯ ಕುರಿತು ವಿಶೇಷ ನಂಬಿಕೆಗಳಿವೆ. ಗ್ರಾಮದ ಹೊರಗೆ ನೆಲೆಸಿರುವ ಕಣಗಲಮ್ಮ ಗ್ರಾಮ ದೇವತೆಯಾಗಿದ್ದು, ಮಂಗಳವಾರ ಮತ್ತು ಶುಕ್ರವಾರದಂದು ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ಮೂರ್ತಿಗಳಲ್ಲಿ ಬ್ರಹ್ಮ-ಸರಸ್ವತಿ, ವಿಷ್ಣು-ಲಕ್ಷ್ಮಿ ಮತ್ತು ಶಿವ-ಪಾರ್ವತಿಯ ವಿಗ್ರಹಗಳನ್ನೂ ಕಾಣಬಹುದು. Read this also : ನೀಲಿ ನಾಗರಹಾವಿನ ದರ್ಶನ, ಶಾಕ್ ಆದ ರೈತ, ನೆಟ್ಟಿಗರಿಗೆ ಅಚ್ಚರಿ! AI ವಿಡಿಯೋನಾ, ಅಸಲೀ ವಿಡಿಯೋನಾ?
ಗ್ರಾಮಸ್ಥರ ಪ್ರಕಾರ, ಈ ವಿಗ್ರಹಗಳನ್ನು ಬಹಳ ಹಿಂದೆಯೇ ರಾಜರ ಕಾಲದಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದರ ಕೆಳಗೆ ರಾಜರು ಬೆಲೆಬಾಳುವ ಹಣ ಮತ್ತು ಒಡವೆಗಳನ್ನು ಇಟ್ಟಿದ್ದಾರೆಂಬ ಪ್ರತೀತಿಯೂ ಇದೆ. ಹಿಂದೆ ಒಂದೆರಡು ಬಾರಿ ದುಷ್ಕರ್ಮಿಗಳು ಈ ನಿಧಿಯನ್ನು ಕದಿಯಲು ಪ್ರಯತ್ನಿಸಿ ವಿಫಲರಾಗಿ ಹಿಂದಿರುಗಿದ ಘಟನೆಗಳೂ ಇವೆ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ. ಇವೆಲ್ಲದರ ಮಧ್ಯೆ, ಬೇವಿನ ಮರದಲ್ಲಿ ಈ ರೀತಿ ‘ಹಾಲು’ ಸೋರುತ್ತಿರುವುದು ಗ್ರಾಮಕ್ಕೆ ಒಳ್ಳೆಯದಾಗುವ ಸಂಕೇತ ಎಂದು ಇಲ್ಲಿನ ಜನರು ನಂಬಿದ್ದಾರೆ. ಒಟ್ಟಿನಲ್ಲಿ, ಚೆಂಡೂರು ಗ್ರಾಮದ ಈ ಅಚ್ಚರಿಯ ಘಟನೆ ಸ್ಥಳೀಯರ (Miracle) ಧಾರ್ಮಿಕ ನಂಬಿಕೆಗಳಿಗೆ ಮತ್ತಷ್ಟು ಬಲ ತುಂಬಿದಂತಾಗಿದೆ.

Miracle – ವೈಜ್ಞಾನಿಕ ಟಿಪ್ಪಣಿ
ಬೇವಿನ ಮರದಿಂದ ಬಿಳಿ ದ್ರವ ಜಿನುಗುವ ಇಂತಹ ಘಟನೆಗಳು ಹಿಂದೆ ಕೆಲವು ಪ್ರದೇಶಗಳಲ್ಲಿ ವರದಿಯಾಗಿವೆ. ವಿಜ್ಞಾನಿಗಳ ಪ್ರಕಾರ, ಕೆಲವೊಮ್ಮೆ ಮರಗಳಿಗೆ ಉಂಟಾಗುವ ಗಾಯಗಳಿಂದ ಅಥವಾ ಶಿಲೀಂಧ್ರಗಳ ಸೋಂಕಿನಿಂದ ಬಿಳಿಯ (Miracle) ದ್ರವವು ಹೊರಬರಬಹುದು. ಇದು ಸಾಮಾನ್ಯವಾಗಿ ‘ಸ್ಯಾಪ್’ ಅಥವಾ ‘ಲ್ಯಾಟೆಕ್ಸ್’ ಆಗಿದ್ದು, ವಿರಳವಾಗಿ ಹಾಲಿನಂತೆ ಕಾಣಿಸಬಹುದು. ಆದಾಗ್ಯೂ, ಭಕ್ತರಿಗೆ ಇದು ದೈವಿಕ ಪವಾಡವೇ ಆಗಿದೆ.
