ಕರ್ನಾಟಕದಲ್ಲಿ ಗ್ಯಾರಂಟಿಗಳಿಗಾಗಿ ಹಣ ಹೊಂದಿಸಲು ಲಿಕ್ಕರ್ ಬೆಲೆ ಏರಿಕೆ ಮಾಡುವುದಾಗಿ ಕೆಲವೊಂದು ಸುದ್ದಿಗಳು ಕೇಳಿಬಂದಿತ್ತು. ಈ ಕುರಿತು ಅಬಕಾರಿ ಸಚಿವ ಆರ್.ವಿ.ತಿಮ್ಮಾಪುರ ರಿಯಾಕ್ಟ್ ಆಗಿದ್ದು, ಸದ್ಯಕ್ಕೆ ಲಿಕ್ಕರ್ ಬೆಲೆ ಹೆಚ್ಚಳದ ಬಗ್ಗೆ ಯಾವುದೇ ಚಿಂತನೆ ನಡೆದಿಲ್ಲ ಎಂದು ಹೇಳಿದ್ದಾರೆ. ಸದ್ಯ ನಮ್ಮ ಇಲಾಖೆಯಲ್ಲಿ ಏನು ನಡೆಯುತ್ತಿದೆ. ಆದಾಯದ ಸ್ಥಿತಿಗತಿ ಏನಿದೆ ಎಂಬುದನ್ನು ತಿಳಿಯುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಗ್ಯಾರಂಟಿಗಳಿಗೆ ಹಣವಿಲ್ಲದ ಕಾರಣ ಬೆಲೆ ಏರಿಕೆ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪ ಮಾಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ತಿಮ್ಮಾಪುರ ಬಿಜೆಪಿ ಸರ್ಕಾರ ಇದ್ದಾಗ ಎಷ್ಟು ಬಾರಿ ಬೆಲೆ ಏರಿಕೆ ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಬಿಜೆಪಿಯವರು ಬೆಲೆ ಏರಿಕೆ ಮಾಡಿದಾಗ ನಡೆಯುತ್ತೆ, ನಮ್ಮ ಸರ್ಕಾರ ಬೆಲೆ ಏರಿಕೆ ಮಾಡಿದರೇ ಎಲ್ಲರೂ ಕೇಳುತ್ತಾರೆ. ವಿಪಕ್ಷದವರಿಗೆ ಮಾತನಾಡಲು ಯೋಗ್ಯತೆ ಬೇಕು. ಸದ್ಯ ಲಿಕ್ಕರ್ ಬೆಲೆ ಏರಿಕೆ ಮಾಡುವುದಾದರೇ ನಿಮಗೆ ತಿಳಿಸುತ್ತೇನೆ, ಜುಲೈ 1 ಕ್ಕೆ ನಿಮಗೆ ತಿಳಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನೂ ಹೊರ ರಾಜ್ಯದಿಂದ ಬರುವ ಮದ್ಯವನ್ನು ತಡೆಗಟ್ಟಲು ಪ್ರಯತ್ನ ಮಾಡುತ್ತಿದ್ದೇವೆ. ಬೆಳಗಾವಿ ಜಿಲ್ಲೆ ರಾಯಭಾಗ್ ತಾಲೂಕಿನಿಂದ 1ಕೋಟಿ ಮೌಲ್ಯದ ಮದ್ಯ ತುಂಬಿದ್ದ ಸರ್ಕಾರಿ ಸ್ವಾಮ್ಯದ ಲಾರಿ ಅಪಘಾತಕ್ಕೆ ಒಳಗಾಗಿದೆ. ಆದರೆ ಫರಹತಾಬಾದ್ ಬಳಿ ನಡೆದ ಘಟನೆ ನನ್ನ ಗಮನಕ್ಕೆ ಇನ್ನೂ ಬಂದಿಲ್ಲ. ಈ ಕುರಿತು ಚರ್ಚೆ ಮಾಡುತ್ತೇನೆ. ಆದರೆ ದೊಡ್ಡ ಪ್ರಮಾಣದಲ್ಲಿ ದುರ್ಘಟನೆ ನಡೆದರೂ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿಲ್ಲ ಎಂದು ತಿಳಿದುಬಂದಿದೆ. ಇನ್ನೂ ರಾಜ್ಯ ಸರ್ಕಾರ ಹೊರ ರಾಜ್ಯಗಳ ಮದ್ಯದ ದರವನ್ನು ಗಮನದಲ್ಲಿಟ್ಟುಕೊಂಡು ಮಹತ್ವದ ನಿರ್ಧಾರ ಮಾಡಿದೆ ಎಂದು ಹೇಳಲಾಗಿದ್ದು, ಜುಲೈ 1 ರಿಂದ ಮದ್ಯದ ದರ ಅಗ್ಗ ಅಗಲಿದೆ. ಹೊರ ರಾಜ್ಯಗಳ ಮದ್ಯದ ಪಟ್ಟಿಯನ್ನು ಆಧರಿಸಿ 16 ಸ್ಲ್ಯಾಬ್ ಗಳ ಹೊರ ದರವನ್ನು ನಿಗಧಿ ಮಾಡಲಾಗಿದೆ ಎಂದು ತಿಳಿದುಬಂದಿದೆ.