ಸದ್ಯ ಕರ್ನಾಟಕ ರಾಜ್ಯ ಕಾಂಗ್ರೇಸ್ ಸರ್ಕಾರದಲ್ಲಿ ಸಿಎಂ-ಡಿಸಿಎಂ ಹುದ್ದೆಗಳ ಸುದ್ದಿ ಜೋರಾಗಿ ಚರ್ಚೆ ನಡೆಯುತ್ತಿದೆ. ಈ ವಿಚಾರದ ಬಗ್ಗೆ ಸಚಿವರು, ಶಾಸಕರು ತಮ್ಮದೇ ಆದ ಶೈಲಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹೇಳಿಕೆಗಳಿಗೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಚಿವರು ಹಾಗೂ ಶಾಸಕರು ಈ ಕುರಿತು ಹೇಳಿಕೆಗಳನ್ನು ನೀಡಬಾರದೆಂದು, ಪಕ್ಷದ ಹಿತದೃಷ್ಟಿಯಿಂದ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಈ ಕುರಿತು ಸಚಿವ ರಾಜಣ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಸಹಕಾರ ಸಚಿವ ರಾಜಣ್ಣ, ಡಿಕೆಶಿ ನೊಟೀಸ್ ಕೊಡಲಿ ಆಮೇಲೆ ನಾನು ಮಾತನಾಡುತ್ತೇನೆ. ಸಾರ್ವಜನಿಕವಾಗಿ ವಿವಾದ ಆಗಬಾರದೆಂದು ಅವರು ಆ ರೀತಿ ಹೇಳಿರಬಹುದು. ಅದಕ್ಕೆ ನಾನು ಒಪ್ಪುತ್ತೇನೆ, ಬೇರೆಯವರು ಸಹ ಒಪ್ಪಿಕೊಳ್ಳಬಹುದು. ನಾವು ಡಿಸಿಎಂ ಬಗ್ಗೆ ಹೇಳಿದರೇ ಏನು ತಪ್ಪು? ನಾವು ಕೇಳಬಾರದೇ, ನಾವು ಕೇಳಿದ್ದೆ ತಪ್ಪೇ? ಕೇಳಿದ್ದು ತಪ್ಪು ಎಂದಾದರೇ ಯಾವುದೇ ಕ್ರಮ ತೆಗೆದುಕೊಂಡರೂ ನಾನು ಎದುರಿಸೋಕೆ ಸಿದ್ದನಿದ್ದೇನೆ. ಡಿಕೆಶಿ ವಾರ್ನಿಂಗ್ ಗೆ ನಾನು ಕೇಳ್ತೀನಾ? ನಾನು ಣಾನೇ, ರಾಜಣ್ಣ ರಾಜಣ್ಣನೇ ನಾನು ಅಧಿಕಾರಕ್ಕೆ ಅಂಟಿಕೊಳ್ಳಲ್ಲ, ಬಾಯಿಗೆ ಬೀಗ ಹಾಕಿಕೊಳ್ಳಬೇಕು ಎಂದು ಹೇಳಿದ್ರೆ ಎಲ್ಲರೂ ಬಾಯಿಗೆ ಬೀಗ ಹಾಕಿಕೊಳ್ಳಬೇಕು. ನಮಗೆ ಹೇಳಿದ್ರೆ ನಾನು ಕೇಳುವನನಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಡಿ.ಕೆ.ಶಿವಕುಮಾರ್ ರವರನ್ನು ಸಿಎಂ ಮಾಡಿ ಎಂದು ಒಬ್ಬರು ಹೇಳಿದ್ದರೇ, ಅದನ್ನು ನಾವು ಕೇಳಿಕೊಂಡು ಸುಮ್ಮನೆ ಇರಬೇಕಾ? ಅವರು ಸಿದ್ದರಾಮಯ್ಯ ನವರನ್ನು ಸಿಎಂ ಮಾಡಿದ್ರಾ? ಸಿದ್ದರಾಮಯ್ಯನವರನ್ನು ಸಿಎಂ ಮಾಡಿರೋದು ಕಾಂಗ್ರೇಸ್ ಶಾಸಕರ ಅಭಿಪ್ರಾಯದಂತೆ ಹೈಕಮಾಂಡ್ ಮಾಡಿರೋದು. ಸಿಎಂ ಬದಲಾವಣೆ ಮಾಡೋದಿದ್ರೆ ಶಾಮನೂರು ಶಿವಶಂಕರಪ್ಪ ರವರನ್ನು ಸಿಎಮ ಮಾಡಿ ಅಂತಾ ಸ್ವಾಮೀಜಿಗಳು ಹೇಳ್ತಾರೆ. ನಮ್ಮ ಸಮುದಾಯದ ಸ್ವಾಮೀಜಿಗಳು ಸತೀಶ್ ಜಾರಕಿಹೊಳಿಯನ್ನು ಸಿಎಂ ಮಾಡಿ ಎಂದು ಹೇಳ್ತಾರೆ. ಸ್ವಾಮೀಜಿಗಳು ಹೇಳುವಂತೆ ಸಿಎಂಗಳನ್ನು ಮಾಡೋಕೆ ಆಗುತ್ತಾ, ಸ್ವಾಮೀಜಿ ಹೇಳಿರೋ ಹೇಳಿಕೆಗಳು ಹಿಂದುಳಿದ ವರ್ಗಗಳಿಗೆ ಮಾಡಿದ ಅವಮಾನ, ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ಒಕ್ಕಲಿಗ ಮಠದ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ದ ಕಿಡಿಕಾರಿದರು. ಈ ಹಿಂದೆ ಸ್ವಾಮೀಜಿಗಳು ಕಾವಿ ಬಿಟ್ಟು ಬರಲಿ, ನಾನು ಕಾವಿ ಧರಿಸಿಕೊಂಡು ಹೋಗುತ್ತೇನೆ. ಅವರ ಸ್ಥಾನ ಬಿಟ್ಟುಕೊಡ್ತಾರಾ ಎಂದು ಕೌಂಟರ್ ಕೊಟ್ಟಿದ್ದರು.