Saturday, August 30, 2025
HomeNationalಇಬ್ಬರು ಪತ್ನಿಯರಿರುವ ಪುರುಷನಿಗೆ 2 ಲಕ್ಷ ಗ್ರಾರಂಟಿ ಘೋಷಣೆ ಮಾಡಿದ ಕಾಂಗ್ರೇಸ್ ಅಭ್ಯರ್ಥಿ…!

ಇಬ್ಬರು ಪತ್ನಿಯರಿರುವ ಪುರುಷನಿಗೆ 2 ಲಕ್ಷ ಗ್ರಾರಂಟಿ ಘೋಷಣೆ ಮಾಡಿದ ಕಾಂಗ್ರೇಸ್ ಅಭ್ಯರ್ಥಿ…!

ಈಗಾಗಲೇ ದೇಶದಾದ್ಯಂತ ಲೋಕಸಭಾ ಚುನಾವಣೆ ಸದ್ದು ಜೋರಾಗಿದೆ. ತಮ್ಮ ಪಕ್ಷಗಳು ಕೇಂದ್ರದಲ್ಲಿ ಅಧಿಕಾರಕ್ಕೇರಲು ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಪಕ್ಷಗಳು ಅನೇಕ ಭರವಸೆಗಳನ್ನು ನೀಡುತ್ತಿದೆ. ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷಗಳು ಅನೇಕ ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಇದೀಗ ಕಾಂಗ್ರೇಸ್ ಅಭ್ಯರ್ಥಿಯೊಬ್ಬರು ಬಂಪರ್‍ ಗ್ಯಾರಂಟಿಯನ್ನು ಘೋಷಣೆ ಮಾಡಿದ್ದಾರೆ. ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದರೇ ಇಬ್ಬರು ಪತ್ನಿಯರಿರುವ ಪುರುಷರಿಗೆ 2 ಲಕ್ಷ ಸಿಗಲಿದೆ ಎಂದು ಭೂಪಾಲ್ ನ ಕಾಂಗ್ರೇಸ್ ಅಭ್ಯರ್ಥಿ ಕಾಂತಿಲಾಲ್ ಭುರಿಯಾ ಎಂಬುವವರು ತಿಳಿಸಿದ್ದಾರೆ.

kantilal bhuria 2 lakcs promise 1

ಕಾಂಗ್ರೇಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೇ ಮಹಾಲಕ್ಷ್ಮೀ ಯೋಜನೆ, ನಿರುದ್ಯೋಗ ಸೇರಿದಂತೆ ಹಲವು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಮಹಾಲಕ್ಷ್ಮೀ ಯೋಜನೆಯಡಿ ಪ್ರತಿ ಬಡ ಕುಟುಂಬಕ್ಕೆ ವರ್ಷಕ್ಕೆ ಒಂದು ಲಕ್ಷ ನೀಡುತ್ತದೆ. ಹಣವನ್ನು ನೇರವಾಗಿ ಕುಟುಂಬದ ಹಿರಿಯ ಮಹಿಳೆಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಿದೆ. ಇದೀಗ ಭೂಪಾಲ್ ನ ಕಾಂಗ್ರೇಸ್ ಅಭ್ಯರ್ಥಿ ಕಾಂತಿಲಾಲ್ ಭುರಿಯಾ ಎಂಬಾತ ಇಬ್ಬರು ಪತ್ನಿಯರು ಇರುವ ಪುರುಷರಿಗೆ 2 ಲಕ್ಷ ಸಿಗಲಿದೆ ಎಂದು ಹೇಳಿದ್ದಾರೆ.

ಇನ್ನೂ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಎಂಬುವವರು ಕಾಂತಿಲಾಲ್ ಭುರಿಯಾ ಅವರನ್ನು ಟೀಕೆ ಮಾಡಿದ್ದಾರೆ. ವೈಯುಕ್ತಿಕ ಕಾನೂನು ಹಾಗೂ ಬಹುಪತ್ನಿತ್ನ ಪದ್ದತಿಯನ್ನು ಒಪ್ಪುವಂತಹ ವ್ಯಕ್ತಿಗಳಿಗೆ ಪ್ರೋತ್ಸಾಹ ನೀಡುವ ಗುರಿಯನ್ನು ಕಾಂಗ್ರೇಸ್ ಪಕ್ಷ ಹೊಂದಿದೆ. ಕಾಂಗ್ರೇಸ್ ಪಕ್ಷದ ವಿಕೃತ ರೂಪಾಂತರವನ್ನು ಬಹಿರಂಗಪಡಿಸಿದ್ದಾರೆ. ಇದು ಮಹಿಳಾ ಸಮ್ಮಾನ್ ಅಲ್ಲ ಬದಲಿಗೆ ಮಹಿಳೆಯರನ್ನು ಒಂದು ವಸ್ತುವಿನಂತೆ ನೋಡುವುದಾಗಿದೆ. ಇದೊಂದು ತುಂಬಾ ಅಸಹ್ಯಕರವಾದ ಗ್ಯಾರಂಟಿ ಎಂದು ಕೌಂಟರ್‍ ಕೊಟ್ಟಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular