ಕಾನೂನು ರಕ್ಷಣೆ ಮಾಡಬೇಕಾದವರೇ ಲಗಾಮಿಲ್ಲದಂತೆ ವರ್ತಿಸಿದರೆ ಏನಾಗಬಹುದು? ಉತ್ತರ ಪ್ರದೇಶದ ಮೀರತ್‌ನಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಕಾರು ಚಾಲಕನ ಮೇಲೆ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

Video – ನಡೆದಿದ್ದೇನು? ಸಂಜೆ ಹೊತ್ತಿನ ಟ್ರಾಫಿಕ್ ಕಿರಿಕಿರಿ!
ವರದಿಗಳ ಪ್ರಕಾರ, ಭಾನುವಾರ ಸಂಜೆ ಸುಮಾರು 7 ಗಂಟೆಯ ಸುಮಾರಿಗೆ ಮೀರತ್‌ನ ಅತ್ಯಂತ ಜನನಿಬಿಡ ಪ್ರದೇಶವಾದ ಬಾಂಬೆ ಬಜಾರ್‌ನಲ್ಲಿ ಈ ಘಟನೆ ಸಂಭವಿಸಿದೆ. ಅಬು ಲೇನ್ ಬಳಿ ವಿಪರೀತ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ತನ್ನ ಹುಂಡೈ i20 ಕಾರಿನಲ್ಲಿ ಬರುತ್ತಿದ್ದ ಮಹಿಳಾ ಸಬ್ ಇನ್ಸ್‌ಪೆಕ್ಟರ್ ರತ್ನ ರಾಠಿ, ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದಕ್ಕೆ ತಾಳ್ಮೆ ಕಳೆದುಕೊಂಡಿದ್ದಾರೆ. ತನ್ನ ಮುಂದಿದ್ದ ಕಾರಿನ ಚಾಲಕನ ಮೇಲೆ ಕಿರುಚಾಡಲು ಶುರು ಮಾಡಿದ ಅವರು, ಕಾರಿನ ಒಳಗಿನಿಂದಲೇ ಕೆಟ್ಟ ಪದ ಬಳಸಿ ಬೈಯಲು ಆರಂಭಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
Video – ವಿಡಿಯೋದಲ್ಲಿ ಸೆರೆಯಾದ ಅಸಭ್ಯ ವರ್ತನೆ
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಸಬ್ ಇನ್ಸ್‌ಪೆಕ್ಟರ್ ರತ್ನ ರಾಠಿ ಅವರ ವರ್ತನೆ ಮಿತಿಮೀರಿದೆ. ಕಾರಿನಿಂದ ಇಳಿದು ಬಂದ ಅವರು, ಮುಂದಿದ್ದ ಕಾರಿನ ಬಾಗಿಲು ತೆರೆದು ಅದರಲ್ಲಿದ್ದವರನ್ನು ನಿಂದಿಸಿದ್ದಾರೆ. ಕಾರಿನಲ್ಲಿದ್ದ ಮಹಿಳೆಯೊಬ್ಬರು ಸಮಾಧಾನಪಡಿಸಲು ಪ್ರಯತ್ನಿಸಿದಾಗ, ಅವರಿಗೂ ಅವಾಚ್ಯವಾಗಿ ಬೈಯಲಾಗಿದೆ. ಅಷ್ಟೇ ಅಲ್ಲದೆ, ಚಾಲಕ ಕೆಳಗಿಳಿಯುತ್ತಿದ್ದಂತೆ ಆತನ ಮೇಲೆ ಹಲ್ಲೆಗೂ ಮುಂದಾಗಿದ್ದಾರೆ. ಈ ವೇಳೆ ಅವರು ಹೇಳಿದ “ನಾನು ದರೋಗಾ (ಸಬ್ ಇನ್ಸ್‌ಪೆಕ್ಟರ್), ಬಾಯಿಗೆ ಉಚ್ಚೆ ಹೊಯ್ತೀನಿ” ಎಂಬ ಮಾತು ಈಗ ಇಡೀ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತೆ ಮಾಡಿದೆ. ಬೆಲ್ಟ್‌ನಿಂದ ಹೊಡೆದು ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುವ ದೃಶ್ಯವೂ ಕ್ಯಾಮರಾದಲ್ಲಿ ಸೆರೆಯಾಗಿದೆ. Read this also : ಸುಮ್ಮನೆ ಹೋಗ್ತಿದ್ದ ಎತ್ತಿಗೆ ಕಲ್ಲು ಹೊಡೆದ ಅಜ್ಜ; ತಿರುಗಿ ಬಿದ್ದು ಅಟ್ಟಾಡಿಸಿದ ಎತ್ತು! ಮೈಜುಂ ಎನಿಸುವ ವಿಡಿಯೋ ವೈರಲ್
Video – ಯಾರು ಈ ಮಹಿಳಾ ಅಧಿಕಾರಿ?
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಮೀರತ್ ಪೊಲೀಸರು ತನಿಖೆ ನಡೆಸಿದ್ದಾರೆ. ಈಕೆ ಅಲಿಗಢದ ಮೌವಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರತ್ನ ರಾಠಿ ಎಂದು ಗುರುತಿಸಲಾಗಿದೆ. ಸಹರಾನ್‌ಪುರದಲ್ಲಿ ಕೋರ್ಟ್ ವಿಚಾರಣೆ ಮುಗಿಸಿ ಹಿಂದಿರುಗುವಾಗ ಬಾಂಬೆ ಬಜಾರ್‌ನಲ್ಲಿ ಶಾಪಿಂಗ್‌ಗಾಗಿ ನಿಂತಿದ್ದಾಗ ಈ ರಾದ್ಧಾಂತ ನಡೆದಿದೆ ಎಂದು ಎಸ್‌ಪಿ ಆಯುಷ್ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Video – ಮುಂದಿನ ಕ್ರಮವೇನು?
ಸದ್ಯಕ್ಕೆ ಈ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಆದರೆ, ಸಾರ್ವಜನಿಕವಾಗಿ ಇಂತಹ ಅಸಭ್ಯ ವರ್ತನೆ ತೋರಿದ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ. “ಯೂನಿಫಾರ್ಮ್ ಹಾಕಿಕೊಂಡ ಮಾತ್ರಕ್ಕೆ ಜನಸಾಮಾನ್ಯರ ಮೇಲೆ ದರ್ಪ ತೋರುವ ಅಧಿಕಾರ ಯಾರಿಗೂ ಇಲ್ಲ” ಎಂದು ಜನರು ಕಿಡಿ ಕಾರುತ್ತಿದ್ದಾರೆ.
