Meerut – ಪ್ರೀತಿ, ತ್ಯಾಗ, ಮತ್ತು… ‘ಬ್ಲೂ ಡ್ರಮ್’ ಭಯ! ಈ ಮೂರು ಅಂಶಗಳ ವಿಚಿತ್ರ ಸಮ್ಮಿಲನ ಉತ್ತರ ಪ್ರದೇಶದ ಮೀರತ್ ನಲ್ಲಿ ಪೊಲೀಸರನ್ನು ದೊಡ್ಡ ಗೊಂದಲಕ್ಕೆ ಸಿಲುಕಿಸಿದೆ. 15 ವರ್ಷಗಳ ದಾಂಪತ್ಯ, ಮೂವರು ಮಕ್ಕಳಿದ್ದರೂ, ಪತ್ನಿ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಾಳೆಂದು ತಿಳಿದ ಈ ಪತಿರಾಯ, ಅಕ್ಷರಶಃ ಪತ್ನಿ-ಪ್ರಿಯಕರನ ಮದುವೆ ಮಾಡಿಸಲು ಪೊಲೀಸರ ಬಳಿ ವಿಶೇಷ ಮನವಿಯೊಂದಿಗೆ ಬಂದಿದ್ದಾರೆ!

Meerut – ಪ್ರೀತಿ ಒಡೆದರೂ ಮಕ್ಕಳಿಗಾಗಿ ಮನಸ್ಸು ಗಟ್ಟಿ ಮಾಡಿದ ಪತಿ
ಮೀರತ್‌ನ 38 ವರ್ಷದ ಈ ವ್ಯಕ್ತಿ 13, 11 ಮತ್ತು 5 ವರ್ಷದ ಮಕ್ಕಳ ತಂದೆ. ಸಂಸಾರ ಸುಸೂತ್ರವಾಗಿ ಸಾಗುತ್ತಿರುವಾಗಲೇ, ತನ್ನ ಪತ್ನಿ ಗ್ರಾಮದ ಯುವಕನೊಂದಿಗೆ ಗಾಢ ಪ್ರೀತಿಯಲ್ಲಿದ್ದಾಳೆ ಎಂಬ ಸತ್ಯ ತಿಳಿದಿದೆ. ಹೃದಯ ಒಡೆದರೂ, ಮನಸ್ಸನ್ನು ಗಟ್ಟಿ ಮಾಡಿಕೊಂಡಿರುವ ಈ ಪತಿ, ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರನ ಮದುವೆ ಮಾಡಿಸಲು ಪೊಲೀಸರನ್ನು ಕೇಳಿಕೊಂಡಿದ್ದಾನೆ.
“ನನ್ನ ಪತ್ನಿ ಮತ್ತು ಆ ಯುವಕನಿಗೆ ಮದುವೆ ಮಾಡಿಸಿ. ಮೌಲ್ವಿಗಳು ಒಪ್ಪುತ್ತಿಲ್ಲ. ಈ ಪ್ರಕರಣವನ್ನು ನೀವು ಸುಖಾಂತ್ಯಗೊಳಿಸಬೇಕು,” ಎಂದು ಪೊಲೀಸರ ಮುಂದೆ ಅಂಗಲಾಚಿದ್ದಾನೆ. ಮದುವೆಗೆ ಪತ್ನಿ, ಆಕೆಯ ಪ್ರಿಯಕರ ಮತ್ತು ಮನೆಯವರೆಲ್ಲರೂ ಒಪ್ಪಿಗೆ ನೀಡಿದ್ದರೂ, ಈತ ನೇರವಾಗಿ ಪೊಲೀಸ್ ಠಾಣೆಗೆ ಬಂದಿದ್ದೇಕೆ? ಇದರ ಹಿಂದಿದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ‘ಬ್ಲೂ ಡ್ರಮ್’ ಹತ್ಯೆ ಪ್ರಕರಣದ ಭಯ!
Meerut – “ನಾನು ನೀಲಿ ಡ್ರಂ ಆಗಲಾರೆ!” – ಪೊಲೀಸರು ಕಂಗಾಲಾಗಿದ್ದು ಯಾಕೆ?
ಪೊಲೀಸರ ಮುಂದೆ ತನ್ನ ಮನವಿ ಇಟ್ಟ ಈ ವ್ಯಕ್ತಿ, ಮೀರತ್‌ನಲ್ಲಿ ಇತ್ತೀಚೆಗೆ ನಡೆದಿದ್ದ ಭೀಕರ ಘಟನೆಯನ್ನು ನೆನಪಿಸಿದ್ದಾನೆ. ಘಟನೆ ಏನು?: ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದು, ಆ ಶವವನ್ನು ನೀಲಿ ಬಣ್ಣದ ಡ್ರಮ್‌ನಲ್ಲಿ ಬಚ್ಚಿಟ್ಟಿದ್ದ ಪ್ರಕರಣ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು.
ಈ ಹಿನ್ನೆಲೆಯಲ್ಲಿ, “ನಾನು ನೀಲಿ ಡ್ರಂ ಆಗಲಾರೆ. ನನ್ನ ಮಕ್ಕಳಿಗಾಗಿ ನಾನು ಬದುಕಬೇಕು, ಅವರಿಗೆ ಉತ್ತಮ ಜೀವನ ನೀಡಬೇಕು. ಪ್ರೀತಿಯನ್ನು ಬಲವಂತ ಮಾಡಲು ಸಾಧ್ಯವಿಲ್ಲ. ಬಲವಂತ ಮಾಡಿದರೆ ನೀಲಿ ಡ್ರಂ ಆಗುತ್ತೇನೆ ಮತ್ತು ನನ್ನ ಮಕ್ಕಳು ಅನಾಥರಾಗುತ್ತಾರೆ,” ಎಂದು ಪತಿ ಕಣ್ಣೀರಾಗಿದ್ದಾನೆ. ಈ ಹೇಳಿಕೆ ಕೇಳಿದ ಪೊಲೀಸರು ಕಂಗಾಲಾಗಿದ್ದಾರೆ. ಒಂದು ಕಡೆ ಭಾವನಾತ್ಮಕ ಮತ್ತು ಅಸಾಮಾನ್ಯ ಮನವಿ, ಇನ್ನೊಂದು ಕಡೆ ಹತ್ಯೆಯ ಭೀತಿ. ಈ ಮನವಿಯಂತೆ ಕಾರ್ಯನಿರ್ವಹಿಸಬೇಕಾ, ಅಥವಾ ಕೇವಲ ಫೈಲ್‌ನಲ್ಲಿ ಇಡಬೇಕಾ ಎಂದು ಯೋಚಿಸುತ್ತಿದ್ದಾರೆ.

Meerut – ಪ್ರೀತಿಯೇ ನನ್ನ ಪ್ರಪಂಚ, ಆದರೆ ಈಗ ಮಕ್ಕಳ ಭವಿಷ್ಯ!
ಆರು ತಿಂಗಳ ಹಿಂದೆ ಕೆಲಸಕ್ಕೆ ಬಂದಿದ್ದ ಯುವಕನೊಂದಿಗೆ ಪತ್ನಿಗೆ ಪ್ರೀತಿ ಚಿಗುರಿದೆ. ಆಕೆಯನ್ನು ಮನವೊಲಿಸುವ ಎಲ್ಲ ಪ್ರಯತ್ನಗಳೂ ವ್ಯರ್ಥವಾಗಿವೆ. ಅಷ್ಟೇ ಅಲ್ಲ, ಮಕ್ಕಳೂ ಸಹ ತಾಯಿಯ ಇಚ್ಛೆಯಂತೆ ಇರಲಿ ಎಂದು ಹೇಳಿದ್ದಾರೆ. Read this also : “ಫೇಮಸ್ ಆಗ್ಬೇಕು” ಅಂತ ಸ್ಕೂಟರ್ ಮೇಲೆ ಸ್ಟಂಟ್ ಮಾಡಿದ್ರು… ಆದರೆ ಆಗಿದ್ದು ಬೇರೆ, ವಿಡಿಯೋ ನೋಡಿ..!
ಇವೆಲ್ಲದರ ಮಧ್ಯೆ ಮನಸ್ಸು ಕಲ್ಲಾಗಿಸಿಕೊಂಡಿರುವ ಪತಿ, “ಪ್ರೀತಿಯನ್ನು ಬಲವಂತ ಮಾಡಲು ಸಾಧ್ಯವಿಲ್ಲ. ನಾನು ಪತ್ನಿಯನ್ನು ಪ್ರೀತಿಸಿದ್ದೆ. ಆದರೆ ಈಗ ಅವಳು ಅವನನ್ನು ಪ್ರೀತಿಸುತ್ತಿದ್ದಾಳೆ. ನನ್ನ ಮೊದಲ ಆದ್ಯತೆ ಮಕ್ಕಳ ಭವಿಷ್ಯ. ನಾನು ಮತ್ತೆ ಮದುವೆಯಾಗುವುದಿಲ್ಲ. ನನ್ನ ಜೀವನದ ಏಕೈಕ ಉದ್ದೇಶ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವುದು” ಎಂದು ಪೊಲೀಸರಲ್ಲಿ ಕಣ್ಣೀರು ಹಾಕಿದ್ದಾನೆ.
