Tuesday, January 20, 2026
HomeStateVemana Jayanti 2026 : ಮಹಾಯೋಗಿ ವೇಮನರ ತತ್ವಗಳು ಸಮಾಜಕ್ಕೆ ದಾರಿದೀಪ : ಸಿಗ್ಬತ್ತುಲ್ಲಾ

Vemana Jayanti 2026 : ಮಹಾಯೋಗಿ ವೇಮನರ ತತ್ವಗಳು ಸಮಾಜಕ್ಕೆ ದಾರಿದೀಪ : ಸಿಗ್ಬತ್ತುಲ್ಲಾ

ಮಹಾಯೋಗಿ ವೇಮನರು ವಚನಗಳ ಮೂಲಕ ಸಮಾಜದ ಅಂಕು-ಡೊಂಕು ತಿದ್ದಿ ಸರಿ ದಾರಿಗೆ ತರಲು ಯತ್ನಿಸಿದರು. ವೇಮನರ ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ತಹಸೀಲ್ದಾರ್‍ ಸಿಗ್ಬತ್ತುಲ್ಲಾ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮಹಾ ಶಿವಯೋಗಿ ವೇಮನ ಜಯಂತಿ (Vemana Jayanti 2026) ಕಾರ್ಯಕ್ರಮದಲ್ಲಿ ಮಾತನಾಡಿದರು.

Mahayogi Vemana Jayanti celebration at Gudibande Taluk Office highlighting his message of social reform

Vemana Jayanti 2026 – ಮಹನೀಯರು ಯಾವುದೇ ಜಾತಿಗೆ ಸೀಮಿತವಲ್ಲ

ಜಯಂತಿ ಆಚರಣೆಗಳು ಜಾತಿಯ ಒಗ್ಗಟ್ಟು, ಜಾತಿಯ ಬಲ ಪ್ರದರ್ಶನವಲ್ಲ. ಮಹನೀಯರನ್ನು ಯಾವುದೇ ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ. ಮಹನೀಯರ ಸಂದೇಶ, ಬದುಕು, ವಿಚಾರಧಾರೆಗಳು ಇಡೀ ಮಾನವ ಸಂಕುಲಕ್ಕೆ ಸಂಬಂಧಪಟ್ಟಿವೆ. ವೇಮನರ ವಿಚಾರ ತಿಳಿದುಕೊಳ್ಳುವ ಮೂಲಕ ನಾವು ಮೌಲ್ಯಯುತ ಬದುಕು ರೂಢಿಸಿಕೊಳ್ಳಬೇಕು. ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡಾಗ ಮಾತ್ರ ನಾವು ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ಸಾಮಾಜಿಕ ಪರಿವರ್ತನೆಯ ಹರಿಕಾರ ವೇಮನ

ಬಳಿಕ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಆಗಮಿಸಿ ಮಾತನಾಡಿದ ನ್ಯೂ ವಿಷನ್ ಶಾಲೆಯ ಮುಖ್ಯಸ್ಥೆ ಡಿ.ಎಲ್.ಪರಿಮಳ, ಕವಿ ಮತ್ತು ದಾರ್ಶನಿಕರಾಗಿದ್ದ ವೇಮನ ಅವರು ಸಮಾಜದಲ್ಲಿನ ಮೌಢ್ಯ, ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ನಿರಂತರವಾಗಿ ಶ್ರಮಿಸಿದ್ದಾರೆ. ಸಮಾಜದಲ್ಲಿ ತಾವು ಕಂಡ ಸತ್ಯವನ್ನು ನೇರವಾಗಿ ಹಾಡಿನ ಭಾಷೆಯಲ್ಲಿ ಜನರಲ್ಲಿ ಅರಿವಿನ ಬೀಜ ಬಿತ್ತಿದರು. ತಮ್ಮ (Vemana Jayanti 2026) ತತ್ವಪದಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಮುಂದಾಗಿದ್ದರು. ವೇಮನರ ತತ್ವ, ಸಿದ್ಧಾಂತ ಸರ್ವ ಸಮುದಾಯಕ್ಕೂ ತಲುಪಬೇಕು. Read this also : ಅಮ್ಮನ ಪ್ರೀತಿ ಅಂದ್ರೆ ಇದೇ ಅಲ್ವಾ? ಮರಿಯಾನೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ತಾಯಿ ಆನೆ…!

ಸಾಮಾಜಿಕ ಸಮಸ್ಯೆ ಮತ್ತು ಪಿಡುಗುಗಳ ನಿವಾರಣೆಯಲ್ಲಿ ಹಲವಾರು ಶ್ರೇಷ್ಠ ದಾರ್ಶನಿಕರು, ಸಂತರು, ಶರಣರು ಬಹು ಮಹತ್ವದ ಪಾತ್ರವಹಿಸಿದ್ದು, ಅದರಲ್ಲಿ ವೇಮನರ ಕೊಡುಗೆ ಗಮನಾರ್ಹವಾಗಿದೆ. ಅವರ ಆಡುಭಾಷೆಯ ಪದ್ಯಗಳಲ್ಲಿನ ತತ್ವಗಳು ಮನಪರಿವರ್ತನೆಗೊಳಿಸುವ ಮಾರ್ಗದರ್ಶಿ ಸೂತ್ರಗಳನ್ನು ಹೊಂದಿವೆ. ಮುಂದಿನ ಮಾನವ ಪೀಳಿಗೆಗೆ ಅವರ ತತ್ವ ಸಿದ್ಧಾಂತಗಳನ್ನು ಪರಿಚಯಿಸಲು ಅವರ ಜಯಂತಿ ಆಚರಣೆ ಸಹಕಾರಿಯಾಗಿದೆ.

Mahayogi Vemana Jayanti celebration at Gudibande Taluk Office highlighting his message of social reform

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು

ಕಾರ್ಯಕ್ರಮದಲ್ಲಿ (Vemana Jayanti 2026) ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮುನಿಕೃಷ್ಣಪ್ಪ, ಸಿಡಿಪಿಒ ರಫೀಕ್, ಬಿಸಿಎಂ ಇಲಾಖೆಯ ಶಂಕರಪ್ಪ, ಸಮಾಜ ಕಲ್ಯಾಣ ಇಲಾಖೆಯ ಲಕ್ಷ್ಮೀಪತಿರೆಡ್ಡಿ, ಪಪಂ ಮುಖ್ಯಾಧಿಕಾರಿ ಆರತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹೆಚ್.ಮಂಜುನಾಥರೆಡ್ಡಿ, ಒಕ್ಕಲಿಕಗರ ಸಂಘದ ಮಂಜುನಾಥರೆಡ್ಡಿ, ವೇಣುಗೋಪಾಲ್, ಶಿವಣ್ಣ, ನಾರಾಯಣಸ್ವಾಮಿ ಸೇರಿದಂತೆ ಹಲವರಿದ್ದರು.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular