Maharashtra – ಮದುವೆ ಹೆಸರಿನಲ್ಲಿ ಬರೋಬ್ಬರಿ ಎಂಟು ಪುರುಷರನ್ನು ವಂಚಿಸಿ, ಲಕ್ಷಾಂತರ ರೂಪಾಯಿ ಹಣ ಸುಲಿಗೆ ಮಾಡಿದ್ದ ಮಹಿಳೆಯೊಬ್ಬರನ್ನು ಮಹಾರಾಷ್ಟ್ರದ ನಾಗ್ಪುರ ಪೊಲೀಸರು ಬಂಧಿಸಿದ್ದಾರೆ. 9ನೇ ಮದುವೆಯ ಮಾತುಕತೆಗಾಗಿ ಹೊರಟಿದ್ದಾಗ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Maharashtra – ಯಾರು ಈ ವಂಚಕಿ?
ಸಮೀರಾ ಫಾತಿಮಾ ಎಂಬ ಹೆಸರಿನ ಈ ಮಹಿಳೆ, ವಿದ್ಯಾವಂತಳಾಗಿದ್ದು ವೃತ್ತಿಯಲ್ಲಿ ಶಿಕ್ಷಕಿ ಎಂದು ಹೇಳಲಾಗಿದೆ. ಆದರೆ ಆಕೆ ಕಳೆದ 15 ವರ್ಷಗಳಿಂದ ಮದುವೆಯ ಹೆಸರಿನಲ್ಲಿ ಪುರುಷರನ್ನು ವಂಚಿಸುತ್ತಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಮುಖವಾಗಿ ಶ್ರೀಮಂತ ಮತ್ತು ವಿವಾಹಿತ ಮುಸ್ಲಿಂ ಪುರುಷರನ್ನು ತನ್ನ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದಳು.
Maharashtra – ವಂಚನೆಯ ಜಾಲ ಹೇಗೆ ಕೆಲಸ ಮಾಡುತ್ತಿತ್ತು?
ಆರೋಪಿ ಸಮೀರಾ ಫಾತಿಮಾ. ಆಕೆಯನ್ನು ನಾಗ್ಪುರದಲ್ಲಿ ಬಂಧಿಸಲಾಗಿದೆ. ಆಕೆಯ ಬಂಧನವಾಗಿದ್ದು, 9ನೇ ಮದುವೆಗೆ ಮಾತುಕತೆ ನಡೆಸಿ ಹೊರಟಿದ್ದಾಗ. ಪೊಲೀಸರು ಆಕೆಯನ್ನು ಹಿಡಿದು ವಿಚಾರಣೆ ಮಾಡಿದಾಗ ಈ ಆಘಾತಕಾರಿ ಸತ್ಯ ಬಯಲಾಗಿದೆ. ಸಮೀರಾ ಫಾತಿಮಾ ತನ್ನ ಪತಿಗಳನ್ನು ಬ್ಲ್ಯಾಕ್ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಇಷ್ಟೇ ಅಲ್ಲ, ಈಕೆ ಒಬ್ಬಂಟಿಯಲ್ಲ, ಈಕೆಯ ಜೊತೆ ಬೇರೆಯವರೂ ಸಹ ಈ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂದು ಹೇಳಲಾಗಿದೆ. Read this also : ವಧು ದಕ್ಷಿಣೆ ಕೊಟ್ಟು ಮದುವೆಯಾದ ರೈತ, ಮದುವೆಯಾದ ವಾರದಲ್ಲೇ ಬ್ರೋಕರ್ ಜೊತೆಗೆ ಪರಾರಿಯಾದ ಮದುಮಗಳು….!
Maharashtra – ಪೊಲೀಸರ ತನಿಖೆ ಚುರುಕು
ಈಕೆಯ ವಂಚನೆಯ ಜಾಲಕ್ಕೆ ಸಿಲುಕಿದ ಪುರುಷರಲ್ಲಿ ಒಬ್ಬರು ₹ 50 ಲಕ್ಷ ಹಾಗೂ ಮತ್ತೊಬ್ಬರು ₹ 15 ಲಕ್ಷ ಕಳೆದುಕೊಂಡಿದ್ದಾರೆ. ಈಕೆ ಹಣವನ್ನು ನೇರವಾಗಿ ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಸಮೀರಾ ಫಾತಿಮಾ ಅವರನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.