ಬದುಕು ಎಷ್ಟು ವಿಚಿತ್ರ ಅಲ್ವಾ? ಮರುಕ್ಷಣ ಏನಾಗುತ್ತದೆ ಎಂದು ಊಹಿಸಲೂ ಸಾಧ್ಯವಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಮಹಾರಾಷ್ಟ್ರದಲ್ಲಿ ಕರುಣಾಜನಕ ಘಟನೆಯೊಂದು ನಡೆದಿದೆ. ಇನ್ನೇನು ಹೊಸ ಜೀವನ ಶುರು ಮಾಡಬೇಕು, ನೂರಾರು ಕನಸುಗಳನ್ನು ನನಸು ಮಾಡಿಕೊಳ್ಳಬೇಕು ಎಂದುಕೊಂಡಿದ್ದ ವರ, ತಾಳಿ ಕಟ್ಟಿದ ಕೆಲವೇ ಕ್ಷಣಗಳಲ್ಲಿ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಈ ಸುದ್ದಿ ಕೇಳಿ ಇಡೀ ಊರೇ ಕಣ್ಣೀರು ಹಾಕುತ್ತಿದೆ.

Wedding Tragedy – ಸಂಭ್ರಮದ ಮದುವೆ, ಅಷ್ಟರಲ್ಲೇ ಅಘಾತ
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ವರುದ್ ತಾಲೂಕಿನ ಪುಸ್ಲಾ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಮೃತರನ್ನು 31 ವರ್ಷದ ಅಮೋಲ್ ಪ್ರಕಾಶ್ ಗಾಡ್‌ಬೋಲೆ ಎಂದು ಗುರುತಿಸಲಾಗಿದೆ. ಇವರು ರೆವಿನ್ಯೂ ಅಸಿಸ್ಟೆಂಟ್ (ಕಂದಾಯ ಸಹಾಯಕ) ಆಗಿ ಕೆಲಸ ಮಾಡುತ್ತಿದ್ದರು. ಮಂಗಳವಾರದಂದು ಪುಸ್ಲಾದ ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ಅಮೋಲ್ ಅವರ ಮದುವೆ, ನಾಗ್ಪುರ ಮೂಲದ ಯುವತಿಯೊಂದಿಗೆ ಬಹಳ ಅದ್ದೂರಿಯಾಗಿ ನೆರವೇರಿತು. ಬಂಧು-ಮಿತ್ರರು, ಊರವರು ಎಲ್ಲರೂ ಬಂದು ನವಜೋಡಿಗೆ ಹರಸಿ, ಸಂಭ್ರಮಿಸುತ್ತಿದ್ದರು. ಅಲ್ಲಿಯವರೆಗೂ ಎಲ್ಲವೂ ಸರಿಯಾಗಿಯೇ ಇತ್ತು.
Wedding Tragedy – ಧಿಡೀರ್ ಕುಸಿದು ಬಿದ್ದ ವರ
ಆದರೆ, ಈ ಸಂತೋಷ ಹೆಚ್ಚು ಹೊತ್ತು ಉಳಿಯಲಿಲ್ಲ. ಮದುವೆ ಮುಗಿದು ಇನ್ನೇನು ಹೊಸ ಜೀವನ ಆರಂಭಿಸಬೇಕು ಎನ್ನುವಷ್ಟರಲ್ಲಿ, ವರ ಅಮೋಲ್ ಅವರಿಗೆ ತೀವ್ರ ಅಸ್ವಸ್ಥತೆ ಉಂಟಾಗಿದೆ. ನೋಡನೋಡುತ್ತಿದ್ದಂತೆಯೇ ಮಂಟಪದಲ್ಲೇ ಅವರು ಕುಸಿದು ಬಿದ್ದಿದ್ದಾರೆ. ಇದನ್ನು ಕಂಡು ಗಾಬರಿಯಾದ ಕುಟುಂಬಸ್ಥರು ತಕ್ಷಣವೇ ಅವರನ್ನು ಪುಸ್ಲಾದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.

Wedding Tragedy – ವೈದ್ಯರು ಹೇಳಿದ್ದೇನು?
ದುರದೃಷ್ಟವಶಾತ್, ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದ ಕಾರಣ, ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಅಷ್ಟರಲ್ಲಾಗಲೇ ವಿಧಿ ತನ್ನ ಕೆಲಸ ಮುಗಿಸಿತ್ತು. ಅಮೋಲ್ ಅವರನ್ನು ಪರೀಕ್ಷಿಸಿದ ವೈದ್ಯರು, ಅವರು ತೀವ್ರ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. Read this also : ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ನಾಲೆಗೆ ಹಾರಿದ ಗೃಹಿಣಿ, ಡೆತ್ ನೋಟ್‌ನಲ್ಲಿ ಕಿರುಕುಳದ ವಿವರ, ಶಿವಮೊಗ್ಗದಲ್ಲಿ ನಡೆದ ಘಟನೆ…!
Wedding Tragedy – ಕಣ್ಣೀರು ಮುನ್ನೀರಾಧ ವಧು ಮತ್ತು ಕುಟುಂಬ
ವೈದ್ಯರ ಮಾತು ಕೇಳಿ ವಧು ಮತ್ತು ವರನ ಮನೆಯವರ ಕಾಲ ಕೆಳಗಿನ ಭೂಮಿಯೇ ಕುಸಿದಂತಾಗಿದೆ. ಕೆಲವೇ ಕ್ಷಣಗಳ ಹಿಂದೆ ನಗುನಗುತ್ತಾ ತಾಳಿ ಕಟ್ಟಿದ್ದ ಪತಿ, ಈಗ ಹೆಣವಾಗಿ ಮಲಗಿರುವುದನ್ನು ಕಂಡು ನವವಧುವಿನ ರೋದನೆ ಮುಗಿಲು ಮುಟ್ಟಿತ್ತು. ಮದುವೆಗೆ ಬಂದಿದ್ದ ಅತಿಥಿಗಳ ಕಣ್ಣಾಲಿಗಳೂ ತೇವವಾಗಿದ್ದವು. ಈ ಘಟನೆ ಪುಸ್ಲಾ ಗ್ರಾಮದಲ್ಲಿ ನೀರವ ಮೌನ ಮತ್ತು ತೀವ್ರ ವಿಷಾದವನ್ನು ಮೂಡಿಸಿದೆ.
