Viral Video – ಮಹಾರಾಷ್ಟ್ರದ ಸತಾರದಲ್ಲಿ ನಡೆದ ಘಟನೆಯೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕುಡಿದ ಅಮಲಿನಲ್ಲಿರುವ ಆಟೋ ಡ್ರೈವರ್ ಒಬ್ಬ ತನ್ನನ್ನು ತಪಾಸಣೆ ಮಾಡಲು ಬಂದ ಮಹಿಳಾ ಟ್ರಾಫಿಕ್ ಪೊಲೀಸ್ ಅನ್ನು ಸುಮಾರು 120 ಮೀಟರ್‌ಗಳಷ್ಟು ದೂರ ಎಳೆದುಕೊಂಡು ಹೋಗಿರುವ ಭಯಾನಕ ಘಟನೆ ಇದು. ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದ್ದು, ಚಾಲಕನ ವರ್ತನೆಗೆ ಆಕ್ರೋಷ ಸಹ ವ್ಯಕ್ತವಾಗುತ್ತಿದೆ.

Viral Video – ಘಟನೆ ವಿವರಣೆ: ಸತಾರದಲ್ಲಿ ನಡೆದದ್ದು ಏನು?
ಸೋಮವಾರ, ಆಗಸ್ಟ್ 18 ರಂದು, ಸತಾರ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದರು. ಈ ತಂಡದಲ್ಲಿ ಭಾಗ್ಯಶ್ರೀ ಜಾಧವ್ ಎಂಬ ಮಹಿಳಾ ಟ್ರಾಫಿಕ್ ಪೊಲೀಸ್ ಸಹ ಇದ್ದರು. ಇದೇ ವೇಳೆ, ಅಲ್ಲಿಗೆ ಬಂದ ಆಟೋವೊಂದನ್ನು ತಪಾಸಣೆ ಮಾಡಲು ಭಾಗ್ಯಶ್ರೀ ಪ್ರಯತ್ನಿಸಿದರು. ಆದರೆ, ಆಟೋ ಚಾಲಕ ದೇವರಾಜ್ ಕಾಳೆ ಕುಡಿದ ಅಮಲಿನಲ್ಲಿದ್ದ. ಪೊಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಕಟ್ಟಬೇಕಾಗುತ್ತದೆ ಎಂಬ ಭಯದಿಂದ ಆತ ಆಟೋ ನಿಲ್ಲಿಸದೆ ವೇಗವಾಗಿ ಓಡಿಸಲು ಪ್ರಯತ್ನಿಸಿದ್ದಾನೆ.
Read this also : ನಿಮಗೆ ಸಲಾಂ ಮೇಡಂ! ಲೇಡಿ ಟ್ರಾಫಿಕ್ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ….!
Viral Video – ಹೇಗೆ ಎಳೆದೊಯ್ದ?
ಕುಡಿದ ಚಾಲಕನಿಂದ ತಪ್ಪಿಸಿಕೊಳ್ಳುವ ಯತ್ನಕ್ಕೆ, ಟ್ರಾಫಿಕ್ ಪೊಲೀಸ್ ಭಾಗ್ಯಶ್ರೀ ಜಾಧವ್ ಆಟೋ ಮುಂದಕ್ಕೆ ಅಡ್ಡಲಾಗಿ ನಿಂತರು. ಆದರೆ ಆಟೋ ಡ್ರೈವರ್ ಯಾವುದನ್ನೂ ಲೆಕ್ಕಿಸದೆ, ಅವರನ್ನು ಡಿಕ್ಕಿ ಹೊಡೆದು ಸುಮಾರು 120 ಮೀಟರ್‌ಗಳಷ್ಟು ದೂರ ಎಳೆದುಕೊಂಡು ಹೋಗಿದ್ದಾನೆ. ಈ ಭೀಕರ ದೃಶ್ಯವನ್ನು ಕಂಡ ಸಾರ್ವಜನಿಕರು ತಕ್ಷಣವೇ ಆಟೋವನ್ನು ಬೆನ್ನಟ್ಟಿ, ಆಟೋ ಡ್ರೈವರ್ ಅನ್ನು ತಡೆದು ನಿಲ್ಲಿಸಿ ಹಿಗ್ಗಾಮುಗ್ಗಾ ಥಳಿಸಿದರು. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದರು. ಈ ಘಟನೆಯಲ್ಲಿ ಮಹಿಳಾ ಪೊಲೀಸ್ ಭಾಗ್ಯಶ್ರೀ ಜಾಧವ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Viral Video – ಘಟನೆಯ ನಂತರದ ಬೆಳವಣಿಗೆಗಳು ಮತ್ತು ಕಾನೂನು ಕ್ರಮ
ಈ ಘಟನೆಯ ಸಂಪೂರ್ಣ ದೃಶ್ಯಾವಳಿಗಳು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿ ವೈರಲ್ ಆಗಿವೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ. ಕುಡಿದು ವಾಹನ ಚಲಾಯಿಸುವುದರ ಅಪಾಯದ ಬಗ್ಗೆ ಈ ಘಟನೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ರಸ್ತೆ ಸುರಕ್ಷತೆ ಮತ್ತು ಕಾನೂನು ಪಾಲನೆಯ ಮಹತ್ವವನ್ನು ಇದು ಒತ್ತಿ ಹೇಳುತ್ತದೆ.
