ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ನೂರಾರು ವಿಡಿಯೋಗಳು ವೈರಲ್ ಆಗುತ್ತವೆ. ಆದರೆ ಮಧ್ಯಪ್ರದೇಶದ ರೇವಾದಲ್ಲಿ ನಡೆದ ಈ ಘಟನೆ ಮಾತ್ರ ನೋಡುವವರ ಎದೆ ನಡುಗಿಸುವಂತಿದೆ. ಲಂಚಕ್ಕಾಗಿ ಪೀಡಿಸುತ್ತಿದ್ದ ಬ್ರೋಕರ್ ಒಬ್ಬನಿಗೆ ಟ್ರಕ್ ಚಾಲಕ ಕಲಿಸಿದ ಪಾಠ ಈಗ ಇಡೀ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ.

Video – ಅಸಲಿಗೆ ನಡೆದಿದ್ದೇನು?
ಕಳೆದ ಶನಿವಾರ (ಡಿಸೆಂಬರ್ 20) ಮಧ್ಯಾಹ್ನ ಮಧ್ಯಪ್ರದೇಶದ ಹನುಮಾನ ಆರ್‌ಟಿಒ (RTO) ಚೆಕ್ ಪೋಸ್ಟ್ ಬಳಿ ಈ ಹೈಡ್ರಾಮಾ ನಡೆದಿದೆ. ಸುಮಿತ್ ಪಟೇಲ್ ಎಂಬ ಟ್ರಕ್ ಚಾಲಕ ತನ್ನ ಲಾರಿಯೊಂದಿಗೆ ಹೋಗುತ್ತಿದ್ದಾಗ, ಅಲ್ಲಿನ ರವಾನೆ ಬ್ರೋಕರ್ ಒಬ್ಬ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ದಾಖಲೆಗಳು ಸರಿಯಿದ್ದರೂ ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದ ಬ್ರೋಕರ್ ವರ್ತನೆಯಿಂದ ಚಾಲಕ ಸುಮಿತ್‌ಗೆ ಸಿಟ್ಟು ಬಂದಿದೆ.
ಹಣ ಕೊಡಲು ನಿರಾಕರಿಸಿದ ಸುಮಿತ್, ಲಾರಿಯನ್ನು ನಿಲ್ಲಿಸದೆ ಮುಂದೆ ಚಲಾಯಿಸಿದ್ದಾರೆ. ಈ ವೇಳೆ ಲಾರಿಯನ್ನು ತಡೆಯಲು ಹೋದ ಬ್ರೋಕರ್, ಚಲಿಸುತ್ತಿದ್ದ ಲಾರಿಯ ಮುಂಭಾಗವನ್ನೇ ಹತ್ತಿದ್ದಾನೆ. ಲಾರಿ ನಿಲ್ಲಿಸಬಹುದು ಎಂಬುದು ಅವನ ಲೆಕ್ಕಾಚಾರವಾಗಿತ್ತು. ಆದರೆ ಚಾಲಕ ಮಾತ್ರ ಕಿಂಚಿತ್ತೂ ತಗ್ಗದೆ ಸುಮಾರು 5 ಕಿಲೋಮೀಟರ್ ವರೆಗೆ ವೇಗವಾಗಿಯೇ ಲಾರಿ ಓಡಿಸಿದ್ದಾನೆ!
Video – “ಇನ್ನೆಂದೂ ಲಂಚ ಕೇಳಲ್ಲ.. ಪ್ರಾಣ ಉಳಿಸಿ”: ಬ್ರೋಕರ್ ಗೋಳಾಟ
ವೈರಲ್ ಆಗಿರುವ ವಿಡಿಯೋದಲ್ಲಿ ಬ್ರೋಕರ್ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ಜೀವ ಭಯದಲ್ಲಿ ಟ್ರಕ್‌ಗೆ ಜೋತುಬಿದ್ದಿದ್ದ ಬ್ರೋಕರ್, “ನನ್ನನ್ನು ಕೆಳಗಿಳಿಸಿ, ಇನ್ನೆಂದೂ ಹೀಗೆ ಮಾಡಲ್ಲ, ಕ್ಷಮಿಸಿಬಿಡಿ” ಎಂದು ಚಾಲಕನ ಕಾಲು ಹಿಡಿದು ಬೇಡಿಕೊಂಡಿದ್ದಾನೆ. ಲಾರಿ ವೇಗವಾಗಿ ಹೋಗುತ್ತಿದ್ದರಿಂದ ಒಂದು ಸಣ್ಣ ತಪ್ಪಾದರೂ ಆತನ ಪ್ರಾಣ ಹಾರಿಹೋಗುತ್ತಿತ್ತು. ಕೊನೆಗೆ ಬ್ರೋಕರ್ ತನ್ನ ತಪ್ಪನ್ನು ಒಪ್ಪಿಕೊಂಡು, ಇನ್ಮುಂದೆ ಡ್ರೈವರ್‌ಗಳಿಗೆ ತೊಂದರೆ ಕೊಡಲ್ಲ ಎಂದು ಭರವಸೆ ನೀಡಿದ ಮೇಲೆಯೇ ಸುಮಿತ್ ಲಾರಿ ನಿಲ್ಲಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Video – ಡ್ರೈವರ್ ಆಕ್ರೋಶಕ್ಕೆ ಕಾರಣವೇನು?
ಘಟನೆಯ ನಂತರ ಮಾತನಾಡಿದ ಚಾಲಕ ಸುಮಿತ್ ಪಟೇಲ್, “ಪ್ರತಿದಿನ ಈ ಬ್ರೋಕರ್‌ಗಳು ಚೆಕ್ ಪೋಸ್ಟ್‌ನಲ್ಲಿ ಅಕ್ರಮವಾಗಿ ಹಣ ವಸೂಲಿ ಮಾಡುತ್ತಾರೆ. ಸರಿಯಾದ ದಾಖಲೆಗಳಿದ್ದರೂ ಗಾಡಿ ಬಿಡದೆ ಕಿರುಕುಳ ನೀಡುತ್ತಾರೆ. ಇವರ ಕಾಟದಿಂದ ಬೇಸತ್ತು ಇಂದು ನಾನು ಈ ನಿರ್ಧಾರ ಮಾಡಬೇಕಾಯಿತು” ಎಂದು ತನ್ನ ಅಳಲು ತೋಡಿಕೊಂಡಿದ್ದಾರೆ. Read this also : ರೀಲ್ಸ್ (Reel) ಹುಚ್ಚಿಗೆ ಮಿತಿಯೇ ಇಲ್ವಾ? ಓಡೋ ಟ್ರೈನ್ ಅನ್ನೇ ಅಡ್ಡಗಟ್ಟಿ ನಿಲ್ಲಿಸಿದ್ರು ಈ ಕಿಲಾಡಿ ಹುಡುಗರು…!

Video – ನೆಟ್ಟಿಗರ ವಾದ-ಪ್ರತಿವಾದ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಇಂಟರ್ನೆಟ್‌ನಲ್ಲಿ ದೊಡ್ಡ ಚರ್ಚೆಯೇ ಶುರುವಾಗಿದೆ “ಲಂಚ ಕೇಳುವವರಿಗೆ ಇಂತಹ ಪಾಠ ಆಗಲೇಬೇಕು. ಡ್ರೈವರ್ ಮಾಡಿದ ಕೆಲಸ ಸರಿ ಇದೆ” ಎಂದು ಕೆಲವರು ಬೆಂಬಲಿಸುತ್ತಿದ್ದಾರೆ. ಮತ್ತೆ ಕೆಲವರು ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಸರಿ, ಆದರೆ ಆತ ಕೆಳಗೆ ಬಿದ್ದು ಪ್ರಾಣ ಹೋಗಿದ್ದರೆ ಅದಕ್ಕೆ ಹೊಣೆ ಯಾರು? ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
